ಕಲ್ಲಡ್ಕ: ಪುತ್ತೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಶಿಶುವರ್ಗ(1-5) ಹಾಗೂ ಬಾಲವರ್ಗ(6-8) ಸೇರಿ ಪ್ರಥಮ 10, ದ್ವಿತೀಯ 5 ಹಾಗೂ ತೃತೀಯ 6 ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

ಇದರೊಂದಿಗೆ ಇದೇ ತಿಂಗಳ 28,29,30ರಂದು ಬೆಂಗಳೂರಿನ ಜಯದೇವ ಗರೋಡಿಯ ರಾಷ್ಟ್ರೋತ್ಥಾನ ಶಾಲೆಯಲ್ಲಿ ನಡೆಯುವ ಪ್ರಾಂತಮಟ್ಟದ ಜ್ಞಾನ ವಿಜ್ಞಾನ ಮೇಳ ಸ್ಪರ್ಧೆಯಲ್ಲಿ ವಿಜ್ಞಾನ ಪ್ರಯೋಗ-7ನೇ ತರಗತಿಯ ಶ್ರಮಿಕ, ವಿಜ್ಞಾನ ಮಾದರಿ-7ನೇ ತರಗತಿಯ ಕುಶಿ ಮತ್ತು ಅನಘ, ಗಣಿತ ಮಾದರಿ- 7ನೇ ತರಗತಿಯ ಚೇತನಾ, ಕಥಾಕಥನ- 6ನೇ ತರಗತಿಯ ವಾಸವಿ, ಸಂಸ್ಕೃತಿ ಜ್ಞಾನ ರಸಪ್ರಶ್ನೆ- 7ನೇ ತರಗತಿಯ ದೀಕ್ಷಿತ್, ಶ್ರೀನಿವಾಸ, ಭೂಷಣ್, ವೇದಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ 7ನೇ ತರಗತಿಯ ಚಿನ್ಮಯಿ, ಆಶಿಕಾ, ವಾಸವಿ, ಇವರು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರತಿನಿಧಿಸಲಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here