ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ೨೦ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ವೇದಮೂರ್ತಿ ನಯನಕೃಷ್ಣ ಭಟ್ ಜಾಲ್ಸೂರು ಅವರ ವೈದಿಕತ್ವದಲ್ಲಿ ಭಾನುವಾರ ಆರಂಭಗೊಂಡಿತು.
ಸೆ.29ರಂದು ದ್ವಾದಶ ನಾಳಿಕೇರ ಅಷ್ಟದ್ರವ್ಯದಿಂದ ಮಹಾಗಣಪತಿ ಹೋಮ, ಶರನ್ನವರಾತ್ರಿ ಪೂಜೆ, ಗೋನಿವಾಸ, ನಾಗದೇವರಿಗೆ ಅಭಿಷೇಕ, ಭಜನೆ, ಚಂಡಿಕಾ ಯಾಗ ನಡೆದ ಬಳಿಕ ಕೊಪ್ಪರಿಗೆ ಮುಹೂರ್ತ ನೆರೆವೇರಿತು.
ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ದಾಮೋದರ ಬಿ.ಎಂ, ಮಾರ್ನಬೈಲು, ಉಮೇಶ್ ಪಿ.ಕೆ ನಾಗಲಚ್ಚಿಲು, ತಾರಾನಾಥ ಕೊಟ್ಟಾರಿ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಶ್ರೀಧಾಮ ಶ್ರೀ ಮಹಾಲಕ್ಷ್ಮಿ ಮಹಿಳಾ ಸೇವಾ ಸಮಿತಿ, ಶ್ರೀಧಾಮ ಮಿತ್ರವೃಂದದವರು ಉಪಸ್ಥಿತರಿದ್ದರು.