ಬಂಟ್ವಾಳ ಕುಲಾಲ ಕುಂಬಾರ ಯುವವೇದಿಕೆ ಮತ್ತು ಕುಲಾಲ ಮಹಿಳಾ ಸಂಘದ ವತಿಯಿಂದ ಕೆಸರ್ದ ಕಂಡೊಡ್ ಕುಸೇಲ್ದ ಗೊಬ್ಬು ಎಸಲ್ ಮೂಜಿ ವಿಶೇಷ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಕೊರಗಪ್ಪ ಮೂಲ್ಯ ಉದ್ಘಾಟಿಸಿದರು.
ಸಮಾಜದ ಸರ್ವಾಂಗೀಣ ಅಭಿವೃದ್ಧಿ ಗೆ ಯುವವೇದಿಕೆ ಪ್ರಯತ್ನ ಮಾಡುತ್ತಿರುವುದು ಉತ್ತಮ ಬೆಳವಣಿಗೆ.
ಕ್ರೀಡೆ, ಕೃಷಿ ಮುಂತಾದ ಸಾಮಾಜಿಕ ಚಟುವಟಿಕೆ ಯ ಮೂಲಕ ಕುಲಾಲರನ್ನು ಒಗ್ಗೂಡಿಸಿ ಸಂಘಟಿಸುವ ಜೊತೆಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.
ಸಮಾಜದ ವಿಶೇಷ ಸಾಧಕರನ್ಬು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಇನ್ನಷ್ಟು ಸಾಧಕರಿಗೆ ಪ್ರೇರಣೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ವೇದಿಕೆ ಸಂಪೂರ್ಣ ವಾಗಿ ಕುಂಬಾರಿಕೆ ಮಾಡುವ ಕುಂಬಾರನ ಮನೆಯಂತೆ ಅಲಂಕರಿಸಲಾಗಿತ್ತು.

ಹಳ್ಳಿಯ ಮನೆ , ಮನೆಯ ತುಂಬಾ ನೇತು ಹಾಕಿರುವ ತರಕಾರಿಗಳು, ಒಂದು ಕಡೆ ಕ್ರಷಿಗೆ ಉಪಯೋಗಿಸುವ ನೇಗಿಲು, ಒನಕೆ, ಪಡಿ, ಕಳಸ, ಸೇರು, ಪಾವುಹೀಗೆ ಹಲವು ವಿಶೇಷಗಳು ಇಲ್ಲಿ ಕಂಡು ಬಂತು.
ಮನೆಯ ಯಜಮಾನ ಗದ್ದೆಯಿಂದ
ಬೆಳೆದ ಹೊಸ ತೆನೆಯನ್ನು ಕೊಯ್ದು ಅದನ್ನು ಸಾಂಪ್ರದಾಯಿಕವಾಗಿ ಮನೆಯೊಳಗೆ ತರುವ ಮನೆತುಂಬಿಸುವ ಸುಂದರ ದೃಶ್ಯ ಹೀಗೆ ಹಳ್ಳಿಯ ಬದುಕಿನ ಸ್ವಾರಸ್ಯವನ್ನು ಮತ್ತೆ ನೆನಪಿಸುವ
ಕಾರ್ಯಕ್ರಮ ಎಲ್ಲರಿಗೂ ಸಂತಸ ತಂದಿತು.
ಉದ್ಘಾಟನೆಯ ಮೊದಲು ಮಹಿಳೆಯರಿಂದ ತುಳಸಿ ಪೂಜೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕುಲಾಲ ಯುವ ವೇದಿಕೆ ಬಂಟ್ವಾಳ ಇದರ ಅಧ್ಯಕ್ಷ
ಸುಕುಮಾರ್ ಬಂಟ್ವಾಳ್ ವಹಿಸಿದ್ದರು.

ರಾಜ್ಯ ಕರಾವಳಿ ಕುಲಾಲ ಕುಂಬಾರರ ಯುವವೇದಿಕೆಯ ಸ್ಥಾಪಕಾಧ್ಯಕ್ಷ
ಅಣ್ಣಯ್ಯ ಕುಲಾಲ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ವೇದಿಕೆಯಲ್ಲಿ
ಸುದಾಕರ್ ಕುಲಾಲ್,
ಕ್ರೀಡಾಕಾರ್ಯದರ್ಶಿ ಕಾರ್ತಿಕ್ ಮಯ್ಯರಬೈಲ್ ಪ್ರಮುಖರಾದ
ಕ್ರಷ್ಣಪ್ಪ ಬಿ, ಜಯಂತಿ ಗಂಗಾದರ್, ಭಾರತಿ ಸೇಸಪ್ಪ,
ಹರಿಪ್ರಸಾದ್ , ಮಾದವ ಬಿಸಿರೋಡ್, ಸತೀಶ್ ಜಕ್ರಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಕವಿರಾಜ್, ಕಿಶೋರ್ ಮೊಂಡಕಾಪು, ಸಂದೀಪ್ ಮಯ್ಯರಬೈಲು, ಕಿಶೋರ್ ಬಂಗೇರ ಏರ್ಯ ಅಮ್ಟಾಡಿ, ರಾಧಾಕೃಷ್ಣ ಮರ್ತಾಜೆ, ದಿನೇಶ್, ಡೊಂಬಯ್ಯ ಭಂಡಾರಿಬೆಟ್ಟು, ಉಮೇಶ್ ಮೂಲ್ಯ, ಹರೀಶ್ ಕುಲಾಲ್ ಕಲ್ಲಡ್ಕ, ಅಶೋಕ್ ವಗ್ಗ, ಅಶೋಕ್ ಭಂಡಾರಿಬೆಟ್ಟು, ಪುರುಷೋತ್ತಮ, ಕಿಶೋರ್ ಬಸ್ತಿ ಪಡ್ಪು , ಸೋಮಯ್ಯ ಕುಲಾಲ್, ಮಾದವ ಕುಲಾಲ್, ಪುನೀತ್ ಕುಲಾಲ್ ಮುಂತಾದವರು ಕಾರ್ಯಕ್ರಮ ಕ್ಕೆ ಸಹಕಾರ ನೀಡಿದರು.
ಕಾರ್ಯಕ್ರಮ ದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹೊನ್ನಯ್ಯ ಕಾಟಿಪಳ್ಳ, ವಸಂತ ಕುಮಾರ್, ದಿವಾಕರ ಮಯ್ಯರಬೈಲು, ಪೂವಮ್ಮ ದೈಪಲ ಅವರನ್ನು ಸನ್ಮಾನಿಸಲಾಯಿತು.

ನಾರಾಯಣ ಪೆರ್ನೆ ಸ್ವಾಗತಿಸಿ ,
ಸೇಸಪ್ಪಮಾಸ್ಟರ್ ಪ್ರಾಸ್ತಾವಿಕ ಭಾಷಣ ಮಾಡಿದರು.
ರಂಗ ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ದ ಬಳಿಕ ವಿವಿಧ ರೀತಿಯ ಆಟೋಟ ಸ್ಪರ್ಧೆ ಗಳು ಕೆಸರಿನ ಗದ್ದೆಯಲ್ಲಿ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here