ಅವಕಾಶ ಮಾಡಿ ಕೊಟ್ಟಿತ್ತು
ಕೊನೆಗೂ ಸರಕಾರ
ಪ್ರತಿಯೊಬ್ಬನಿಗೂ
ಶಸ್ತ್ರಾಸ್ತ್ರ ಖರೀದಿಗೆ..!
ಯಾರಿಗಿಲ್ಲ ಹೇಳಿ
ವೈರಿಗಳು
ನನಗೂ ಇದ್ದರೂ..!
ಅವರು ಇವರು ಪಕ್ಕದಮನೆಯವರು
ಏನೇನೋ ಅಸ್ತ್ರಗಳನ್ನು ಖರೀದಿಸಿದ್ದರು..
ಅದಕ್ಕಾಗಿಯೇ ನಾನು ಖರೀದಿಸಿದ್ದು..
ಅವನದು ಕಬ್ಬಿಣದ ಗೇಟ್
ನನ್ನದು ಲೇಸರ್ ಗೇಟ್
ಅವನದು ಸಾಮಾನ್ಯ ಗನ್ ,
ನನ್ನದು ಏ.ಕೆ ಫಾರ್ಟಿಸವೆನ್.
ಅವನಿಗೆ ಸಾಮಾನ್ಯ ರಾಕೆಟ್,
ನಮ್ಮನೆಗೆ ಅಟೋಮೆಟಿಕ್ ರಾಕೆಟ್.
ಊರ ಬಲಿಷ್ಠ ವ್ಯಕ್ತಿಗಳ
ಮನೆಯಲ್ಲಿರುವ ಅಸ್ತ್ರ ನಮ್ಮನೆಯಲ್ಲೂ ಇರಬೇಕು.
ಅವರೆಲ್ಲರಿಗಿಂತ ನಾ ಬಲಿಷ್ಠನಾಗಿರಬೇಕು.
ಶತ್ರು ಗಡ ಗಡ ನಡುಗಬೇಕು.
ನಾ ಎದೆ ಉಬ್ಬಿಸಿ ನಡೆಯಬೇಕು..
ಶಸ್ತ್ರಕ್ಕೊಂದು ಶಸ್ತ್ರ ಹುಟ್ಟುತ್ತಿರಬೇಕು..!
ಉದ್ದೇಶಗಳಿಷ್ಟೇ..!?
ನಾ ಗೆಲ್ಲಬೇಕು,
ಗೆದ್ದು ಬೀಗಬೇಕು
ಎಲ್ಲರೂ ನನ್ನ
ಕೈಯ್ಯೊಳಗಿರಬೇಕು.
ಶತ್ರು ಸಾಯಬೇಕು..!
ನಾವು ಅದೆಷ್ಟೋ ಯುದ್ಧ ಈಗಾಗಲೇ ಮಾಡಿದ್ದೇವೆ,
ಆದರೆ..,
ಯಾವತ್ತೂ ನಾನಾಗಲಿ ಅವನಾಗಲಿ
ಗೆಲ್ಲುವ ಪ್ರಯತ್ನ ಮಾಡಲೇ ಇಲ್ಲ..!
ಶತ್ರುತ್ವ ಕಡಿಮೆಯಾಗಲು ಇಲ್ಲ
ಗೆಲುವೆಂದರೆ ಶತ್ರುವಿನ
ನಾಶವಲ್ಲ..!?
ಬುದ್ಧ ಅಂಗುಲಿಮಾಲನ ಗೆದ್ದದ್ದು
ನಿಜವಾದ ಗೆಲುವು..!
yathish
✍ಯತೀಶ್ ಕಾಮಾಜೆ