ಬಂಟ್ವಾಳ: ಶ್ರೀರಾಮ ಪದವಿ ಕಾಲೇಜಿನ ಪ್ರಭಾಸ ಮಾನವಿಕ ಸಂಘದ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಹೇಗೆ? ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರವು ಪ್ರೇರಣಾ ಸಭಾಭವನದಲ್ಲಿ ನಡೆಯಿತು.
ಈ ಮಾಹಿತಿಯನ್ನು ದೆಹೆಲಿಯ ಗಿವ್ ಅಂಡ್ ಫಸ್ಟ್ ರೌಂಡ್ ಟ್ರೈನಿಂಗ್ ಸರ್ವಿಸ್ನ ಫೌಂಡರ್ ಮತ್ತು ಸಿ.ಇ.ಒ ಶ್ರೀನಾಥ್ ಸೇತುರಾಮನ್ ಅವರು ಸರಕಾರಿ ಹುದ್ದೆಗಳಾದ ಕೆಪಿಎಸ್ಸಿ, ಯುಪಿಎಸ್ಸಿ, ರೈಲ್ವೆಪರೀಕ್ಷೆ, ಪಿಡಿಒ, ಬ್ಯಾಂಕಿಂಗ್ ಪರೀಕ್ಷೆಗಳಿಗೆ ಬೇಕಾದ ಪ್ರಚಲಿತ ಘಟನೆ, ಅರ್ಹತಾ ಪರೀಕ್ಷೆಗಳ ತಯಾರಿ ಮತ್ತು ಸರಳ ವಿಧಾನದಲ್ಲಿ ಮಾಹಿತಿ ಸಂಗ್ರಹ, ಜ್ಞಾನ ಕಲೆಹಾಕುವುದು ಹೇಗೆ ಎಂಬುದನ್ನು ತಿಳಿಸಿದರು. ಪದವಿಯ ೨೦೦ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಮಧುಸೂಧನ್ ತುಮಕೂರು, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ದುರ್ಗಾಶ್ರೀ ದ್ವಿತೀಯ ಬಿ.ಎ ಸ್ವಾಗತಿಸಿ, ನವ್ಯಶ್ರೀ ಪ್ರಥಮ ಬಿ.ಎ ವಂದಿಸಿದರು. ಕಾರ್ಯಕ್ರಮವನ್ನು ಮಲ್ಲಿಕಾ ತೃತೀಯ ಬಿ.ಎ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here