ಬಂಟ್ವಾಳ:ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ ಹಾಗೂ ವೆಸ್ಟರ್ನ್ ಸಂಸ್ಥೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀರಾಮ ವಿದ್ಯಾಕೇಂದ್ರ ಕೇಂದ್ರ ಕಲ್ಲಡ್ಕ ದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಒಟ್ಟು 63 ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಗೌರವ ಕಾರ್ಯಕ್ರಮ ಬಿಸಿರೋಡು ಪೋಲೀಸ್ ಲೇನ್ ಶ್ರೀ ಅನ್ನಪೂರ್ಣೇಶ್ವರಿ ದೇವಿದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.


ಕಾನ್ ರ್ಯೂ ಆರ್.ವಿ.ಟೈಗರ್ ಸ್ಪೋರ್ಟ್ಸ್ ಕರಾಟೆ ಕರ್ನಾಟಕ ಸಂಸ್ಥೆಯ ಸಹ ತರಬೇತಿ ಕೇಂದ್ರ ವಾದ ಬಿಸಿರೋಡಿನ ಅನ್ನಪೂರ್ಣೇಶ್ವರಿ ಕರಾಟೆ ಟ್ರೈನಿಂಗ್ ಸೆಂಟರ್ ನ 63 ವಿದ್ಯಾರ್ಥಿಗಳು ಭಾಗವಹಸಿ ವಿವಿಧ ವಿಭಾಗದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಈ 63 ವಿದ್ಯಾರ್ಥಿ ಗಳಿಗೆ ಕರಾಟೆಯ ರಾಷ್ಟ್ರೀಯ ತೀರ್ಪುಗಾರರಾದ ಶಿಹಾನ್ ವಸಂತ್ ಕೆ.ಬಂಗೇರ ಪಾರೆಂಕಿ ತರಬೇತಿ ನೀಡಿದ್ದಾರೆ.
ಅಭಿನಂದನೆ ಸಲ್ಲಿಸಿದ ಬಳಿಕ ಮಾತನಾಡಿದ
ಉದ್ಯಮಿ
ನಾಗೇಂದ್ರ ಬಾಳಿಗಾ ಅವರು ಭಾರತೀಯ ಕ್ರೀಡೆಯಾಗಲಿ ಪಾಶ್ಚಾತ್ಯ ಕ್ರೀಡೆಯಾಗಲಿ ಅದರಲ್ಲಿ ಮುಖ್ಯ ವಾಗಿ ಬೇಕಾಗಿರುವುದು ಮಾನಸಿಕ ಸದೃಡತೆ, ದೈರ್ಯ, ಶೃದ್ದೆ, ಏಕಾಗ್ರತೆ , ಕಲಿಯುವ ಹುಮ್ಮಸ್ಸು ಅತೀ ಅಗತ್ಯವಾಗಿ ಬೇಕಾಗಿದೆ.
ಕ್ರೀಡೆಯ ಜೊತೆ ನಿತ್ಯ ದ ದಿನಚರಿ ಸರಿಯಾಗಿರಬೇಕು.‌
ಕ್ರೀಡಾ ಪಟುಗಳು
ಆರೋಗ್ಯವನ್ನು ಕಾಪಾಡುವುದು ಬಹಳ ಪ್ರಾಮುಖ್ಯ, ಹಿತವಾದ ಮಿತವಾದ ಆಹಾರವನ್ನು ಕ್ಲಪ್ತ ಸಮಯದಲ್ಲಿ ಸರಿಯಾಗಿ ಪಡೆಯುವುದು ಅಷ್ಟೇ ಪ್ರಮುಖ. ವ್ಯಾಯಾಮದಿಂದ ಪ್ರತಿಯೊಬ್ಬರ ಆರೋಗ್ಯ ಕಾಪಾಡಬಹುದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನ ದ ಆಡಳಿತ ಮೋಕ್ತೇಸರ ಸೇಸಪ್ಪ ಕೋಟ್ಯಾನ್, ಉದ್ಯಮಿ ಸಂದೀಪ್ ಬಂಟ್ವಾಳ, ಉದ್ಯಮಿ ಹೇಮಂತ್ ಹಾಗೂ ಪೋಷಕರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here