Friday, October 27, 2023

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್: ಬೆಳ್ತಂಗಡಿ ತಾ. ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ

Must read

ಪುಂಜಾಲಕಟ್ಟೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಽಕಾರಿಗಳ ಕಛೇರಿ ಬೆಳ್ತಂಗಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ 2019-20 ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶುಕ್ರವಾರ ಜರಗಿತು.
ಜಿ.ಪಂ.ಸದಸ್ಯೆ ಮಮತಾ ಎಂ. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸಿದಾಗ ಪ್ರತಿಭೆಯ ಮತ್ತಷ್ಟು ವಿಕಸನವಾಗುತ್ತದೆ. ಶಿಕ್ಷಣ ಜತೆಗೆ ಪ್ರತಿಭೆಗಳ ಬೆಳವಣಿಗೆಗೆ ಅವಕಾಶ ನೀಡಬೇಕು. ಪೋಷಕರ, ಶಿಕ್ಷಕರ ಪ್ರೋತ್ಸಾಹ ದೊರೆತಾಗ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗುತ್ತದೆ ಎಂದು ಹೇಳಿದರು.
ಸರಕಾರಿ ಶಾಲೆಯಾದರೂ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಸಂಘಟಿಸಿದ ತಾಲೂಕಿನ ಏಕೈಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾದರಿಯಾಗಿದೆ ಎಂದರು.
ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹಲವಾರು ಪ್ರತಿಭೆಗಳಿದ್ದು, ಇದನ್ನು ಗುರುತಿಸುವ ಕಾರ್ಯ ನಿರಂತರ ನಡೆಯಬೇಕು ಎಂದರು.
ಮಡಂತ್ಯಾರು ತಾಪಂ.ಸದಸ್ಯೆ ವಸಂತಿ ಲಕ್ಷ್ಮಣ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಸ್ಪರ್ಧೆಗಳಿಂದ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತದೆ ಎಂದರು.
ಮಾಲಾಡಿ ತಾ.ಪಂ.ಸದಸ್ಯ ಜೋಯೆಲ್ ಮೆಂಡೊನ್ಸಾ ಅವರು ಮಾತನಾಡಿ,ಪ್ರತೀ ಮಗುವಿನಲ್ಲೂ ಪ್ರತಿಭೆ ಇದೆ. ಭಾಗವಹಿಸುವಿಕೆಯಿಂದ ಪ್ರತಿಭೆಯ ಅನಾವರಣವಾಗುತ್ತದೆ ಎಂದರು.
ಕಳಿಯ ತಾ.ಪಂ.ಸದಸ್ಯ ಪ್ರವೀಣ ಗೌಡ, ಕರ್ನಾಟಕ ಪಬ್ಲಿಕ್ ಸ್ಕೂಲ್ ಪದವಿ ಪೂರ್ವ ವಿಭಾಗ ಪ್ರಾಂಶುಪಾಲೆ ಮಮತಾ ಎ., ಉಪ ಪ್ರಾಂಶುಪಾಲೆ ಅರ್ಚನಾ ಸಿ.ಪಿ., ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ಕೆ. ರಮೇಶ್ ನಾಯಕ್ ರಾಯಿ, ಪ್ರಭಾಕರ ಹೆಗ್ಡೆ ಹಟ್ಟಾಜೆ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ. ಜಿಲ್ಲಾಧ್ಯಕ್ಷ ಶಿವಶಂಕರ ಭಟ್, ಬೆಳ್ತಂಗಡಿ ತಾ.ಅಧ್ಯಕ್ಷ ಪ್ರಭಾಕರ ನಾರಾವಿ, ನಿವೃತ್ತ ದೈಹಿಕ ಶಿಕ್ಷಕ ರಮೇಶ್ ಮೂಲ್ಯ, ಪದವಿ ಪೂರ್ವ ಕಾಲೇಜು ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಶೆಟ್ಟಿ ಮುಗೆರೋಡಿ, ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಮಕೃಷ್ಣ, ನಿವೃತ್ತ ಮುಕ್ಯ ಶಿಕ್ಷಕ ಧರ್ಣಪ್ಪ ಗೌಡ ಹಟ್ಟತ್ತೋಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ತಾರಾ ಕೇಸರಿ, ಮಡಂತ್ಯಾರು ಗ್ರಾ.ಪಂ.ಪಿಡಿಒ ನಾಗೇಶ್ ಎಂ., ಕ್ಷೇತ್ರ ಸಂಪನ್ಮೂಧಿಕಾರಿ ಶಂಭು ಶಂಕರ್, ಪ್ರಾಥಮಿಕ ವಿಭಾಗದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ, ಗ್ರಾ.ಪಂ.ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಬ್ಲಿಕ್ ಸ್ಕೂಲ್‌ನ ಶಿಕ್ಷಕ, ಉಪನ್ಯಾಸಕ ವೃಂದ, ವಿವಿಧ ಶಾಲಾ ಮುಕ್ಯ ಶಿಕ್ಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕ ಮೋನಪ್ಪ ಕೆ., ಪ್ರ.ದ. ಸಹಾಯಕ ಪ್ರವೀಣ್ ದೋಟ ಅವರನ್ನು ಸಮ್ಮಾನಿಸಲಾಯಿತು. ದಾನಿಗಳನ್ನು ಗೌರವಿಸಲಾಯಿತು. ಸಿ.ಆರ್.ಪಿ. ರಘುಪತಿ ಕೆ.ರಾವ್ ಸಮ್ಮಾನಿತರನ್ನು ಪರಿಚಯಿಸಿದರು.
ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್ ಪಿ. ಸ್ವಾಗತಿಸಿದರು. ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ರಮೇಶ್ ಕೆ. ಪ್ರಸ್ತಾವಿಸಿದರು. ಮುಖ್ಯ ಶಿಕ್ಷಕ ಮೋನಪ್ಪ ಕೆ.ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕೊಕ್ರಾಡಿ ಮತ್ತು ಶಿಕ್ಷಕ ಧರಣೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

More articles

Latest article