ಕಲ್ಲಡ್ಕ:  ಶ್ರೀರಾಮ ವಿದ್ಯಾಕೇಂದ್ರದಲ್ಲಿ 19 ನೇ ವರ್ಷದ ನವದಂಪತಿ ಸಮಾವೇಶವು ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು. 119 ಜೋಡಿ ದಂಪತಿಗಳು ಆಗಮಿಸಿದ್ದು, ಕಾರ್‍ಯಕ್ರಮವನ್ನು ಹಿರಿಯ ದಂಪತಿಗಳಾದ ಪ್ರೊ.ಬಾಲಕೃಷ್ಣ ಕಲ್ಲೂರಾಯ ಹಾಗೂ ಮೀನಾಕ್ಷಿಯವರು ದೀಪಬೆಳಗಿಸಿ ಉದ್ಘಾಟಿಸಿದರು.
ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್‍ಯಕಾರಿಣಿ ಸದಸ್ಯರೂ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ತಮ್ಮ ಪ್ರಾಸ್ತಾವಿಕ ಮಾತಲ್ಲಿ ನವದಂಪತಿಗಳನ್ನು ಉದ್ದೇಶಿಸಿ ನೀವು ’ದೇವ ದೇವೀ ಸ್ವರೂಪರು. ನಮ್ಮ ದೇಶದಲ್ಲಿ ಮದುವೆಗೆ ಅದರದ್ದೇ ಆದ ಸ್ವರೂಪವಿದೆ, ಪ್ರಾಶಸ್ತ್ಯವಿದೆ. ಮದುವೆಯು ಒಂದು ಪವಿತ್ರವಾದ ಸಂಬಂಧ. ಧರ್ಮ ಪ್ರಜಾಭಿವೃದ್ಧಿ ಸಿದ್ಯರ್ಥಂ’. ಜೀವನಪೂರ್ತಿ ಒಟ್ಟಿಗೆ ಇರುತ್ತೇವೆಂದು ಸಂಕಲ್ಪ ಮಾಡುವುದು. ಧರ್ಮದ ಆಧಾರದಲ್ಲಿ ಮುಂದಿನ ಪೀಳಿಗೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿರುತ್ತದೆ ಎಂಬುದಾಗಿ ನುಡಿದರು.


ಜ್ಯೇಷ್ಠ ಪ್ರಚಾರಕರು, ಕುಟುಂಬ ಪ್ರಬೋಧನ್ ಸಹಸಂಯೋಜಕರಾದಸು.ರಾಮಣ್ಣನವರು ಮೂಲತಃ ಮೈಸೂರಿನವರು. ಬಿ.ಇ. ಇಂಜಿನಿಯರಿಂಗ್ ಪದವೀದರರು. ಉತ್ತಮ ಹಾಡುಗಾರರೂ,ಭಾಷಣಕಾರರೂ ಆದ ಇವರು ’ಧನ್ಯೋ ಗೃಹಸ್ಥಾಶ್ರಮ’ ಧನ್ಯತೆಗಿಂತ ಬೇರೆ ಯಾವುದೂ ಇಲ್ಲ. ಮದುವೆ ಒಂದು ಶ್ರೇಷ್ಠವಾದ ಜೀವನ. ಇದು ಭಾರತೀಯರ ದಾಂಪತ್ಯ ಜೀವನದ ಒಂದು ಹಿರಿಮೆ. ನಾವೆಲ್ಲಾ ಭಾರತ ಮಾತೆಯ ಪುತ್ರ ಪುತ್ರಿಯರು. ನಮ್ಮ ಸಂಬಂಧ ಕೆಲವು ವರ್ಷಗಳದ್ದಲ್ಲ. ಏಳೇಳು ಜನ್ಮಗಳ ಸಂಬಂಧ. ಮದುವೆಯ ಬಂಧ ಅನುರಾಗದ ಅನುಬಂಧ. ಈ ಸಂಬಂಧ ಭಾರತದ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಮಾರ್ಗದರ್ಶನ ಮಾಡಿ ನಂತರ ಸಮಾರೋಪದ ಮಾತುಗಳನ್ನಾಡಿದರು.
ಹಿರಿಯ ದಂಪತಿಗಳಾಗಿ ಆಗಮಿಸಿದವರು ಪ್ರೊ.ಬಾಲಕೃಷ್ಣ ಕಲ್ಲೂರಾಯ ಹಾಗೂ ಶ್ರೀಮತಿ ಮೀನಾಕ್ಷಿಯವರು. ಇವರು ನವದಂಪತಿಗಳಿಗೆ ಅವರು ವೈವಾಹಿಕ ಜೀವನದಲ್ಲಿ ನಡೆದು ಬಂದ ಜೀವನದ ಅನುಭವವನ್ನು ತಿಳಿಸಿಕೊಟ್ಟರು.
ಪೂರ್ವಾಹ್ನ ೯ಗಂಟೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಇತ್ತೀಚೆಗೆ ಮದುವೆ ಆದ ದಂಪತಿಗಳು ಆಗಮನ. ಮಾತೃಮಂಡಳಿಯ ಮುತ್ತೈದೆಯರು ಕೈಕಾಲುಗಳಿಗೆ ನೀರಿತ್ತು ಪಣ್ಣೀರು ಚಿಮುಕಿಸಿ ಆರತಿ ಬೆಳಗಿ ಅರಸಿನ ಕುಂಕುಮ ನೀಡಿ ಸಾಂಪ್ರದಾಯಿಕ ನಗುಮುಖದ ಸ್ವಾಗತ. ಗುಲಾಬಿ ಮಲ್ಲಿಗೆಯ ಪರಿಮಳ. ಆಸರಿಕೆ ಉಪಾಹಾರಗೊಳೊಂದಿಗೆ ಆದರದ ಆತಿಥ್ಯ. ಇವು ನವದಂಪತಿ ಸಮಾವೇಶದಲ್ಲಿ ಕಂಡುಬಂದ ವಿಶೇಷ ದೃಶ್ಯಾವಳಿಗಳು.
ವೇದಿಕೆಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ ಹಾಗೂ ಸಹಸಂಚಾಲಕರಾದ ರಮೇಶ್ ಶ್ರೀಮಾನ್ ಇವರು ಉಪಸ್ಥಿತರಿದ್ದರು. ಕಮಲಾ ಪ್ರಭಾಕರ ಭಟ್, ಎಲ್ಲಾ ವಿಭಾಗದ ಪ್ರಮುಖರು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಉಪಸ್ಥಿತರಿದ್ದರ. ಶಿಶುಮಂದಿರದ ಮಾತೆಯರು ಕಾರ್‍ಯಕ್ರಮದಲ್ಲಿ ಸ್ವಯಂಸೇವಕರಾಗಿ ಕಾರ್‍ಯನಿರ್ವಹಿಸಿದರು.
ರಶ್ಮಿತಾ ಪ್ರಾರ್ಥನೆ ಮಾಡಿ, ಸುಧಾ ಭಟ್ ಸ್ವಾಗತಿಸಿ, ಶುಭಲಕ್ಷ್ಮಿ ಸತೀಶ್ ಧನ್ಯವಾದಗೈದರು.ಸ್ವಾತಿ ಕೃಷ್ಣಪ್ಪ ಕಾರ್‍ಯಕ್ರಮದ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here