ಮುಂಬಯಿ, ಸೆ.೦೮: ಮುಂಬಯಿ ಅಲ್ಲಿನ ಹಿರಿಯ ಶಿಕ್ಷಕ, ಸಾಹಿತಿ ಡಾ| ಜಿ.ಡಿ ಜೋಶಿ ಅವರ ಕೃತಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನ ಬೆಂಗಳೂರು ಆಯೋಜಿಸಿದ್ದ ಸಾಹಿತ್ಯ ಸ್ಪರ್ಧೆಯಲ್ಲಿ ಡಾ| ಜಿ.ಡಿ ಜೋಶಿ ಅವರ ಸಮಗ್ರ ಕನ್ನಡ ಕಣ್ಮಣಿಗಳು ಕೃತಿ ಆಯ್ಕೆಯಾಗಿದ್ದು, ಬಹುಮಾನವಾಗಿ ರೂಪಾಯಿ ೩,೦೦೦/- ನಗದು, ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆಯನ್ನೀಡಿ ಗೌರವಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಇದೇ ಸೆ.೨೫ನೇ ಬುಧವಾರ ಸಂಜೆ ಬೆಂಗಳೂರು ಅಲ್ಲಿನ ಬೆಂಗಳೂರು ಜೆ.ಸಿ ರಸ್ತೆ ಇಲ್ಲಿನ ಕನ್ನಡ ಭವನನದ ನಯನ ಸಭಾಗೃಹದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ಅಧ್ಯಕ್ಷ ರಮೇಶ್ ಸುರ್ವೆ ತಿಳಿಸಿದ್ದಾರೆ.
ಇಂದಿಲ್ಲಿ ಆದಿತ್ಯವಾರ ಸಂಜೆ ಮುಲುಂಡ್ ಪಶ್ಚಿಮದ ಶ್ರೀ ಕುಛ್ ದೇಷಿಯಾ ಸರಸ್ವತ್ ಬ್ರಾಹ್ಮಿಣ್ ಮಹಾಸ್ಥಾನ ಟ್ರಸ್ಟ್‌ನ ಸಭಾಗೃಹದಲ್ಲಿ ನಡೆಸಲ್ಪಟ್ಟ ಭಂಡಾರಿ ಸೇವಾ ಸಮಿತಿಯ ೬೬ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಆರ್.ಎಂ ಭಂಡಾರಿ ಮಾತನಾಡಿದರು.
ಸೇವಾ ಸಮಿತಿಯ ಉಪಾಧ್ಯಕ್ಷರುಗಳಾದ ಪ್ರಭಾಕರ್ ಪಿ.ಭಂಡಾರಿ ಥಾಣೆ ಮತ್ತು ಪುರುಷೋತ್ತಮ ಜಿ.ಭಂಡಾರಿ, ಗೌ| ಪ್ರ| ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ, ಗೌ| ಕೋಶಾಧಿಕಾರಿ ಕರುಣಾಕರ ಎಸ್.ಭಂಡಾರಿ, ಮಹಿಳಾ ವಿಭಾಗಧ್ಯಕ್ಷೆ ಶಾಲಿನಿ ಆರ್.ಭಂಡಾರಿ, ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ, ಗೌರವ ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ, ನಿಕಟಪೂರ್ವಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ ವೇದಿಕೆಯಲ್ಲಿದ್ದು, ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರ ದೇವರಿಗೆ ಸ್ತುತಿಸಿ ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನಿತ್ತರು.
ಸಭೆಯಲ್ಲಿ ಜೊತೆ ಕಾರ್ಯದರ್ಶಿಗಳಾದ ರಂಜಿತ್ ಎಸ್.ಭಂಡಾರಿ ಮತ್ತು ನ್ಯಾ| ಶಾಂತರಾಜ ಡಿ.ಭಂಡಾರಿ, ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ ಮತ್ತು ಸುಭಾಷ್ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಿಜಯ ಆರ್.ಭಂಡಾರಿ, ನಾರಾಯಣ ಆರ್.ಭಂಡಾರಿ, ಶೋಭಾ ಸುರೇಶ್ ಭಂಡಾರಿ ಕಡಂದಲೆ, ಪಲ್ಲವಿ ರಂಜಿತ್ ಭಂಡಾರಿ, ನ್ಯಾ| ಶ್ಯಾಮ ಆರ್.ಭಂಡಾರಿ, ಪ್ರಶಾಂತ್ ಭಂಡಾರಿ ಪುಣೆ, ಜಯಶೀಲ ಯು.ಭಂಡಾರಿ, ಕೇಶವ ಟಿ.ಭಂಡಾರಿ, ರಾಕೇಶ್ ಎಸ್.ಭಂಡಾರಿ, ಜಯ ಪಿ.ಭಂಡಾರಿ, ವಿಶ್ವನಾಥ್ ಬಿ.ಭಂಡಾರಿ, ರುಕ್ಮಯ ಭಂಡಾರಿ, ಸಂತೋಷ್ ಭಂಡಾರಿ, ಕರುಣಾಕರ ಭಂಡಾರಿ, ಪದ್ಮನಾಭ ಸಿ.ಭಂಡಾರಿ, ಪ್ರಕಾಶ್ ಎಸ್.ಭಂಡಾರಿ, ಮಾಜಿ ಅಧ್ಯಕ್ಷರಾದ ನ್ಯಾ| ಸುಂದರ್ ಜಿ.ಭಂಡಾರಿ ಬಾಲಕೃಷ್ಣ ಪಿ.ಭಂಡಾರಿ, ಬಾಲಕೃಷ್ಣ ಪುತ್ತೂರು (ಪುಣೆ), ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ, ಗೌರವ ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ ಸೇರಿದಂತೆ ಅನೇಕ ಸದಸ್ಯರು ಭಂಡಾರಿ ಬಂಧುಗಳು ಉಪಸ್ಥಿತರಿದ್ದರು.
ಗತವರ್ಷದಲ್ಲಿ ಅಗಲಿದ ಸರ್ವ ಭಂಡಾರಿ ಭಾಂಧವರು ಮತ್ತು ಗಣ್ಯರಿಗೆ ಸಭೆಯ ಆದಿಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭಿಕರ ಪರವಾಗಿ ರಂಜಿತ್ ಎಸ್.ಭಂಡಾರಿ, ರಮೇಶ್ ಭಂಡಾರಿ ಪೊವಾಯಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ ಸೂಚನೆಗಳನ್ನಿತ್ತರು.
…….. ಪ್ರಸ್ತಾವನೆಗೈದರು. ……. ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ……. ವಾರ್ಷಿಕ ಕಾರ್ಯಚಟುವಟಿಕೆಗಳನ್ನು ಭಿತ್ತರಿಸಿದರು. ……. ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವಿಜಯ ಆರ್.ಭಂಡಾರಿ ಪ್ರಾರ್ಥನೆಯನ್ನಾಡಿದರು. ……. ಅಭಾರ ವ್ಯಕ್ತಪಡಿಸಿದರು. ಮಹಾ ಸಭೆಯ ನಂತರ ಪದಾಧಿಕಾರಿಗಳು ಸಮಿತಿ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾಥಿ ವೇತನ ನೀಡಿ ಶುಭಾರೈಸಿದರು.