Sunday, April 14, 2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-58

ಹಾಯ್, ಬದುಕು ಸಂಬಂಧಗಳ ಸರಮಾಲೆ. ಸಂಬಂಧಗಳಲ್ಲಿ ರಕ್ತ ಸಂಬಂಧ ಒಂದೆಡೆಯಾದರೆ, ಗಂಡ-ಹೆಂಡತಿಯೆಂಬ ಜೊತೆಗೆ ಬಾಳಿ ಬದುಕುವ ಸಂಬಂಧ ಮತ್ತೊಂದು. ಪರಸ್ಪರ ಅವಲಂಬಿಸಿ, ತೆಗಳಿ, ಹೊಗಳಿ, ಗೌರವಿಸಿ, ಜಗಳವಾಡಿ ಕೊನೆಗೆ ‘ನಾವೇ’ ಎಂದು ಒಂದಾಗುವ ಸಂಬಂಧ.
ಇದಲ್ಲದೇ ಇರುವ, ತಮ್ಮವರಾಗದೇ ಇರುವ, ಬದುಕಲ್ಲಿ ಮತ್ತೆಂದೂ ಕಾಣಲಿಕ್ಕೂ ಸಿಗದ, ಹಲವೊಮ್ಮೆ ಮುಖ ಪರಿಚಯವೂ ಇಲ್ಲದ, ನಮ್ಮ ಜೀವನದಲ್ಲಿ ಮರೆಯಲಾಗದ ಸಹಾಯ ಮಾಡಿದ ಸ್ನೇಹಿತ ಸಂಬಂಧಿಕರು ಹಲವರಿರುವರು. ಇದರಲ್ಲೂ ಕೆಲವರು ವಿಶೇಷ ಸ್ನೇಹಿತರು. ಹಿಂದೂ ನೋಡಿರದ, ಮುಂದೂ ನೋಡಲು ಸಿಗದ, ನಮಗೆ ಸಹಾಯ ಬೇಕಾದಾಗ, ಪರಿಚಯವಾಗಿ ದೇವರಂತೆ ಬಂದ ಸ್ನೇಹಿತರಿವರು. ಸಹಪಾಠಿ ಗೆಳೆಯರು ಜೊತೆಯಲ್ಲಿದ್ದಾಗ ಮಾತು, ಪರಸ್ಪರ ವಿಷಯ ವಿನಿಮಯ, ಜಗಳ, ಮತ್ಸರ, ಹೊಡೆದಾಟ! ದೂರವಾದ ಮೇಲೆ ಅವೆಲ್ಲ ಸ್ವೀಟ್ ಮೆಮೋರೀಸ್!
ಇನ್ನು ಕೆಲವು ಗೆಳೆಯರು ಒಂದೆರಡು ವರುಷಗಳ ಕಾಲ ನಮ್ಮೊಡನಿದ್ದು ಬಳಿಕ ಉಳಿದ ಬಾಳಿನಲ್ಲಿ ಕೇವಲ ನೆನಪಾಗಿ ಉಳಿಯುವವರು. ಅವರೊಂದಿಗೆ ಕಳೆದ ನೆನಪುಗಳು ಮಾತ್ರ ಜೊತೆಯಲ್ಲಿ. ಯಾವುದೋ ದೂರದ ಹಾಸ್ಟೆಲ್ ನಲ್ಲಿದ್ದುಕೊಂಡು ಓದಿದವರಿಗೆ ಸಹಪಾಠಿ ಮಿತ್ರರೇ ಎಲ್ಲಾ. ಆರೋಗ್ಯ ಹದಗೆಟ್ಟಾಗ ನೋಡಿಕೊಳ್ಳುವವರು, ಕಷ್ಟದಲ್ಲಿ ಕೈ ಜೋಡಿಸುವವರು, ಹೊಗಳುವವರು, ಬೈಗುಳದಿಂದ ತಿದ್ದುವವರು, ಸಲಹೆ ಕೊಡುವವರು ಅವರೇ. ಇಲ್ಲಿ ಕೆಲವೊಮ್ಮೆ ಕೆಟ್ಟ ಚಟಗಳನ್ನು ಕಲಿಸುವವರೂ ಸಿಗಬಹುದು! ಒಳ್ಳೆಯವರು ಸಿಕ್ಕರೆ ಜೀವನದ ಭಾಗ್ಯದ ಬಾಗಿಲು ತೆರೆಯಬಹುದು, ಅದೇ ಚಟಗಾರ, ದಂಧೆಕೋರ, ಜೂಜುಕೋರ, ಕಳ್ಳರು ಸಿಕ್ಕಿದರೆ ಜೀವನ ಹಾಳಾಗಿ ಹೋಗಬಹುದು. ಗೆಳೆತನದಲ್ಲೂ ಜಾಗರೂಕರಾಗಿರಬೇಕು. ಆದರೆ ಕಳ್ಳನೇ ಆಗಲಿ, ನಿಜವಾದ ಗೆಳೆಯನಿಗೆ ಮೋಸ ಮಾಡನು. ಅವನನ್ನು ನಂಬುವನು. ಗೆಳೆತನಕ್ಕೆ ಅಂಥ ಶಕ್ತಿಯಿದೆ.
ಅನ್ಯಲಿಂಗದವರಲ್ಲಿ ಸಹ ಗಾಢ ಗೆಳೆತನ ಮೂಡಬಹುದು. ಏಕೆಂದರೆ ಗೆಳೆತನಕ್ಕೆ ಲಿಂಗ, ಜಾತಿ,ಧರ್ಮಗಳ ತಾರತಮ್ಯವಿಲ್ಲ. ಯಾರು ಬೇಕಾದರೂ ಅಮ್ಮನಷ್ಟೆ ಹತ್ತಿರವಾದ, ಸರ್ವ ಸುಖ ದುಃಖಗಳನ್ನು ಹಂಚಿಕೊಳ್ಳಬಹುದಾದ ಗೆಳೆಯರಾಗಬಹುದು. ಕೆಲವೊಮ್ಮೆ ಆ ಗೆಳೆತನ ಪ್ರೇಮಕ್ಕೆ ತಿರುಗಿ, ಮುಂದೆ ಮದುವೆಯಾಗಲು ಸಾಧ್ಯವಾಗದೆ ಬದುಕು ಕಳೆದುಕೊಳ್ಳುವುದು, ಕೊಲೆ, ಅತ್ಯಾಚಾರದಂತಹ ಹೀನ ಕೆಲಸಗಳಾಗಲೂ ಬಹುದು! ‘ನನಗೆ ಅವಳೇ ಬೇಕು. ಅವಳಿಲ್ಲದೆ ನಾನು ಬದುಕೋಲ್ಲ, ಅವಳಿಗಾಗಿಯೇ ನನ್ನ ಜೀವನ, ಇಲ್ಲದಿದ್ದರೆ ಸಾಯುವೆ’ಎಂಬ ಮನಸ್ಸಿನ ಸಣ್ಣ ಭಾವನೆ, ‘ನನಗೆ ಸಿಗದ ಅವಳು ಬೇರೆಯವನೊಡನೆಯೂ ಬಾಳಬಾರದು, ಸುಖವಾಗಿ ಬದುಕಬಾರದು, ಈ ಭೂಮಿಯಲ್ಲಿ ಮುಂದಿನ ಜನ್ಮದಲ್ಲಾದರೂ ಒಟ್ಟಿಗೆ ಬದುಕಬೇಕು’-ಇದೇ ಮೊದಲಾದ ಸಂಕುಚಿತ ಭಾವನೆಗಳನ್ನು ಹೊಂದಿ ತಮ್ಮ ಜೀವನವನ್ನೆ ನಾಶಗೊಳಿಸಿಕೊಂಡು, ಇತರರನ್ನೂ ಬದುಕಲು ಬಿಡದವರು ಹಲವರು. ಪರಿಶುದ್ಧ ಪ್ರೇಮ, ಸ್ನೇಹ ಬದುಕುವುದು, ಬದುಕಿಸುವುದಲ್ಲದೆ, ಸಾಯಿಸುವುದು ಅಥವಾ ಸಾಯುವುದಲ್ಲ, ಬದಲಾಗಿ ತ್ಯಾಗಕ್ಕೂ ಸಿದ್ಧವಾಗುವುದು. ಪವಿತ್ರ ಸ್ನೇಹಕ್ಕೆ ಯಾವುದೇ ಬೆಲೆ ಕಟ್ಟಲಾಗದು.
ಇಂದು ಗಣೇಶ ಚತುರ್ಥಿ. ಆ ದೇವರೊಂದಿಗೂ ನಮ್ಮ ಬಾಂಧವ್ಯ ಚಿರವಾಗಿರಲಿ, ಭಕ್ತಿ ಉಕ್ಕಿ ಹರಿಯಲಿ, ಭಕ್ತಿ-ಭಾವದ ಸ್ನೇಹ ಸದಾ ಸರ್ವರಿಗೂ ಒಳಿತಾಗಲಿ ಎಂಬ ಶುಭ ಹಾರೈಕೆಗಳು. ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಮಾತ್ರ ಸ್ನೇಹಿತರ ದಿನವನ್ನಾಗಿ ಆಚರಿಸುವುದಲ್ಲ, ಈ ಒಳ್ಳೆಯ ಸಂಬಂಧ ಸದಾ ನಮ್ಮ ಜೀವನದೊಡನೆ ಬೆಸೆದು ನಮ್ಮೊಡನಿರಬೇಕು. ನಾವು, ನಮ್ಮ ಸ್ನೇಹ ಚೆನ್ನಾಗಿರಲಿ. ನೀವೇನಂತೀರಿ?

 

 

@ಪ್ರೇಮ್@
1.09.2019

More from the blog

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಆಯತಪ್ಪಿ ಬಾವಿಗೆ‌ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

ಮಂಗಳೂರು: ಬಾವಿಯಿಂದ ನೀರು ಸೇದುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯೋರ್ವರನ್ನು ಗುರುವಾರ ಕದ್ರಿ ಅಗ್ನಿಶಾಮಕ ಠಾಣೆಯವರು ರಕ್ಷಿಸಿದ್ದಾರೆ ಬಿಕ್ಕರ್ನಕಟ್ಟೆ ಸಮೀಪದ ನಿವಾಸಿ ಟ್ರೆಸ್ಸಿ ಡಿಸೋಜಾ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಮಹಿಳೆ. ಸಂಜೆ 5 ಗಂಟೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...