ಬಂಟ್ವಾಳ: ಬಂಟ್ವಾಳತಾಲೂಕಿನ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲ ತಿಂಗಳ ಕಾಲ ನಿರ್ವಹಣೆ ಇಲ್ಲದೆ ಹದಗೆಟ್ಟಿದ್ದ ದಾರಿದೀಪ ಹಾಗೂ ಹೈಮಾಸ್ಕ್ ದೀಪಗಳನ್ನು ಬುಧವಾರ ಬಂಟ್ವಾಳ ತಾಲೂಕು ಪಂಚಾಯತ್‌ನಿಂದ ದುರಸ್ಥಿ ಕಾರ್ಯ ನಡೆಯಿತು.
ಇಲ್ಲಿನ ಹೈಮಾಸ್ಕ್ ಮತ್ತು ದಾರಿದೀಪಗಳು ನಿರ್ವಹಣೆಯಿಲ್ಲದೆ ಹಾಗೂ ಹದಗೆಟ್ಟು ಕೆಲವು ತಿಂಗಳಾಗುತ್ತಾ ಬಂದರೂ ಇದುವರೆಗೂ ಸರಿಪಡಿಸುವ ಕಾರ್ಯ ನಡೆದಿಲ್ಲ. ಈ ಬಗ್ಗೆ ಸರಿಪಡಿಸುವಂತೆ ಕೆಲ ತಿಂಗಳ ಹಿಂದೆಯೇ ಪಂಚಾಯತ್‌ಗೆ ಎಸ್ಡಿಪಿಐ ಮಂಚಿ ಸಮಿತಿಯು ಮನವಿ ಸಲ್ಲಿಸಲಾಗಿತ್ತು. ಆದರೆ, ಇದುವರೆಗೂ ಯಾವುದೇ ಸ್ಪಂದನೆ ಸಿಗದ ಹಿನನೆಲೆಯಲ್ಲಿ ಸೆ. 9ರಂದು ಎಸ್ಡಿಪಿಐ ಮಂಚಿ ವಲಯ ಸಮಿತಿಯಿಂದ ಸೋಮವಾರ ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಸರಿಪಡಿಸದೇ ಇದ್ದಲ್ಲಿ ಗ್ರಾಪಂ ಮುಂಭಾಗದಲ್ಲಿ ಧರಣಿ ನಡೆಸುವುದಾಗಿ ಸಂಘಟನೆಯು ಮನವಿಯಲ್ಲಿ ಎಚ್ಚರಿಸಿತ್ತು. ಈ ಬಗ್ಗೆ ಪತ್ರಿಕೆಯಲ್ಲಿಯೂ ವರದಿ ಪ್ರಕಟಿಸಲಾಗಿತ್ತು.
ಇದಕ್ಕೆ ತಕ್ಷಣ ಸ್ಪಂದಿಸಿ ಇಒ, ದಾರಿದೀಪ ಹಾಗೂ ಹೈಮಾಸ್ಕ್ ದೀಪವನ್ನು ಬುಧವಾರ ದರುಸ್ಥಿ ಮಾಡಿಸಿದ್ದಾರೆ. ಸಮಸ್ಯೆಗೆ ಸ್ಪಂದಿಸಿ ಸೌಕರ್ಯ ಕಲ್ಪಿಸಿಕೊಟ್ಟ ಬಂಟ್ವಾಳ ಇಒಗೆ ಎಸ್ಡಿಪಿಐ ಮಂಚಿ ಸಮಿತಿ ಅಭಿನಂದನೆ ಸಲ್ಲಿಸಿದೆ.