ವಿಟ್ಲ: ಗಂಡು ಹೆಣ್ಣಿನ ನಡುವಿನ ಅನುಪಾತದಲ್ಲಿನ ವ್ಯತ್ಯಾಸದಲ್ಲಿ ಅಂತರ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಶಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶುಅಭಿವೃದ್ಧಿ ಯೋಜನೆ ವಿಟ್ಲ , ಆರೋಗ್ಯ ಇಲಾಖೆ, ಅನಂತಾಡಿ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಗೋಳಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ನಡೆದ ಪೌಷ್ಠಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಮಕ್ಕಳ ಆರೋಗ್ಯ ದ ಬಗ್ಗೆ ಹೆತ್ತವರು ಹೆಚ್ಚು ಕಾಳಜಿವಹಿಸುವಂತೆ ಕರೆ ನೀಡಿದ ಅವರು, ಪೋಷಣ್ ಅಭಿಯಾನದ ಮಹತ್ವವನ್ನು ವಿವರಿಸಿದರು. ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸನತ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು.
ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅನಂತಾಡಿ ಯುವಕ ಮಂಡಲದ ಅಧ್ಯಕ್ಷ
ಕಿರಣ್ ಹೆಗ್ಡೆ, ಅನಂತಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ್ ಹೆಗ್ಡೆ, ಗೋಳಿಕಟ್ಟೆ ಫ್ರೆಂಡ್ಸ್ ಬಳಗದ ಅಧ್ಯಕ್ಷ ಅರವಿಂದ ಕೊಂಡೆ, ಮಾಣಿ ಆರೋಗ್ಯ ಸಹಾಯಕಿ ಅರುಂಧತಿ, ಗ್ರಾ.ಪಂ.ಸದಸ್ಯರಾದ ಸುಜಾತ, ವಸಂತಿ, ಪುರಂದರ ಗೌಡ, ವಸಂತ ಗೌಡ, ಸುಮಿತ್ರ, ಬಂಟ್ರಿಂಜ ಶಾಲಾ ಮುಖ್ಯೋಪಾಧ್ಯಾಯಿನಿ ಸುಂದರಿ, ಚಂದ್ರಶೇಖರ್, ಅಂಗನವಾಡಿ ಕೇಂದ್ರ ದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಜಯಶ್ರೀ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಪುಟಾಣಿ ಸಾಕ್ಷಿಯ ಹುಟ್ಟುಹಬ್ಬ ಆಚರಿಸಲಾಯಿತು. ದುರ್ಗಾಂಬಾ ಸ್ತ್ರೀ ಶಕ್ತಿ ಗುಂಪಿನ ವತಿಯಿಂದ ಅಂಗನವಾಡಿ ಕೇಂದ್ರಕ್ಕೆ ಕಪಾಟನ್ನು ಕೊಡುಗೆಯಾಗಿ ನೀಡಲಾಯಿತು. ಕುಸುಮಾರವರು ಟಿಪಾಯಿ ಹಾಗೂ ಸುಜಾತ ರವರು
ದೇವರ ಫೋಟೋವನ್ನು ಕೊಡುಗೆಯಾಗಿ ನೀಡಿದರು. ಉದ್ಯಮಿ ಲೋಕೇಶ್ ಅವರು ಮೇಲ್ಛಾವಣಿಯ ಕೊಡುಗೆ ನೀಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ, ಸ್ವಚ್ಛತೆ, ವೈಯುಕ್ತಿಕ ಸ್ವಚ್ಛತೆ ಹಾಗೂ ಕೈತೊಳೆಯುವ ವಿಧಾನದ ಬಗ್ಗೆ ಆರೋಗ್ಯ ಸಹಾಯಕಿ ಅರುಂಧತಿ ಮಾಹಿತಿ ನೀಡಿದರು. ಆಯುಷ್ಮಾನ್ ಭಾರತ್ ಬಗ್ಗೆ ಗಣೇಶ್ ಅವರು ಮಾಹಿತಿ ನೀಡಿದರು. ಅಂಗನವಾಡಿ ಕೇಂದ್ರಗಳ ವತಿಯಿಂದ ಸ್ತ್ರೀ ಶಕ್ತಿ ಸದಸ್ಯರು ವಿವಿಧ ಖಾದ್ಯಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಈವರೆಗೆ ಸಹಾಯಕಿಯಾಗಿ ಸೇವೆಸಲ್ಲಿಸಿ, ಬಾಬನ ಕಟ್ಟೆ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆಗೊಂಡ ಶ್ರೀಮತಿ ಸವಿತಾ ರನ್ನು ಸನ್ಮಾನಿಸಲಾಯಿತು. ಇಲಾಖಾ ಮೇಲ್ವಿಚಾರಕಿ ಸೋಮಕ್ಕ ಸ್ವಾಗತಿಸಿದರು.
ಅಂಗನವಾಡಿ ಕಾರ್ಯಕರ್ತೆ ಶೋಭಾ ವಂದಿಸಿದರು. ಹಿರಿಯ ಮೇಲ್ವಿಚಾರಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.