ಬಂಟ್ವಾಳ: ಗಣೇಶ ಚತುರ್ಥಿಯ ಸಂಭ್ರಮದ ನಡುವೆ ನಮ್ಮ ಬಂಟ್ವಾಳ ಡಾಟ್ ಕಾಮ್ ವೆಬ್ ನ್ಯೂಸ್ ಸಂಸ್ಥೆಯು ಈ ಬಾರಿಯೂ “ನಮ್ಮ ಗಣಪ” ಎಂಬ ಶೀರ್ಷಿಕೆಯಲ್ಲಿ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಿದೆ.
ಮೂರು ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಎಲ್.ಕೆ.ಜಿ.ಯಿಂದ 4ನೇ ವರೆಗೆ ಹಾಗೂ 5 ರಿಂದ 7ನೇ ತರಗತಿಯವರೆಗೆ ಹಾಗೂ ಎಂಟರಿಂದ ಹತ್ತನೇ ತರಗತಿ ವರೆಗೆ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಎಲ್ ಕೆಜಿಯಿಂದ 4 ನೇ ಹಾಗೂ 5 ರಿಂದ ಏಳನೇ ತರಗತಿ ವರೆಗಿನ ವಿಭಾಗದ ಮಕ್ಕಳು ಗಣಪತಿಯ ಚಿತ್ರವನ್ನು ರಚಿಸಿ ಕಳುಹಿಸಬಹುದು. ಪ್ರೌಢಶಾಲಾ ವಿಭಾಗದ (8-10) ಸ್ಪರ್ಧಿಗಳು ಗೌರಿಗಣೇಶ ನ ಚಿತ್ರವನ್ನು ಸ್ಪರ್ಧೆಗೆ ಕಳುಹಿಸಬೇಕು.

ನಿಯಮಗಳು…
1. ಚಿತ್ರಗಳನ್ನು ಮಕ್ಕಳೇ ರಚಿಸಿರಬೇಕು.
2.ಪೆನ್ಸಿಲ್‌ ಡ್ರಾಯಿಂಗ್ ಅಥವಾ ಬಣ್ಣ ಹಚ್ಚಿಯೂ ಕಳುಹಿಸಬಹುದು.
3. ಚಿತ್ರದ ಫೊಟೋ ತೆಗೆದು, ಹೆಸರು ವಿಳಾಸದ ಜೊತೆಗೆ ನಮ್ಮ ಬಂಟ್ವಾಳ ದ ವಾಟ್ಸ್ಯಾಪ್‌ ನಂಬರ್ 9481784578 ಗೆ ಕಳುಹಿಸಬೇಕು.
4. ತೀರ್ಪುಗಾರರ ತೀರ್ಮಾನವೇ ಅಂತಿಮ.
5. ಸೆಪ್ಟೆಂಬರ್ 15 ರ ಒಳಗಾಗಿ ನಿಮ್ಮ ಮಕ್ಕಳು ರಚಿಸಿದ ಚಿತ್ರಗಳು ನಮಗೆ ತಲುಪಲಿ. ನಂತರ ಬಂದವುಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here