Tuesday, April 23, 2024

ಬೀದಿ ಬದಿ ವ್ಯಾಪಾರಿಗಳ ಎತ್ತಂಗಡಿ ಮಾಡಿದ ಪುರಸಭೆ

ಬಂಟ್ವಾಳ: ಬೀದಿ ಬದಿ ವ್ಯಾಪಾರಿಗಳ ವಿರುದ್ದ ಕಾರ್ಯಚರಣೆ ಮಾಡಿ ಅಂಗಡಿಗಳ ತೆರವು ಮಾಡಿದ ಪುರಸಭಾ ಅಧಿಕಾರಿಗಳು.
ಬಿಸಿರೋಡಿನಲ್ಲಿ ಕಳೆದ ಕೆಲವು ವರ್ಷಗಳಿಂದ ರಸ್ತೆ ಬದಿಯಲ್ಲಿ ಹಣ್ಣು ಹಾಗೂ ತರಕಾರಿ ಸಹಿತ ವಿವಿಧ ಬಗೆಯ ವ್ಯಾಪಾರಿ ಗಳು ಬೀಡು ಬಿಟ್ಟಿದ್ದರು.
ಇವರ ಬೀದಿ ವ್ಯಾಪಾರದಿಂದ ಇಲ್ಲಿನ ಅಂಗಡಿ ವ್ಯಾಪಾರಿಗಳಿಗೆ ವ್ಯಾಪಾರ ಇಲ್ಲದೆ ಸೊರಗಿ ಹೋಗಿದ್ದರು. ಈ ಬಗ್ಗೆ ಇಲ್ಲಿನ ಅಂಗಡಿ ಮಾಲಕರು ಪುರಸಭಾ ಇಲಾಖೆಗೆ ದೂರು ನೀಡಿದ್ದರು.


ಈ ದೂರಿನ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಬೀದಿ ಬದಿಯ ವ್ಯಾಪಾರಿ ಗಳಿಗೆ ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಿತ್ತು.
ಅದರೆ ಇವರ ಯಾವ ಎಚ್ಚರಿಕೆಗೂ ಬೆದರದ ವ್ಯಾಪಾರಿ ಗಳು ವ್ಯಾಪಾರ ಮಾಡುತ್ತಲೇ ಇದ್ದರು.
ಹಾಗಾಗಿ ಇಂದು ಬೆಳಿಗ್ಗೆ ಪುರಸಭಾ ಕಂದಾಯ ಅಧಿಕಾರಿ ಶಿವ ನಾಯ್ಕ್, ಬಿಲ್ ಕಲೆಕ್ಟರ್ ರಾಘವೇಂದ್ರ, ಕಿರಿಯ ಅಭಿಯಂತರ ಸಹಾಯಕರು ಇಕ್ಬಾಲ್ ಹಾಗೂ ಸಿಬ್ಬಂದಿ ಗಳು ಸೇರಿ ಬೀದಿ ಬದಿಯ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿದರು.

More from the blog

ಕೇಪು: ಬಾವಿಯೊಳಗೆ ಆಕ್ಸಿಜನ್ ಸಿಗದೇ ರಿಂಗ್ ಕಾರ್ಮಿಕರಿಬ್ಬರು ಮೃತ್ಯು

ವಿಟ್ಲ: ಬಾವಿಗೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೆ ಕಾರ್ಮಿಕರಿಬ್ಬರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ...

ಫರಂಗಿಪೇಟೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಪರ ಅಣ್ಣಾಮಲೈ ಮತಯಾಚನೆ

ಬಂಟ್ವಾಳ: ತಮಿಳುನಾಡಿನ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಇಂದು ಮಧ್ಯಾಹ್ನ ಫರಂಗಿಪೇಟೆಯಲ್ಲಿ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಮತಯಾಚನೆ ನಡೆಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಉಡುಪಿಗೆ ವಾಪಸು ಹೋಗುವ ವೇಳೆ...

ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡ ಮತವನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮರಳಿಪಡೆಯುತ್ತೇವೆ-ಮಾಜಿ ಸಚಿವ ಬಿ. ರಮಾನಾಥ ರೈ

ಬಂಟ್ವಾಳ: ಬಿಜೆಪಿಯವರಿಂದ ಜನರಿಗೆ ಮೋಸ ಆಗಿದ್ದು , ಈ ಬಾರಿ ಸಮಗ್ರ ಅಭಿವೃದ್ಧಿಗಾಗಿ ಜನತೆ ಮತ್ತೆ ಕಾಂಗ್ರೇಸ್ ಪಕ್ಷದ ಕೈ ಹಿಡಿಯುತ್ತಾರೆ ಎಂದು ‌ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಪಾಣೆಮಂಗಳೂರು ಬ್ಲಾಕ್...

ನೌಕಾಪಡೆಯ 2 ಹೆಲಿಕಾಪ್ಟರ್ ಪತನ; ಛಿದ್ರ, ಛಿದ್ರವಾದ ನೌಕಾಪಡೆಯ 10 ಮಂದಿ

ಕೌಲಾಲಂಪುರ: ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದು 10 ಮಂದಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಮಲೇಷ್ಯಾದ ಲುಮುಟ್ ಪಟ್ಟಣದ ನೌಕಾನೆಲೆಯಲ್ಲಿ ಹೆಲಿಕಾಪ್ಟರ್​ಗಳು ಪರೇಡ್‌ ನಡೆಸುತ್ತಿರುವಾಗ ಈ ಅವಘಡ ಸಂಭವಿಸಿದೆ. ಅತ್ಯಂತ ಸಮೀಪದಲ್ಲಿ ಹಾರಾಟ...