ಉಜಿರೆ: 64 ದಿನ ನಡೆದ ವಾಚನ-ಪ್ರವಚನ ಕಾರ್ಯಕ್ರಮದಲ್ಲಿ ಪುರಾಣ ಗ್ರಂಥಗಳಿಂದ ವೈವಿಧ್ಯಮಯ ಅಮೂಲ್ಯ ವಿಚಾರಗಳನ್ನು ಅಳವಡಿಸಿದ್ದು ವಾಚನ-ಪ್ರವಚನ ಮಾಡಿದವರಿಗೂ, ಶ್ರೋತೃಗಳಿಗೂ ತುಂಬಾ ಪ್ರಯೋಜನವಾಗಿದೆ. ಧರ್ಮ ಪ್ರಭಾವನೆಯಾಗಿದೆಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ 64 ದಿನಗಳಲ್ಲಿ ಪ್ರತಿ ದಿನ ಸಂಜೆ ಗಂಟೆ 6.30ರಿಂದ 8 ಗಂಟೆ ವರೆಗೆ ವಾಚನ-ಪ್ರವಚನ ಮಾಡಿದ ವಿದ್ವಾಂಸರನ್ನುಅವರು ಗೌರವಿಸಿ ಮಾತನಾಡಿದರು.

ಸಾರ್ವಜನಿಕಧಾರ್ಮಿಕ ಸಮಾರಂಭಗಳಲ್ಲಿ ಕನಿಷ್ಠ ಒಂದುಗಂಟೆಅವಧಿಯ ವಾಚನ-ಪ್ರವಚನಕಾರ್ಯಕ್ರಮ ಅಳವಡಿಸಬೇಕು ಎಂದುಅವರು ಸಲಹೆ ನೀಡಿದರು. ಹರಿಕಥೆ, ಶಾಸ್ತ್ರೀಯ ಸಂಗೀತ, ಯಕ್ಷಗಾನ ಮೊದಲಾದ ಆಧ್ಯಾತ್ಮಿಕ ಪ್ರಭಾವನಾ ಕಾರ್ಯಕ್ರಮಗಳು ಕಡಿಮೆಯಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
ಧರ್ಮಸ್ಥಳದಲ್ಲಿ ದಾನ-ಧರ್ಮ, ಸೇವೆಯನ್ನು ಕಾಟಾಚಾರಕ್ಕಾಗಿ ಮಾಡುವುದಿಲ್ಲ. ಶಿಸ್ತು ಬದ್ಧವಾಗಿ, ಸಾಂಪ್ರದಾಯಿಕ ನೆಲೆಯಲ್ಲಿ ಮಾಡಲಾಗುತ್ತದೆ.ದೇವಸ್ಥಾನದಲ್ಲಿ ತಾಳೆಗರಿ ಗ್ರಂಥಗಳಿಗೆ ಪೂಜೆ ಮಾಡಿ ಸರಸ್ವತಿ ಆರಾಧನೆ ಮಾಡಲಾಗಿದೆ.ಕಳೆದ 47 ವರ್ಷಗಳಿಂದ ಪುರಾಣ ವಾಚನ-ಪ್ರವಚನ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ನಡೆಸಲಾಗುತ್ತದೆ. ಹೊಸ ತಲೆಮಾರಿನವರಿಗೆ ಮಾಹಿತಿ ನೀಡುವುದರೊಂದಿಗೆ ತರಬೇತಿಯ ಕಾರ್ಯವೂ ಇದಾಗಿದೆ ಎಂದು ಅವರು ತಿಳಿಸಿದರು.
ಹೇಮಾವತಿ ವೀ, ಹೆಗ್ಗಡೆಯವರು ಉಪಸ್ಥಿತರಿದ್ದರು. ಶ್ರೀನಿವಾಸ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here