ವಿಟ್ಲ: ರೋಟರಿ ಕ್ಲಬ್ ವತಿಯಿಂದ ಕೊಳ್ನಾಡು ಗ್ರಾಮದ ನರ್ಕಳ ಮನೆ ನಿವಾಸಿ ಚಂದ್ರ ಅಡಪ ಇವರಿಗೆ ಅವರ ಮನೆಗೆ ಹೋಗಿ ಧನ ಸಹಾಯ ನೀಡಲಾಯಿತು. ಕ್ಲಬ್‌ನ ಅಧ್ಯಕ್ಷ ಜಯರಾಮ ರೈ, ಭಾಸ್ಕರ ಶೆಟ್ಟಿ. ಡಾ. ಚರಣ್ ಕಜೆ, ರವೀಶ್ ಶೆಟ್ಟಿ, ಅಣ್ಣಪ್ಪ ಸಾಸ್ತಾನ ಇದ್ದರು.
ಅಳಿಕೆ: ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಯಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಚಂದ್ರಶೇಖರ ಪಿ. ಧ್ವಜಾರೋಹಣ ಮಾಡಿದರು. ಭಜನೆ ಕಾರ್ಯಕ್ರಮದ ಬಳಿಕ ನಡೆದ...