ಬಂಟ್ವಾಳ, ಸೆ. ೨೪: ಕೇಂದ್ರ ಸರಕಾರವು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ೩೭೦ನೇ ಹಾಗೂ ೩೫ಎ ವಿಧಿಯ ರದ್ಧತಿಯ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು, ಇಡೀ ದೇಶದ ಜನತೆ ಕೇಂದ್ರ ಸರಕಾರದ ಜತೆ ನಿಂತಿದೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರಿ ನಿವಾಸ ಪೂಜಾರಿ ಹೇಳಿದರು.


ಅವರು ಬಂಟ್ವಾಳ ಬಿಜೆಪಿ ವತಿಯಿಂದ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ಧತಿಯ ರಾಷ್ಟೀಯ ಏಕತಾ ಅಭಿಯಾನದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಶ್ಮೀರದ ಜನತೆಯ ನರಕ ಸದೃಶ ಜೀವನದ ವಿರುದ್ಧ ಕೇಂದ್ರ ಸರಕಾರವು ಇಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದು, ಸಾಹಿತಿಗಳಾದ ಚೆನ್ನವೀರ ಕಣವಿ, ಷಡಾಕ್ಷರಿ ಪಂಚಾಕ್ಷರಿ, ಇನೋಸಿಸ್‌ನ ಸುಧಾಮೂರ್ತಿ ಮೊದಲಾದವರು ಗೌರವದ ಮಾತುಗಳನ್ನಾಡಿದ್ದಾರೆ ಎಂದರು.
ನಿವೃತ್ತ ಸೇನಾನಿ ರಾಮಯ್ಯ ಶೆಟ್ಟಿ ಸಂಪಿಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಬಿಜೆಪಿಯು ಕಾಶ್ಮೀರ ವಿಚಾರದಲ್ಲೆ ಜನ್ಮತಾಳಿದ್ದು, ಪ್ರಸ್ತುತ ತನ್ನ ಉದ್ದೇಶ ಈಡೇರಿಸಿದ ಸಂತಸದಲ್ಲಿದೆ ಎಂದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಬಂಟ್ವಾಳಕ್ಕೆ ಮೊದಲ ಬಾರಿಗೆ ಆಗಮಿಸಿದ ಸಚಿವ ಕೋಟ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟೀಯ ಏಕತಾ ಅಭಿಯಾನದ ಸಂಚಾಲಕ ಸತೀಶ್ ಕುಂಪಲ, ಸಹಸಂಚಾಲಕಿ ಪೂಜಾ ಪೈ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಸುಲೋಚನಾ ಜಿ.ಕೆ.ಭಟ್ ಉಪಸ್ಥಿತರಿದ್ದರು.
೩೭೦ನೇ ವಿ„ ರದ್ಧತಿಯ ವಿಚಾರವಾಗಿ ಸಚಿವರು ಮನೆ ಭೇಟಿ ಕಾರ್ಯಕ್ರಮ ನಡೆಸಿದರು. ಬಿ.ಸಿ.ರೋಡಿನ ಗುರುದತ್ತ್ ಶೆಣೈ ಹಾಗೂ ಬಂಟ್ವಾಳ ಕೆಳಗಿನಪೇಟೆಯ ಖಲೀಲುಲ್ಲಾ ಅವರ ಮನೆಗೆ ಭೇಟಿ ನೀಡಿ, ೩೭೦ನೇ ವಿ„ ರದ್ಧತಿಯ ಕುರಿತು ಮಾತನಾಡಿದರು.
ಕಾಶ್ಮೀರ ರದ್ಧತಿಯ ವಿಚಾರದಲ್ಲಿ ಬಂದ ಪ್ರಶಂಸತಾ ಪತ್ರವನ್ನು ಲಕ್ಷೀನಾರಾಯಣ್ ಅವರಿಗೆ ನೀಡಲಾಯಿತು. ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಗಳಾದ ಮೋನಪ್ಪ ದೇವಸ್ಯ ವಂದಿಸಿದರು. ರಾಮದಾಸ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here