ಬಂಟ್ವಾಳ:  ಸರಕಾರಿ ಪದವಿ ಪೂರ್ವಕಾಲೇಜು ಸಜೀಪಮೂಡ ಇಲ್ಲಿ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ(ರಿ.) ಪಾಣೆ ಮಂಗಳೂರು ವಲಯದ ವತಿಯಿಂದ ಸ್ವಾಸ್ಥ್ಯ ಸಂಕಲ್ಪಕಾರ್ಯಕ್ರಮವು ಜರಗಿತು. ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ  ಮಹಾಬಲ ರೈ ಬರ್ಕೆಗುತ್ತು ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮನುಷ್ಯ ಬಾಲ್ಯದಲ್ಲಿಯಾವ ದಾರಿಯಲ್ಲಿ ನಡೆಯುತ್ತಾನೆಯೋ ಅದೇ ರೀತಿಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾನೆ. ಹಾಗಾಗಿ ವಿದ್ಯಾರ್ಥಿಗಳು ಬಾಲ್ಯದಲ್ಲಿ ಧನಾತ್ಮಕದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಅವರುಗ್ರಾಮ ಮಟ್ಟದಿಂದ ದೇಶಮಟ್ಟದ ನಾಯಕತ್ವಕ್ಕೆ ಬೆಳೆಯಬೇಕೆಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿವೃತ್ತ ಆರೋಗ್ಯ ಮೇಲ್ವಿಚಾರಕರಾದ ಶ್ರೀ ಜಯರಾಮ ಪೂಜಾರಿಯವರು ತನ್ನ ಉಪನ್ಯಾಸದಲ್ಲಿ, ಸ್ವಾಸ್ಥ್ಯಎಂದರೆ ಬರೀ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ ಮಾತ್ರ ಅಲ್ಲ ಅದು ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ವಿಚಾರಕ್ಕೆ ಸಂಬಂಧಪಟ್ಟ ವಿಷಯವೂಆಗಿದೆ. ಹಾಗಾಗಿ ವ್ಯಕ್ತಿತ್ವದ ಸ್ವಾಸ್ಥ್ಯಎನ್ನುವುದು ಈ ಎಲ್ಲಾ ಆಯಾಮಗಳನ್ನು ಒಳಗೊಂಡಿದೆ. ದುಶ್ಚಟಗಳಿಂದ ಮನುಷ್ಯ ಈ ಎಲ್ಲವೂಗಳಲ್ಲಿ ಅವನತಿಯನ್ನು ಹೊಂದುತ್ತಾನೆ. ಹಾಗಾಗಿ ವಿದ್ಯಾರ್ಥಿಗಳು ಎಲ್ಲ ಬಗೆಯದುಶ್ಚಟಗಳಿಂದ ದೂರವಿದ್ದು, ಅಧ್ಯಯನದಿಂದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಬಾಬು ಗಾಂವಕರ್, ಡಾ.ವಾಸುದೇವ ಬೆಳ್ಳೆ, ಸಜೀಪಮೂಡ ಒಕ್ಕೂಟದ ಅಧ್ಯಕ್ಷರಾದ ಚಂದ್ರಹಾಸ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಪಾಣೆಮಂಗಳೂರು ವಲಯದ ಮೇಲ್ವಿಚಾರಕರಾದ ಅಮಿತಾ ಹಾಗೂ ಸಜೀಪ ಮೂಡದ ಸೇವಾ ಪ್ರತಿನಿಧಿಯಾದ ಕುಸುಮಾವತಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here