ಬಂಟ್ವಾಳ:  ಬಿ.ಸಿ.ರೋಡಿನ‌ ನಗರ ಸೌಂದರ್ಯೀಕರಣ ದ ಕನಸು ಶೀಘ್ರ ನನಸಾಗಲಿದ್ದು,15 ಕೋಟಿ ರೂ ವೆಚ್ಚದಲ್ಲಿ ನಡೆಯಲಿರುವ ಬಿಸಿರೋಡು ಸೌಂದರ್ಯೀಕರಣದ ಕಾಮಗಾರಿಗೆ ಅ.21 ರಂದು ಚಾಲನೆ ನೀಡಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿ.ಸಿ.ರೋಡು ಸೇರಿದಂತೆ ಬಂಟ್ವಾಳ ಕ್ಷೇತ್ರವನ್ನು ಮಾದರಿಯಾಗಿ ರೂಪಿಸಲಾಗುವುದು ಎಂದರು.

ಬಿ.ಸಿ.ರೋಡು ಸೌಂದರ್ಯೀಕರಣ ಕಾಮಗಾರಿಗೆ ತನ್ನ ನಿಧಿಯಿಂದ 2 ಕೋಟಿ, ಮುಖ್ಯಮಂತ್ರಿಯವರ 5 ಕೋಟಿಯ ವಿಶೇಷ ನಿಧಿ ಹಾಗೂ ಬಂಟ್ವಾಳ ತಾಲೂಕಿಗೆ ಸಂಪರ್ಕ ಹೊಂದಿರುವ ಶಶಿಕಿರಣ್ ಶೆಟ್ಟಿ, ಸಂತೋಷ್ ಪೂಜಾರಿ, ಬಿ.ಎ.ಮೊಯ್ದಿನ್, ಜೆರ್ರಿ ಕತಾರ್ ಸಹಿತ ಅನೇಕ ಉದ್ಯಮಿಗಳು, ಎಂ.ಆರ್.ಪಿ.ಎಲ್ ನಂತಹ ಸಂಸ್ಥೆಗಳ ಸಹಕಾರದೊಂದಿಗೆ ಕಾಮಗಾರಿ ನಡೆಯಲಿದೆ ಎಂದವರು ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಶನಿವಾರ ಸಭೆ ನಢಸಲಾಗಿದ್ದು, ಪೂರ್ಣರೀತಿಯ ನೀಲನಕ್ಷೆ ತಯಾರಾಗಿದೆ ಎಂದು ವಿವರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here