


ಬಂಟ್ವಾಳ: ಅಕ್ರಮ ಕಟ್ಟಡ ತೆರವಿನ ವೇಳೆ ತಹಶೀಲ್ದಾರ್ ರಶ್ಮಿ ಅವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಸಹಕಾರ ನೀಡಿದವರು ಬಂಟ್ವಾಳ ವೃತ್ತ ಪೋಲೀಸ್ ಇಲಾಖೆಯ ಅಧಿಕಾರಿಗಳು.
ಪಾಣೆಮಂಗಳೂರು ಅಕ್ರಮ ಕಟ್ಟಡ ತೆರವು ಕಾರ್ಯಚರಣೆಗೂ ಮೊದಲು ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಹಾಗೂ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಅಲ್ಲಿನ ನಿವಾಸಿಗಳಿಗೆ ಪ್ರತ್ಯೇಕ ಕ್ಲಾಸ್ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ.
ಇಲಾಖಾ ಆದೇಶದಂತೆ ಶನಿವಾರ ಪಾಣೆಮಂಗಳೂರು ಹತ್ತಾರು ವರ್ಷಗಳ ಕಾಲದ ಹಿಂದಿನ ಸುಣ್ಣದ ಗೂಡು ತೆರವು ಕಾರ್ಯಚರಣೆ ನಡೆಸುವ ಬಗ್ಗೆ ಎಲ್ಲಾ ತಯಾರಿಗಳು ನಡೆದಿತ್ತು.
ಈ ಕಾರ್ಯಚರಣೆ ವೇಳೆ ಸ್ಥಳದಲ್ಲಿ ಯಾವುದೇ ರೀತಿಯ ಗೊಂದಲಗಳು ಉಂಟಾಗಬಾರದು ಎಂಬ ಉದ್ದೇಶದಿಂದ ಕಂದಾಯ ಇಲಾಖಾ ಅಧಿಕಾರಿಗಳು ಪೋಲಿಸರ ಮುಖಾಂತರ ಭದ್ರತೆ ಒದಗಿಸುವಂತೆ ಕೇಳಿಕೊಂಡಿತ್ತು.
ಆದರೆ ಅನೇಕ ವರ್ಷಗಳಿಂದ ಅಕ್ರಮವಾಗಿ ವಾಸವಾಗಿದ್ದ ಈ ಕಟ್ಟಡದ ತೆರವು ಕಾರ್ಯ ಅಷ್ಟು ಸುಲಭವಲ್ಲ ಎಂಬುದು ಎಲ್ಲರಿಗೂ ತಿಳಿದಿತ್ತು, ಪೋಲೀಸರಿಗೂ ಇದರ ಅರಿವಿತ್ತು.
ಕಟ್ಟಡದಲ್ಲಿ ವಾಸ ಮಾಡುವ ಕುಟುಂಬಗಳ ಜೊತೆ ಕಟ್ಟಡ ಮಾಲೀಕರು ಹಾಗೂ ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ಈ ಕಟ್ಟಡದ ತೆರವು ಮಾಡದಂತೆ ಕಿರಿಕ್ ಮಾಡಲು ಹೊರಟಿದೆ ಎಂಬ ಖಚಿತ ಮಾಹಿತಿ ಪೋಲೀಸ್ ಇಲಾಖೆಗೆ ಸಿಕ್ಕಿತ್ತು.
ಆ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕ ನಾಗರಾಜ್ ಹಾಗೂ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ಅವರು ಘಟನಾ ಸ್ಥಳಕ್ಕೆ ಶುಕ್ರವಾರ ತೆರಳಿ ಅಲ್ಲಿನ ನಿವಾಸಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಬಂದಿದ್ದರು. ಶನಿವಾರ ಇಲಾಖಾ ಅದೇಶದಂತೆ ಕಟ್ಟಡ ತೆರವು ಮಾಡಲಾಗುತ್ತದೆ. ಕಟ್ಟಡ ತೆರವು ಮಾಡುವುದು ಕಂದಾಯ ಇಲಾಖೆ . ಆ ಸಂದರ್ಭದಲ್ಲಿ ಯಾವುದೇ ಕಿರಿಕಿರಿಯಾಗದಂತೆ ಭದ್ರತೆ ಒದಗಿಸುವ ಕೆಲಸ ಮಾತ್ರ ನಮ್ಮದು. ಹಾಗಾಗಿ ನಾಳೆ ನೀವು ಸರಕಾರಿ ಇಲಾಖಾ ಕೆಲಸಕ್ಕೆ ಅಡ್ಡಿ ಮಾಡುವಂತೆ ಇಲ್ಲ ಎಂಬ ಸ್ಪಷ್ಟ ವಾದ ಸಂದೇಶವನ್ನು ನೀಡಿ ಬಂದಿದ್ದರು.
ನೀವು ಯಾರದೋ ಮಾತು ಕೇಳಿ ಜನಸೇರಿಸುವುದಾಗಲಿ, ಅಥವಾ ಅಡ್ಡಿಪಡಿಸುವ ನಡವಳಿಕೆ ಮಾಡಿದರೆ ಹುಷಾರ್ ಎಂದು ಖಡಕ್ ವಾರ್ನಿಂಗ್ ನೀಡಿದರ ಹಿನ್ನೆಲೆಯಲ್ಲಿ ಇಂದು ಅಕ್ರಮ ಕಟ್ಟಡ ತೆರವು ಯಾವುದೇ ತೊಂದರೆ ಯಿಲ್ಲದೆ ನಿರ್ವಿಘ್ನವಾಗಿ ನಡೆದಿದೆ.
ಇದೇ ರೀತಿ ಹತ್ತು ವರ್ಷಗಳ ಹಿಂದೆ ಕಲ್ಲಡ್ಕ ಮೇಲಿನ ಪೇಟೆಯಲ್ಲಿ ಅಕ್ರಮ ಕಟ್ಟಡ ಗಳ ತೆರವು ಕಾರ್ಯಚರಣೆ ವೇಳೆ ಸೂಕ್ತವಾದ ಬಂದೋಬಸ್ತ್ ಹಾಗೂ ಭದ್ರತೆ ನೀಡಿದ್ದು ಆಗಿನ ವೃತ್ತ ನಿರೀಕ್ಷಕ ನಂಜುಂಡೇ ಗೌಡ ಅವರು.
ಈ ಎರಡು ಅಕ್ರಮ ಕಟ್ಟಡಗಳ ತೆರವಿನ ಸಂದರ್ಭದಲ್ಲಿ ಪೋಲೀಸರ ಭದ್ರತೆ ಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಾಕವಾದ ಪ್ರಶಂಸೆ ಗೆ ಗುರಿಯಾಗಿದೆ.
ಅಕ್ರಮ ಕಟ್ಟಡ ತೆರವಿನ ಹಿಂದೆ ಮೂವರು ಮಹಿಳಾ ಅಧಿಕಾರಿಗಳ ಪ್ಲಾನ್ ?
ಈ ಕಟ್ಟಡ ತೆರವಿನ ಹಿಂದೆ ಯಾರು ಕೆಲಸ ಮಾಡಿದ್ದಾರೆ ಎಂದು ಗೊತ್ತೇ?
ಮೂವರು ಮಹಿಳಾ ಅಧಿಕಾರಿಗಳು ಮಾಡಿದ ಪ್ಲಾನ್ ವರ್ಕ್ ಆಗಿದೆ. ಬಂಟ್ವಾಳ ನೇರ ನಡೆನುಡಿಯ ತಾಲೂಕು ದಂಡಾಧಿಕಾರಿ ರಶ್ಮಿ ಅವರ ಜೊತೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಪಾಣೆಮಂಗಳೂರು ಗ್ರಾಮ ಲೆಕ್ಕಾಧಿಕಾರಿ ವಿಜೇತ ಅವರ ಪ್ಲಾನ್ ಗುರಿ ಮುಟ್ಟಿದೆ.
ಇವರ ಜೊತೆಯಲ್ಲಿ ಗ್ರಾಮ ಸಹಾಯಕಿ ಯಶೋಧ ಹಾಗೂ ಡಿ.ಟಿ.ರಾಜೇಶ್ ನಾಯಕ್, ಕಂದಾಯ ನಿರೀಕ್ಷಕ ನವೀನ್ ಮತ್ತು ಕಂದಾಯ ಇಲಾಖೆಯ ತಂಡ ಕೆಲಸ ಮಾಡಿದೆ.


