ಬಂಟ್ವಾಳ: ಸುಮಾರು ವರ್ಷಗಳ ಹಳೆಯದಾದ ಸಾಕಷ್ಟು ವಿವಾದಾತ್ಮಕ ಪಾಣೆಮಂಗಳೂರು ಅನೈತಿಕ ಚಟುವಟಿಕೆ ಯ ತಾಣ, ಅಕ್ರಮ ಸುಣ್ಣದ ಗೂಡು ಕಟ್ಟಡ ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯ್ಕ್ ಅವರ ಅದೇಶದಂತೆ, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ನಿರ್ದೇಶನದಂತೆ ಪೋಲೀಸರ ಬಿಗಿ ಭದ್ರತೆ ಯಲ್ಲಿ ಜೆಸಿಬಿ ಬಳಸಿ ನೆಲಸಮಮಾಡಲಾಯಿತು.
ಅಕ್ರಮ ಚಟುವಟಿಕೆಗಳ ತಾಣವಾಗಿ ಸುಮಾರು ವರ್ಷಗಳಿಂದ ಸುದ್ದಿಯಾಗಿದ್ದ ಪಾಣೆಮಂಗಳೂರು ಸುಮಾರು 14 ಅಕ್ರಮ ಸುಣ್ಣದ ಗೂಡು ಕೊನೆಗೂ ಇತಿಹಾಸದ ಪುಟದಿಂದ ಮರೆಯಾಯಿತು.
ಸುಣ್ಣದ ಗೂಡು ತೆರವು ಮಾಡಬಾರದು , ಮಾಡಲೇಬೇಕು ಎಂಬ ಎರಡು ಗುಂಪಿನ ಮಧ್ಯೆ ಯಾವುದೇ ಗೊಂದಲ ಗಳು ಅಗಬಾರದು ಎಂಬ ಉದ್ದೇಶದಿಂದ ಬಂಟ್ವಾಳ
ಎ.ಎಸ್.ಪಿ. ಸೈದುಲು ಅಡಾವತ್ ನೇತ್ರತ್ವದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗಾರಾಜ್ ಹಾಗೂ ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್, ಗ್ರಾಮಾಂತರ ಎಸ್.ಐ.ಪ್ರಸನ್ನ, ವಿಟ್ಲ ಎಸ್.ಐ.ಎಲ್ಲಪ್ಪ, ಅಪರಾಧ ವಿಭಾಗದ ಎಸ್.ಐ.ಸುಧಾಕರ ತೋನ್ಸೆ ಅವರನ್ನೊಳಗೊಂಡ ತಂಡ ಬಿಗಿಬಂದೋಬಸ್ತ್ ಮಾಡಿದ್ದರು.
ಬಂಟ್ವಾಳ ದ ದಿಟ್ಟ ಮಹಿಳಯೆ ದಿಟ್ಟ ಹೆಜ್ಜೆಯಿಂದ ಅಕ್ರಮ ಕಟ್ಟದದ ತೆರವು ಕಾರ್ಯ ಬಹಳ ಅಚ್ಚುಕಟ್ಟಾಗಿ ನಡೆದಿದೆ.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಅರ್ ಅವರು ತೆಗೆದು ಕೊಂಡ ನಿರ್ಣಯ ಸುಮಾರು ವರ್ಷಗಳಿಂದ ಯಾವ ಅಧಿಕಾರಿಗಳಿಂದಲೂ ಮಾಡಲಾಗದ ಉತ್ತಮ ಕಾರ್ಯ ಯಾವುದೇ ಅಡೆತಡೆಗಳಿಲ್ಲದೆ ನೆರವೇರಿದೆ.
ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಕಂದಾಯ ನಿರೀಕ್ಷಕ ನವೀನ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು , ಸಿಬ್ಬಂದಿಗಳು, ಪುರಸಭಾ ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.
2006ನೇ ಇಸವಿಯಲ್ಲಿ ಸುಣ್ಣ ತಯಾರಿಕೆಗೆ ಬ್ರೇಕ್ ಬಿದ್ದಿತ್ತು:
ವಾಹನ ಹೋಗುವಾಗ ಸುಣ್ಣದ ಹೊಗೆ ಬಂದು ವಾಹನ ಚಲಾಯಿಸುವವರಿಗೆ ರಸ್ತೆ ಕಾಣದೆ ಅಪಘಾತ ಸಂಭವಿಸಿತ್ತು, ಸಾವು ನೋವು ಕೂಡಾ ಅಗಿತ್ತು ಎಂಬ ಕಾರಣಕ್ಕೆ ಸುಣ್ಣ ಬೇಯಿಸುವುದನ್ನು ನಿಲ್ಲಿಸಬೇಕು ಎಂಬ ದೂರಿನ ಹಿನ್ನೆಲೆಯ ಲ್ಲಿ ಪುರಸಭೆ ತಡೆ ನೀಡಿತ್ತು.
ಈ ಕಾರಣಕ್ಕಾಗಿ
2007 ರಿಂದ ಪುರಸಭೆ ಇದರ ಟ್ಯಾಕ್ಸ್ ಪಡೆದುಕೊಳ್ಳುವುದನ್ನು ನಿಲ್ಲಿಸಿತ್ತು. ಮೆಸ್ಕಾಂ ಇಲಾಖೆ ವಿದ್ಯುತ್ ಕಡಿತಗೊಳಿಸಿತ್ತು.
2010 ರ ಬಳಿಕ ಇಲ್ಲಿ ಅಂದ್ರ , ಧಾರವಾಡ, ಹುಬ್ಬಳ್ಳಿ ಯ ಕಡೆಯಿಂದ ದ.ಕ.ಜಿಲ್ಲೆಗೆ ಕೆಲಸ ಕ್ಕೆಂದು ಬಂದವರು ಈ ಕಟ್ಟಡದ ಲ್ಲಿ ವಾಸವಾಗಿದ್ದರು.
ಅದರೆ ಈ ಕಟ್ಟಡ ಸಂಪೂರ್ಣ ಅಕ್ರಮವಾಗಿದ್ದು ಈ ಕಟ್ಟಡದ ವಾರೀಸುದಾರರೆಂದು ಪಿ.ಎಮ್ . ಇಬ್ರಾಹಿಂ, ಎನ್. ಅಹಮ್ಮದ್ , ಅಬ್ದುಲ್ ಖಾದರ್, ಪಿ.ಎಮ್ ಅಹಮ್ಮದ್ , ಪಿ.ಎಂ.ಇಕ್ಬಾಲ್, ಇಕ್ಬಾಲ್ ಅವರು ಕೂಲಿ ಕಾರ್ಮಿಕರ ಕೈಯಿಂದ ಬಾಡಿಗೆ ಹಣವನ್ನು ಪಡೆಯುತ್ತಿದ್ದರು.
ಅನೇಕ ನಿರ್ಣಯಗಳು ಪುಸ್ತಕಕ್ಕೆ ಸೀಮಿತವಾಗಿತ್ತು:
ಸುಣ್ಣದ ಗೂಡಿನಲ್ಲಿ ಹೊರಜಿಲ್ಲೆಯಿಂದ ಇಲ್ಲಿಗೆ ಕೆಲಸ ಹುಡುಕಿಕೊಂಡು ಬರುವ ಕುಟುಂಬಗಳು ಅನೇಕ ವರ್ಷಗಳಿಂದ ವಾಸಮಾಡುತ್ತಿದ್ದವು.
ಈ ಕಟ್ಟಡ ಅಕ್ರಮವಾಗಿದ್ದು ಸರಿಯಾದ ಯಾವುದೇ ವ್ಯವಸ್ಥೆ ಗಳು ಇರಲಿಲ್ಲ. ಹಾಗಾಗಿಯೇ ವರ್ಷದ ಹಿಂದೆ ವಿದ್ಯುತ್ ಶಾಕ್ ಹೊಡೆದು ಇಲ್ಲಿ ಮೃತಪಟ್ಟ ಘಟನೆ ಕೂಡಾ ನಡೆದಿದೆ.
ಜೊತೆಗೆ ಇಲ್ಲಿ ವಾಸಿಸುವ ಕೂಲಿಕಾರರಿಗೆ ಸ್ನಾನ ಮಾಡಲು ಬಚ್ಚಲು ಕೊಟ್ಟಿಗೆಯಿಲ್ಲ, ಮಲಮೂತ್ರಕ್ಕೆ ಶೌಚಾಲಯದ ವ್ಯವಸ್ಥೆ ಯೂ ಇಲ್ಲ. ಹಾಗಾಗಿ ಇವರು ಈ ಎರಡು ಕೆಲಸಕ್ಕಾಗಿ ನೇತ್ರಾವತಿ ನದಿಯನ್ನು ಬಳಕೆ ಮಾಡುತ್ತಿದ್ದರು.
ಇದರಿಂದ ನೇತ್ರಾವತಿ ನೀರು ಮಲಿನವಾಗುತ್ತಿತ್ತು. ಈ ನೀರು ಕುಡಿಯಲು ಉಪಯೋಗಿಸುವುದರಿಂದ ರೋಗದ ಬೀತಿಯಲ್ಲಿ ಇಲ್ಲಿನ ನಿವಾಸಿಗಳು ಈ ಬಗ್ಗೆ ಅನೇಕ ಬಾರಿ ಸ್ಥಳೀಯ ಪುರಸಭೆಯ ಗಮನಕ್ಕೆ ತಂದಿದ್ದರಲ್ಲದೆ, ಲಿಖಿತ ದೂರು ಕೂಡಾ ಸಲ್ಲಿಕೆಯಾಗಿತ್ತು.
ಸಾಕ್ಷಿ ಸಮೇತ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ ಕೂಡಾ ಪುರಸಭೆಯ ಮುಖ್ಯಾಧಿಕಾರಿಗಳು ಯಾವುದೇ ಕ್ರಮಕೈಗೊಂಡಿರಲಿಲ್ಲ. ಈ ಅಕ್ರಮ ಕಟ್ಟಡದಲ್ಲಿ ಅನೈತಿಕ ವ್ಯವಹಾರ ಹಾಗೂ ಅಕ್ರಮ ಚಟುವಟಿಕೆ ಗಳು ನಡೆಯುತ್ತವೆ ಎಂಬ ಆರೋಪದಲ್ಲಿ ಕಟ್ಟಡ ತೆರವು ಮಾಡುವಂತೆಯೂ ಅನೇಕ ಬಾರಿ ಪುರಸಭಾ ಮೀಟಿಂಗ್ ನಲ್ಲಿ ನಿರ್ಣಯ ವಾಗಿತ್ತು. ಆದರೆ ಕಾಣದ ಕೈಗಳ ಕೆಲಸದಿಂದಾಗಿ ಈ ಕಟ್ಟಡಕ್ಕೆ ಯಾರ ವಕ್ರದೃಷ್ಟಿಯೂ ಬೀಳದೆ ಸೇಫ್ ಅಗಿತ್ತು.
ಪ್ರತಿ ವರ್ಷ ಮಳೆಗೆ ಸುಣ್ಣದ ಗೂಡು ಮುಳುಗಡೆಯಾದ ಚಿತ್ರ ಪೇಪರ್ ಗಳಲ್ಲಿ ಪ್ರಕಟಗೊಳ್ಳುತ್ತದೆ, ಪರಿಹಾರದ ಮೊತ್ತವೂ ಇವರ ಪಾಲಿಗೆ ದಕ್ಕುತ್ತದೆ.
ಆದರೆ ಈ ಕಟ್ಟಡವನ್ನು ನೆಲಸಮ ಮಾಡಲು ಪಣ ತೊಟ್ಟ ತಹಶೀಲ್ದಾರ್ ಅವರಿಗೆ ಅನೇಕ ಅಡೆತಡೆಗಳು, ವಿಘ್ನಗಳು ಎದುರಾದವು , ನಿಗದಿಯಾದ ದಿನಗಳು ಮುಂದೆ ಮುಂದೆ ಹೋದವು , ಆದರೂ ಛಲಬಿಡದ ಅವರು ಕೊನೆಗೂ ಅಕ್ರಮ ಚಟುವಟಿಕೆಯ ತಾಣವಾಗಿರುವ ಸುಣ್ಣದ ಗೂಡು ತೆರವು ಮಾಡುವ ಮೂಲಕ ಬಂಟ್ವಾಳದ ಜನರಿಗೆ ಉತ್ತಮ ಸಂದೇಶ ನೀಡಿದ್ದಾರೆ .