ಬಂಟ್ವಾಳ: ಅಮ್ಟಾಡಿ ಗ್ರಾಮ ದೈವವಾದ ಶ್ರೀ ಅಣ್ಣಪ್ಪ ಸ್ವಾಮಿಯ ಇತಿಹಾಸವನ್ನು ತಿರುಚಿ ಗುತ್ತುವಿನ ಮನೆ ದೈವವೆಂದು ಬಿಂಬಿಸಲು ಹೊರಟಿರುವ ಹುನ್ನಾರದ ವಿರುದ್ದ ಹೋರಾಟಕ್ಕೆ ಹಿಂದೂ ಶಕ್ತಿ ಅಮ್ಟಾಡಿ ವಲಯ ಸಜ್ಜಾಗುತ್ತಿದೆ ಎಂದು ಪ್ರಶಾಂತ್ ಕೆಂಪು ಗುಡ್ಡೆ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ನೂರಾರು ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ದೈವ ಶ್ರೀ ಅಣ್ಣಪ್ಪ ಸ್ವಾಮಿಯು ಕುಡುಮ ಪುರದಿಂದ ( ಧರ್ಮಸ್ಥಳ) ಬರುವಾಗ ಅಮ್ಟಾಡಿಯ ಅಕ್ಕೇರಿಪಾದೆ ಎಂಬಲ್ಲಿ ನೆಲೆನಿಂತು ಮುಂದೆ ತನ್ನ ನೇಮ ಉತ್ಸವಗಳಿಗಾಗಿ ಅಕ್ಕೇರಿಪಾದೆಯ ಎದುರಿನಲ್ಲಿರುವ ಮಂಗ್ಲಿಮಾರ್ ಎಂಬ ಸ್ಥಳ ವನ್ನು ಆಯ್ಕೆ ಮಾಡಿ ಗ್ರಾಮ ದೈವವಾಗಿ ನೆಲೆ ನಿಂತಿತು ಎಂಬುದು ಇತಿಹಾಸ ಮತ್ತು ಮತ್ತು ದೈವದ ಪಾಡ್ದನದಲ್ಲಿ ಉಲ್ಲೇಖವಾಗಿರುದು ಸತ್ಯ.
ಆದರೆ ಕೆಲ ಪಟ್ಟ ಬದ್ದ ಹಿತಾಸಕ್ತಿ ಗಳು 1984 ರಿಂದಲೂ ವಿವಿಧ ಕಾರಣಗಳನ್ನು ನೀಡಿ ದೈವ ಮತ್ತು ದೇವಸ್ಥಾನವನ್ನು ತಮ್ಮ ಮನೆಯ ಆಸ್ತಿ ಎಂಬಂತೆ ಬಿಂಬಿಸಲು ಹೊರಟಿದ್ದವು.
ಅದರೆ ಗ್ರಾಮಸ್ಥರ ಹಾಗೂ ಬೇರೆ ಗುತ್ತಿನವರ ವಿರೋಧದಿಂದ ಇದು ನಡೆಯಲಿಲ್ಲ. ಆದರೆ ಮತ್ತೆ ಈ ಹುನ್ನಾರ ಚಿಗುರೊಡೆಯಲು
ಪ್ರಾರಂಭಿಸಿದ್ದು ಕೆಲವು ದಿನಗಳ ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ಲಹರಿ ಸಂಸ್ಥೆ ಬಿಡುಗಡೆಗೊಳಿಸಿದ ದಿ| ಏರ್ಯ ಲಕ್ಮೀನಾರಾಯಣ ಆಳ್ವರ ಸಾಹಿತ್ಯದ ” ಭಾವಗೀತೆಗಳು “ ಧ್ವನಿ ಸುರುಳಿಯ ಪ್ರಥಮ ಸುತ್ತಿನಲ್ಲಿ ಶ್ರೀ ಅಣ್ಣಪ್ಪ ಸ್ವಾಮಿಯ ಕುಡುಮ ಪುರದಿಂದ ಏರ್ಯ ಬೀಡುವಿಗೆ ಬಂದು ಏರ್ಯದ ಮನೆಗೆ ಬಂದು ಏರ್ಯದ ಮನೆ ದೈವವೆಂದು ಬಿಂಬಿಸಲಾಗಿದೆ. ಇಂತಹ ಇತಿಹಾಸವನ್ನು ಹಿಂದೂ ಶಕ್ತಿ ಉಗ್ರವಾಗಿ ಖಂಡಿಸುತ್ತದೆ.
ಮತ್ತು ಪ್ರಕ್ರಿಯೆ ಮುಂದುವರಿದಲ್ಲಿ ಇಂತಹ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಯಾವುದೇ ರೀತಿಯ ಹೋರಾಟಕ್ಕೆ ಶ್ರೀ ಕ್ಷೇತ್ರದ ಆರಾಧನ ಸಮಿತಿಯೊಂದಿಗೆ ಹಿಂದೂ ಶಕ್ತಿ ಸಂಪೂರ್ಣ ವಾಗಿ ಬೆಂಬಲಕ್ಕೆ ನಿಲ್ಲಲಿದೆ ಮತ್ತು ಈ ಹೋರಾಟಕ್ಕೆ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳನ್ನು ಒಟ್ಟು ಸೇರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ