ಬಂಟ್ವಾಳ: ಬೈಕ್ ಹಾಗೂ ಒಮ್ನಿ ಕಾರು ನಡುವೆ ನಡೆದ ಅಪಘಾತ ದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ವಿಟ್ಲ ನಾಡಕಚೇರಿ ಬಳಿ ಬುಧವಾರ ಸಂಜೆ ನಡೆದಿದೆ.
ಪೊನ್ನೊಟ್ಟು ನಿವಾಸಿ ಮಹಮ್ಮದ್ ಗಮಿ ಅವರ ಪುತ್ರ ಜುನೈದ್ ಎಂಬವರು ಗಾಯಗೊಂಡಿದ್ದು ಪುತ್ತೂರು ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾನೆ.
ವಿಟ್ಲದಿಂದ ಸಾಲೆತ್ತೂರು ರಸ್ತೆಯಲ್ಲಿ ತೆರಳುತ್ತಿರುವ ವೇಳೆ ಸಾಲೆತ್ತೂರು ಕಡೆಯಿಂದ ಬಂದ ಒಮ್ನಿ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಸ್ಥಳಕ್ಕೆ ವಿಟ್ಲ ಪೋಲೀಸ್ ಠಾಣಾ ಎಸ್ ಐ ಯಲ್ಲಪ್ಪ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.