ವಿಟ್ಲ: ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ನೆರೆ ಸಂತ್ರಸ್ತರಿಗೆ ವಿಶೇಷ ಪ್ರಾರ್ಥನೆ, ಪರಿಹಾರ ನಿಧಿ ಸಂಗ್ರಹಿಸಿ ಸಂಭ್ರಮವಿಲ್ಲದೇ ಪರಸ್ಪರ ಶುಭಾಶಯ ವಿನಿಮಯ ಮಾಡುವ ಮೂಲಕ ಸರಳವಾಗಿ ಈದುಲ್ ಅಝ್ಹಾ (ಬಕ್ರೀದ್) ಹಬ್ಬವನ್ನು ಆಚರಿಸಿಕೊಂಡರು.
ಕೇಂದ್ರ ಜುಮಾ ಮಸೀದಿ, ವಿಟ್ಲ ದಾರುಲ್ ಅಶ್ ಅರಿಯ್ಯ ಟೌನ್ ಮಸೀದಿ, ನೀರಕ್ಕಣಿ ಸಿರಾಜುಲ್ ಹುದಾ-ಮದ್ರಸ, ವಿಟ್ಲ ಉಕ್ಕುಡ ಬದ್ರಿಯಾ ಜುಮಾ ಮಸೀದಿ, ಪರ್ತಿಪ್ಪಾಡಿ ಜುಮಾ ಮಸೀದಿ, ಕೊಡಾಜೆ ಬದ್ರಿಯಾ ಜುಮಾ ಮಸೀದಿ, ಪೆರುವಾಯಿ ಬದ್ರಿಯಾ ಜುಮಾ ಮಸೀದಿ, ಕೊಡಂಗಾಯಿ ಮುಹಿಯುದ್ದೀನ್ ಜುಮಾ ಮಸೀದಿ, ಉಕ್ಕುಡ ಜುಮಾ ಮಸೀದಿ, ಒಕ್ಕೆತ್ತೂರು ಬದ್ರಿಯ ಜುಮಾ ಮಸೀದಿ, ಟಿಪ್ಪುನಗರ ಕೊಡಂಗಾಯಿ ಇಮಾಂ ಶಾಫಿ ಜುಮಾ ಮಸೀದಿ, ಮಂಗಿಲಪದವು ಬಿಲಾಲ್ ಜುಮಾ ಮಸೀದಿ, ಕೊಡಂಗೆ ಖಿಳ್ರಿಯಾ ಜುಮಾ ಮಸೀದಿ, ನೀರ್ಕಜೆ ಮಸ್ಜಿದ್ ಸ್ವಹಾಬ, ಪರಿಯಾಲ್ತಡ್ಕ ಜುಮಾ ಮಸೀದಿ, ಪರಿಯಾಲ್ತಡ್ಕ – ಅಜ್ಜಿನಡ್ಕ ಮಸೀದಿ, ಕಾನತಡ್ಕ ಖಿಳ್ರಿಯಾ ಜುಮಾ ಮಸೀದಿ, ಕೆಲಿಂಜ ಮುಹಿಯುದ್ದೀನ್ ಜುಮಾ ಮಸೀದಿ ಕೆಲಿಂಜ, ಪೆರ್ನೆ ಬದ್ರಿಯಾ ಜುಮಾ ಮಸೀದಿ, ಗಡಿಯಾರ ಜುಮಾ ಮಸೀದಿ, ಬುಡೋಳಿ ಬಿಲಾಲ್ ಮಸ್ಜಿದ್ ಏನಾಜೆ, ಬುಡೋಳಿ ಗೌಸಿಯಾ ಜುಮಾ ಮಸೀದಿ, ಸೂರಿಕುಮೇರು ಬದ್ರಿಯಾ ಜುಮಾ ಮಸೀದಿ, ಪೇರಮೊಗರು ಬದ್ರಿಯಾ ಜುಮಾ ಮಸೀದಿ, ನಚ್ಚೆಬೊಟ್ಟು ಬದ್ರಿಯಾ ಜುಮಾ ಮಸೀದಿ, ಶೇರಾ ಖಿಳ್ರ್ ಜುಮಾ ಮಸೀದಿ, ಮಾಣಿ ದಾರುಲ್ ಇರ್ಶಾದ್ ಜುಮಾ ಮಸೀದಿ, ಸುರಿಬೈಲು ಬದ್ರಿಯಾ ಜುಮಾ ಮಸೀದಿ, ಕೆದಿಲ ಮಸ್ಜಿದುರ್ರಹ್ಮಾನ್, ಪುನರೂರು ಮುಹಿಯುದ್ದೀನ್ ಜುಮಾ ಮಸೀದಿ, ಕಿನ್ನಿಗೋಳಿ-ಶಾಂತಿನಗರ ಖಿಲ್ರಿಯಾ ಜುಮಾ ಮಸೀದಿ ಗುತ್ತಕಾಡು, ಪಾವೂರು ಬಚ್ಚಳಿಕೆ ಮಸ್ಜಿದ್ ಜಬಲನ್ನೂರು, ತುರ್ಕಳಿಕೆ ಬದ್ರಿಯಾ ಜುಮಾ ಮಸೀದಿಗಳಲ್ಲಿ ಈದ್ ಆಚರಣೆ ಮಾಡಲಾಯಿತು.
ಈದ್ ಪ್ರಾರ್ಥನೆಯ ಬಳಿಕ ಮುಸ್ಲಿಮರು ಪರಸ್ಪರ ಹಸ್ತಲಾಘವ, ಆಲಿಂಗನ ಮಾಡುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮುಂಜಾನೆಯೇ ಹೊಸ ವಸ್ತ್ರಗಳನ್ನು ಧರಿಸಿ ಪುರುಷರು ಹಾಗೂ ಮಕ್ಕಳು ಮಸೀದಿಗೆ ಬಂದು ದಿನದ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ದಾನ ಧರ್ಮಗಳನ್ನು ನಡೆಸುವ ಮೂಲಕ ಕೃತಾರ್ಥರಾದರು. ನಾನಾಕಡೆ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗಾಗಿ ಕಿಟ್, ದೇಣಿಗೆಯನ್ನು ಸಂಗ್ರಹಿಸುವ ಮೂಲಕ ಹಬ್ಬವನ್ನು ಸರಳವಾಗಿ ಆಚರಿಸಿದರು.

ವಿಟ್ಲದ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬು ಮೊಹಮ್ಮದ್ ಅಲಿ ಫೈಝಿ ಇರ್ಫಾನಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಂದೇಶ ನೀಡಿ ಬಕ್ರೀದ್ ಹಬ್ಬ ತ್ಯಾಗ ಬಲಿದಾನಗಳ ಪ್ರತೀಕವಾಗಿದೆ. ದೇವರು ನಮಗೆ ನೀಡಿದ ಅನುಗ್ರಹವನ್ನು ಉತ್ತಮ ಕಾರ್ಯಗಳ ಮೂಲಕ ಸದ್ವಿನಿಯೋಗಪಡಿಸಬೇಕು. ಹಬ್ಬಗಳು ಕೇವಲ ಸಂಭ್ರಮಗಳಿಗೆ ಸೀಮಿತವಾಗಬಾರದು. ಬಡ ನಿರ್ಗತಿಕರ ಸೇವೆ ಮಾಡಿದಾಗ ದೇವರು ಮೆಚ್ಚುತ್ತಾನೆ. ಮನುಷ್ಯನ ಅಹಂಕಾರ ದುರಾಸೆಗೆ ಪ್ರತಿಯಾಗಿ ಪ್ರವಾಹಗಳು ಉಂಟಾಗುತ್ತಿದೆ. ನೆರೆಪೀಡಿತರಿಗೆ ದುಃಖವನ್ನು ಸಹಿಸುವ ಶಕ್ತಿ ತುಂಬಬೇಕು ಎಂದು ಹೇಳಿದರು.
ಮುಹಿಯ್ಯದ್ದೀನ್ ಜುಮ್ಮಾ ಮಸೀದಿ ಕೆಲಿಂಜ ದಲ್ಲಿ ಈದ್ ನಮಾಜ್ ಗೆ ಸ್ಥಳೀಯ ಖತೀಬು ಉಸ್ತಾದ್ ಅಬ್ಬಾಸ್ ದಾರಿಮಿ ಕೆಲಿಂಜ ನೇತೃತ್ವ ನೀಡಿದರು. ನಮಾಜ್ ಗೆ ಮೊದಲು ಈದ್ ಸಂದೇಶ ನೀಡಿ ಬಕ್ರೀದ್ ತ್ಯಾಗ ಬಲಿದಾನದ ಸಂಕೇತವಾಗಿದೆ ನಾವೆಲ್ಲರೂ ಶಾಂತಿ ಸಮದಾನ ಸಹೋದರತೆಯಿಂದ ಜೀವಿಸಬೇಕು ಮತ್ತು ಜಲಪ್ರವಾಹ ಪೀಡಿತರಿಗೆ ಪ್ರತ್ಯೇಕ ದುವಾ ಮಾಡಿದರು.
ವಿಟ್ಲ ಟೌನ್ ಅಶ್ ಅರಿಯ್ಯ ಜುಮಾ ಮಸೀದಿಯಲ್ಲಿ ಅಬ್ಬಾಸ್ ಮದನಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here