ಬಂಟ್ವಾಳ: ಟೋಲ್ ಗೇಟ್ ಎಂಬ ಹೆಸರಿನಲ್ಲಿ ಲಕ್ಷಾಂತರ ರೂ ದೋಚುವ ಅವೈಜ್ಞಾನಿಕ ಟೋಲ್ ಮುಚ್ಚಬೇಕು ಇಲ್ಲವೇ ಸುಸಜ್ಜಿತ ವಾಗಿ ಪುನರ್ ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ಇದರ ವಿರುದ್ಧ ಮತ್ತೊಮ್ಮೆ ಸಾರ್ವಜನಿಕರು ಹೋರಾಟದ ಹಾದಿಹಿಡಿಯಬೇಕಾಗಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ.

ಅಂದ ಹಾಗೆ ಇದು ಯಾವ ಟೋಲ್ ಗೇಟ್ ಎಂದು ಕೇಳುತ್ತೀರಾ?
ಅದೇ ಸ್ವಾಮಿ ಬಂಟ್ವಾಳ ತಾಲೂಕಿನ ಬ್ರಹ್ಮರಕೋಟ್ಲು ಟೋಲ್ ಗೇಟ್… ಕಳೆದ ಹಲವಾರು ವರ್ಷಗಳಿಂದ ಒಂದಲ್ಲ ಒಂದು ಸಮಸ್ಯೆ ಯಿಂದ ಪ್ರಚಲಿತದಲ್ಲಿರುವ ಈ ಟೋಲ್ ದಿನಕ್ಕೊಂದು ವಿವಾದ ಸೃಷ್ಟಿ ಮಾಡುತ್ತಲೇ ಇರುತ್ತಾ ಸದಾ ಸುದ್ದಿ ಯಾಗುತ್ತಿದೆ.
ಪ್ರತಿ ದಿನವೂ ಇಲ್ಲಿ ಪೋಲೀಸರು ತಪ್ಪಿಲ್ಲ, ಕಿರಿಕ್ ಮುಗಿದಿಲ್ಲ.
ಟೋಲ್ ಸಂಗ್ರಹ ಮಾಡುವ ವೇಳೆ ಹೊಡೆದಾಟ ಬಡಿದಾಟಗಳು ನಡೆದಿದೆ.
ಅಷ್ಟಕ್ಕೂ ಈ ಟೋಲ್ ಗೇಟ್ ಮೀನು ಮಾರುಕಟ್ಟೆಯ ರೂಪದಲ್ಲಿದೆ ಎಂದು ಆರೋಪ ವ್ಯಕ್ತಪಡಿಸುವ ಸ್ಥಳೀಯರು ಒಂದು ವಿಡಿಯೋ ತುಣುಕುನ್ನು ವೈರಲ್ ಮಾಡಿದ್ದಾರೆ.
ಮಳೆ ಸುರಿದಾಗ ಈ ಟೋಲ್ ಗೇಟ್ ನಲ್ಲಿ ನೀರು ಸರಿಯಾಗಿ ಹರಿದು ಹೋಗದೆ ಟೋಲ್ ಹಣ ಪಡೆಯುವ ರಸ್ತೆಯಲ್ಲಿ ನೀರು ತುಂಬುತ್ತದೆ.
ಹೀಗೆ ನಿಂತ ನೀರಿನಲ್ಲಿ ಚಲಿಸಿದೆ ಬಾಕಿಯಾದ ಕಾರು. ನೀರಿನಲ್ಲಿ ಅರ್ಧ ಮುಳುಗಿದ ಕಾರನ್ನು
ಬಳಿಕ ಸಿಬ್ಬಂದಿ ಗಳು ಮುಂದೆ ದೂಡುವ ಬಗ್ಗೆ ವಿಡಿಯೋ ವೈರಲ್ ಅಗುತ್ತಿದೆ.
ನೀರು ಸರಿಯಾಗಿ ಹರಿದು ಹೋಗಲು ಈ ಟೋಲ್ ಗೇಟ್ ನಲ್ಲಿ ವ್ಯವಸ್ಥೆ ಇಲ್ಲದ ಮೇಲೆ ಇಲ್ಲಿನ ಸ್ಥಿತಿಯ ಬಗ್ಗೆ ನಾಚು ವಿವರಣೆ ನೀಡಬೇಕಾದ ಅಗತ್ಯತೆ ಇಲ್ಲ ಅಂತ ಕಾಣುತ್ತದೆ.

ಅದಕ್ಕಾಗಿ ಈ ಟೋಲ್ ನ ವಿರುದ್ದ ಜನ ಮತ್ತೆ ಭುಗಿಲೆದ್ದಿದ್ದಾರೆ. ಈ ಟೋಲ್ ಗೇಟ್ ಎಂಬುದು ಸಮಸ್ಯೆಯ ಆಗರವಾಗಿದೆ.
ಇಲ್ಲಿ ಯಾವುದು ಸರಿಯಿಲ್ಲ ಮೂಲಭೂತ ಸೌಕರ್ಯಗಳ ಕೊರತೆಯಿಂದ ಮೀನು ಮಾರುಕಟ್ಟೆ ಯಂತಿರುವ ಈ ಟೋಲ್ ಗೇಟ್ ಸಂಪೂರ್ಣ ಬಂದ್ ಅಗಬೇಕು ಎಂಬುದು ವಾಹನ ಸವಾರರ ಮನವಿ.

ಪಾಣೆಮಂಗಳೂರು ನೂತನ ಸೇತುವೆ ನಿರ್ಮಾಣದ ಬಳಿಕ ಈ ಸೇತುವೆಯ ಹಣವನ್ನು ಭರಿಸುವ ಉದ್ದೇಶ ದಿಂದ ಪಾಣೆಮಂಗಳೂರು ಎಂಬಲ್ಲಿ ಟೋಲ್ ಗೇಟ್ ನಿರ್ಮಾಣವಾಗಿತ್ತು. ಅಲ್ಲೂ ಕೂಡಾ ಅವೈಜ್ಞಾನಿಕ ರೀತಿಯಲ್ಲಿ ಆರಂಭವಾದ ಟೋಲ್ ನಿತ್ಯವೂ ಗಲಾಟೆಗೆ ಸಾಕ್ಷಿಯಾಗಿತ್ತು. ಈ ಟೋಲ್ ನ ಬಗ್ಗೆ ಸಾಕಷ್ಟು ಪ್ರತಿಭಟನೆಗಳು ಕೂಡಾ ನಡೆದಿತ್ತು.
ಬಳಿಕ ಸಾಕಷ್ಟು ದೂರಿನ ಹಿನ್ನೆಲೆಯಲ್ಲಿ ಈ ಟೋಲ್ ಗೇಟ್ ಬ್ರಹ್ಮರಕೋಟ್ಲು ಇಲ್ಲಿಗೆ ಸ್ಥಳಾಂತರ ಮಾಡಲಾಯಿತು.
ಅದರೆ ಅಲ್ಲಿ ಕೂಡ ಸಂಪೂರ್ಣ ವಾಗಿ ಇಲಾಖೆಯ ಅಡಿಯಲ್ಲಿ ಇರಬೇಕಾದ ರೀತಿಯಲ್ಲಿ ಈ ಟೋಲ್ ಗೇಟ್ ನಿರ್ಮಾಣವಾಗಿಲ್ಲ.
ಅಲ್ಲಿಂದ ಇಲ್ಲಿಯವರಗೂ ಅದೇ ರೀತಿಯಲ್ಲಿ ಇರುವ ಟೋಲ್ ನ ವಿರುದ್ದ ಸಾಕಷ್ಟು ಬಾರಿ ಟೋಲ್ ಗೇಟ್ ನ ಮುಚ್ಚಬೇಕು ಎಂಬ ಕೂಗು ಕೇಳುತ್ತಲೇ ಇದೆ, ಪ್ರತಿಭಟನೆಗಳು ನಡೆಯುತ್ತಲೇ ಇದೆ.
ಎಷ್ಟು ವರ್ಷ ಈ ಟೋಲ್ ಕಾರ್ಯರಂಭ ಮಾಡುತ್ತದೆ ಎಂಬ ಸರಿಯಾದ ಮಾಹಿತಿ ನೀಡಿದ ಗುತ್ತಿಗೆದಾರರು ರಸ್ತೆ ದಾರಿ ದೀಪ, ಬಸ್ ನಿಲ್ದಾಣ, ಹಾಗೂ ರಸ್ತೆಯಲ್ಲಿರುವ ಗುಂಡಿ ಗಳನ್ನು ಮುಚ್ಚವಂತೆ ಅಗ್ರಹ ವ್ಯಕ್ತಪಡಿಸುತ್ತಾರೆ.

ರಾಜ್ಯಧ್ಯಕ್ಚರಾಗಿ ಆಯ್ಕೆ ಯಾದ ದ.ಕ.ಜಿಲ್ಲಾ ಸಂಸದ ನಳಿನ್ ಅವರಿಗೆ ಅನೇಕ ಸವಾಲುಗಳ ಮಧ್ಯೆ ಬಂಟ್ವಾಳ ದ ಟೋಲ್ ಕೂಡಾ ಒಂದು ಎಂಬ ಮನವರಿಕೆ ಅಗಬೇಕಾಗಿದೆ ಜೊತೆಗೆ ಹೆದ್ದಾರಿ ಯಲ್ಲಿರುವ ಗುಂಡಿಗೆಯ ಬಗ್ಗೆ ಯೂ ಗಮನಹರಿಸಬೇಕಾಗಿದೆ.
ರಾಜ್ಯದ ಜವಬ್ದಾರಿ ಯ ಹೊಣೆಹೊತ್ತಿರುವ ಇವರು ಸಂಸದರು ಕೂಡಾ ಹೌದು ಈ ಸಂದರ್ಭದಲ್ಲಿ ಯಾದರೂ ದ.ಕ.ಜಿಲ್ಲೆಯ ಸಮಸ್ಯೆ ಯಲ್ಲಿ ಒಂದಾದ ಟೋಲ್ ಗೇಟ್ ನ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಾರಾ ಎಂಬುದು ಕಾದುನೋಡಬೇಕಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here