ಬಂಟ್ವಾಳ: ಸಾಹಿತ್ಯ ಕ್ಷೇತ್ರದಲ್ಲಿ ನಾಟಕ ಪ್ರಕಾರವು ಅತೀ ಪ್ರಾಚೀನವಾದುದು. ಷೇಕ್ಸ್‌ಪಿಯರ್ ನಂತಹ ಆಂಗ್ಲ ನಾಟಕಕಾರರು ನಾಟಕ ಕ್ಷೇತ್ರದಲ್ಲೇ ಹೆಸರನ್ನು ಗಳಿಸಿದವರು. ಷೇಕ್ಸ್‌ಪಿಯರ್ ನಾಟಕಗಳ ತರುವಾಯ ಇತರ ಭಾಷೆಗಳಲ್ಲಿ ನಾಟಕ ಪ್ರಕಾರವು ಬೆಳೆಯಿತು. ಸಾರ್ವಕಾಲಿಕ ಮಹತ್ವವನ್ನು ಷೇಕ್ಸ್‌ಪಿಯರ್ ನಾಟಕಗಳು ಪಡೆದುಕೊಂಡಿವೆ ಎಂದು ಬಂಟ್ವಾಳದ ಎಸ್.ವಿ.ಎಸ್ ಪದವಿಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕ ಸುದರ್ಶನ್ ಹೇಳಿದರು.
ಅವರು ಇಂದು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಲೈಬ್ರೈರಿ ಕ್ಲಬ್ ಮತ್ತು ಇಂಗ್ಲೀಷ್ ಸಂಘಗಳ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿವಿಸಿಟಿಂಗ್ ಷೇಕ್ಸ್‌ಪೀಯರ್ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು. ಷೇಕ್ಸ್‌ಪಿಯರ್ ನಾಟಕಗಳು ಎಲ್ಲ ವರ್ಗದ ಜನರನ್ನು ಸೆಳೆಯಬಲ್ಲ ಗುಣವುಳ್ಳದು. ಅತೀ ರೋಮಾಂಚನಕಾರಿ ಸನ್ನಿವೇಶಗಳನ್ನು ನಿರೂಪಿಸುವ ಗುಣಗಳು ನಾಟಕಕಾರನ ವಿಶೇಷತೆ ಎಂದವರು ಹೇಳಿದರು.
ಉಪನ್ಯಾಸ ಕಾರ್ಯಕ್ರಮದ ಆರಂಭದಲ್ಲಿ ಷೇಕ್ಸ್‌ಪೀಯರ್ ಕೃತಿಗಳ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗನಾಯಕ್‌ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಉಪಪ್ರಾಂಶುಪಾಲರು ಮತ್ತು ಲೈಬ್ರೈರಿ ಕ್ಲಬ್ ಅಧ್ಯಕ್ಷರಾದ ಡಾ| ಎಚ್.ಆರ್. ಸುಜಾತ, ಇಂಗ್ಲೀಷ್ ಸಂಘದ ಅಧ್ಯಕ್ಷರಾದ ಶಾಂತಿ ರೋಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಗರಾಜ್ ಸ್ವಾಗತಿಸಿದರು.  ವಿನುತ ವಂದಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here