ಬಂಟ್ವಾಳ: ಬಿಜೆಪಿ ಯುವಮೋರ್ಚಾ ಬಂಟ್ವಾಳದ ವತಿಯಿಂದ ಎರಡನೇ ದಿನ ಕೂಡ ಸದಸ್ಯತ್ವ ಅಭಿಯಾನ ಪೊಳಲಿ ಬಸ್ ನಿಲ್ದಾಣದ ಬಳಿ ಯುವಮೋರ್ಚಾ ಕಾರ್ಯದರ್ಶಿ ಲೋಕೇಶ್ ಭರಣಿ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ದೇಶದ ಸಮರ್ಥ ನಾಯಕತ್ವವನ್ನು ಮೆಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಸದಸ್ಯತ್ವವನ್ನು ಪಡೆದುಕೊಂಡರು ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ದೇವಪ್ಪ ಬಡಗಬೆಳ್ಳೂರು, ವೆಂಕಟೇಶ್ ನಾವಡ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಮಾರ್ಗದರ್ಶನ ಮಾಡಿದರು. ತಾಲೂಕು ಪಂಚಾಯತ್ ಸದಸ್ಯ ಯಶವಂತ್, ಕರಿಯಂಗಳ ಪಂಚಾಯತ್ ಅಧ್ಯಕ್ಷರಾದ ಚಂದ್ರಾವತಿ ಶುಭ ಕೋರಿದರು ಯುವಮೋರ್ಚಾ ಅಧ್ಯಕ್ಷರಾದ ವಜ್ರನಾಥ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಸಂತೋಷ್ ರಾಯಿಬೆಟ್ಟು, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುದರ್ಶನ್ ಬಜ, ಕ್ಷೇತ್ರ ಯುವಮೋರ್ಚಾ ಕಾರ್ಯದರ್ಶಿ ಸುರೇಶ್ ಕೋಟ್ಯಾನ್, ಲೋಹಿತ್ ಕೊಳ್ನಾಡು ಸಜಿಪಮುನ್ನೂರು ಶಕ್ತಿಕೇಂದ್ರದ ಯುವಮೋರ್ಚಾ ಅಧ್ಯಕ್ಷರು ಪಂಚಾಯತ್ ಸದಸ್ಯರಾದ ಕಿಶೋರ್ ಪಲ್ಲಿಪಾಡಿ. ಯುವಮೋರ್ಚಾ ಸದಸ್ಯರಾದ ಕಾರ್ತಿಕ್ ಬಲ್ಲಾಳ್, ಮೋಹನ್ ಕೊಟ್ಟಾರಿ, ಗ್ರಾಮ ಸಮಿತಿ ಅಧ್ಯಕ್ಷರಾದ ಗೋಪಾಲ್ ಬಂಗೇರ, ಪ್ರಮುಖರಾದ ಪ್ರತೀಶ್ ಅಜ್ಜಿಬೆಟ್ಟು, ಯತೀನ್ ಶೆಟ್ಟಿ ನಯನಾಡು ಉಪಸ್ಥಿತರಿದ್ದರು.