Wednesday, October 25, 2023

ಅಪಾಯದಲ್ಲಿ ರುವ ಮನೆಗಳಿಗೆ ನಾಡದೋಣಿಯ ಮೂಲಕ ಹೋಗಿ ವೀಕ್ಷಣೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

Must read

ಬಂಟ್ವಾಳ: ನೇತ್ರಾವತಿ ನದಿ ಕಿನಾರೆಯಲ್ಲಿ ಅಪಾಯದಲ್ಲಿರುವ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ನಿವಾಸಿಗಳಾದ ಜಯಪೂಜಾರಿ,ಬಾಲಕೃಷ್ಣ ಪೂಜಾರಿ, ಲಕ್ಷಣ ಪೂಜಾರಿ, ಪೂವಪ್ಪ ಪೂಜಾರಿ ಎಂಬವರ ಮನೆಗಳಿಗೆ ನಾಡದೋಣಿಯ ಮೂಲಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಬೇಟಿ ನೀಡಿ ಸ್ಥಳಾಂತರ ಮಾಡಲು ಬೇಕಾದ ವ್ಯವಸ್ಥೆ ಕಲ್ಪಿಸಲು ಅಧಿಕಾರಿ ಗಳಿಗೆ ಸೂಚಿಸಿದರು.


ಈ ಮನೆಯವರಿಗೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು ದ್ವೀಪದಂತಿರುವ ಪ್ರದೇಶಗಳಿಗೆ ನಾಡದೋಣಿಯ ಮೂಲಕ ಮಾತ್ರ ಸಂಪರ್ಕ ಸಾಧ್ಯವಿದೆ.
ಹಾಗಾಗಿ ಅ ಮನೆಯ ಕಡೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಬೇಟಿ ನೀಡಿದರು.
ಬಳಿಕ ಅರ್ಧ ಜಲಾವೃತಗೊಂಡ ಅಜಿಲಮೊಗರು ಮಸೀದಿ ಗೆ ಬೇಟಿ ನೀಡಿ ಅಲ್ಲಿನ ಪ್ರಮುಖರ ಜೊತೆ ಮಾತನಾಡಿದರು. ತಿಂಗಳಾಡಿ ನಾರಾಯಣ ಪೂಜಾರಿ ಅವರ ಮನೆಯೂ ಅಪಾಯದಲ್ಲಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ದೇವದಾಸ ಶೆಟ್ಟಿ, ಗೋವಿಂದ ಪ್ರಭು, ಧನಂಜಯ ಶೆಟ್ಟಿ, ಪೂವಪ್ಪ ಪೂಜಾರಿ ಕಡಮಜೆ, ಪುರುಷೋತ್ತಮ ಪೂಜಾರಿ ಮಜಲು, ವಸಂತ ಪೂಜಾರಿ ದೆಚ್ಚಾರು, ನಾರಾಯಣ ಪೂಜಾರಿ ದೆಚ್ಚಾರು,ಆನಂದ ಶೆಟ್ಟಿ ಬಾಚಕೆರೆ, ಅಭಿಷೇಕ್ ಪೂಜಾರಿ, ಸುದರ್ಶನ ಬಜೆ, ಶಶಿಕಾಂತ್ ಶೆಟ್ಟಿ, ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ ಬಾರೇಕಿರಾಡಿ, ಮನೋಜ್ ಕೊಟ್ಯಾನ್, ಪ್ರದೀಪ್ ಅಜ್ಜಿಬೆಟ್ಟು, ಮತ್ತಿತರರು ಉಪಸ್ಥಿತರಿದ್ದರು.

More articles

Latest article