ಬಂಟ್ವಾಳ: ಕೊಡಗಿನ ಮಾದರಿಯಲ್ಲಿ ಜಿಲ್ಲೆಗೂ ನೆರೆ ಸಂತ್ರಸ್ತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ನೀಡುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.

ನೆರೆಯಿಂದ ಹಾನಿಗೀಡಾದ ತಾಲೂಕಿನ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಪಾಣೆಮಂಗಳೂರು ಪಕ್ಷದ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ಪಕ್ಷದ ಮೂಲಕ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ನಿಯೋಗ ಭೇಟಿ ನೀಡಿದೆ.

ಅನೇಕ ಕಡೆಗಳಲ್ಲಿ ಕೃತಕ ನೆರೆಯಿಂದ ತೊಂದರೆಯಾಗಿದೆ. ಪ್ಯಾಕೇಜ್ ಮೂಲಕ ಈ ಜಿಲ್ಲೆ ಗೆ ಪರಿಹಾರದ ಮೊತ್ತ ನೀಡಬೇಕು ಎಂದು ಒತ್ತಾಯಿಸಿಸುತ್ತೇವೆ.
ದ.ಕ.ಉಡುಪಿಯ ಜಿಲ್ಲೆಗೆ ಅಗಮಿಸಿ ಅಲ್ಲಿನ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಹೈಕಮಾಂಡ್ ಗೆ ತಿಳಿಸುವ ಕೆಲಸ ಮಾಡುತ್ತೇವೆ.
ನಾನು ಅರಣ್ಯ ಸಚಿವನಾಗಿದ್ದ ವೇಳೆ ಜನವಸತಿ ಗೆ ತೊಂದರೆಯಾಗದಂತೆ 78 ಸಾವಿರ ಹೆಕ್ಟೇರ್ ಹೆಚ್ಚುವರಿಯಾಗಿ ಹಸಿರು ಹೊದಿಕೆಯಾಗಿದೆ.
ಪಶ್ಚಿಮ ಘಟ್ಟ ಉಳಿವಿಗಾಗಿ ಹಂತಹಂತವಾಗಿ ಸರಕಾರ ಹಸಿರು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕಾಗಿದೆ. ಜನರು ಪಶ್ಚಿಮ ಘಟ್ಟ ಉಳಿವುಗಾಗಿ ಕೆಲವೊಂದು ತ್ಯಾಗಕ್ಕೆ ಮುಂದಾಗಬೇಕಾಗಿದೆ.

ವಿನಯಕುಮಾರ್ ಸೊರಕೆ ಮಾತನಾಡಿ ಈ ಬಾರಿಯ ಮಳೆ ರಾಜ್ಯದ ಜನ ಜೀವನ ಅಸ್ಥಿರಗೊಳಿಸಿದೆ. ಮುಖ್ಯಮಂತ್ರಿಯವರು ರಾಜ್ಯದಲ್ಲಿ ಸಮೀಕ್ಷೆ ನಡೆಸಿದ್ದಾರೆ ಅದೇ ಮಾದರಿಯಲ್ಲಿ ಪ್ರಧಾನ ಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯಕ್ಕೆ ತುರ್ತಾಗಿ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯ ಮಾಡುತ್ತೇವೆ.

ಪ್ರಧಾನ ಮಂತ್ರಿ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ತುರ್ತಾಗಿ ಸಹಾಯಕ್ಕೆ ಬರಬೇಕು ಸಂತ್ರಸ್ತರಿಗೆ ಸೂಕ್ತವಾದ ಪರಿಹಾರ ನೀಡಬೇಕು.

ಮುಖ್ಯ ಮಂತ್ರಿ ಹತ್ತುಸಾವಿರ ಘೋಷಣೆ ಮಾಡಿದ್ದಾರೆ ಅದರೆ ಎಲ್ಲೂ ಕೂಡಾ ನಿಗದಿಮಾಡಿದ ಪರಿಹಾರದ ಮೊತ್ತ ನೀಡಿಲ್ಲ ಎಂದು ವಿನಯ್ ಕುಮಾರ್ ಸೊರಕೆ ಆರೋಪ ವ್ಯಕ್ತಪಡಿಸಿದರು.
ಈ ನಿಯೋಗದ ಲ್ಲಿ ಪ್ರಮುಖರಾದ ಮಿಥುನ್ ರೈ, ಹರೀಶ್ ಕುಮಾರ್, ಐವನ್ ಡಿಸೋಜ, ಎಂ.ಎಸ್‌ ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಚಂದ್ರಹಾಸ ಕರ್ಕೇರ, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬೇಬಿ ಕುಂದರ್, ಅಬ್ಬಾಸ್ ಆಲಿ, ಮಾಯಿಲಪ್ಪ ಸಾಲ್ಯಾನ್ , ಮಲ್ಲಿಕಾ ಶೆಟ್ಟಿ, ಜಯಂತಿ ವಿ.ಪೂಜಾರಿ, ಇದಿನಬ್ಬ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here