ಪನೋಲಿಬೈಲು:

ಇಹಲೋಕ ತ್ಯಜಿಸಿದ ಶ್ರೀ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕರದ ಬಾಬು ಮೂಲ್ಯ(92)…..

ಇಂದು ಅಪರಾಹ್ನ ತಮ್ಮ ಸ್ವಗೃಹದಲ್ಲಿ ಸ್ವಗ೯ಸ್ಥರಾಗಿರಾದ ಇವರು ೨ಹೆಣ್ಣು ೧ಗಂಡು(ದಿವಂಗತ) ಮಕ್ಕಳನ್ನು ಅಗಲಿದ್ದಾರೆ.

ಅತಿ ಪುಟ್ಟ ಕೃಷಿ ಕುಟುಂಬದಿಂದ ಬಂದ ಇವರು “ಕಾರ್ನಿಕೊದ ಗಗ್ಗರ ಸೇವೆ” ಹಾಗೂ ಅಗೇಲು ಸೇವೆಗೆ ಖ್ಯಾಯಿಯಾಗಿದ್ದ ಶ್ರೀ ಕ್ಷೇತ್ರ ಪನೋಲಿಬೈಲುನಲ್ಲಿ ತಮ್ಮ ೩೦ ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. ಶ್ರೀ ಕ್ಷೇತ್ರದ ಅರ್ಚಕನಾಗಿ ತನ್ನ ವೃತ್ತಿ ಜೀವನದಲ್ಲಿ ಯಾವುದೇ ಆಸ್ತಿ ಸಂಪತ್ತು ಮಾಡದೆ ಶ್ರೀ ಕ್ಷೇತ್ರದ ಸೇವೆಯಲ್ಲೇ ತಲ್ಲೀನರಾದ ಇವರ ಮನೋಭಾವ ಅತಿ ವಿರಳ.

ಶಾಸಕ ರಾಜೇಶ್ ನಾಯ್ಕ್ ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಲಯನ್ ಅನಿಲ್ ದಾಸ್ , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕುಲಾಲ ಮುಖಂಡರುಗಳಾದ ವಕೀಲ ರಾಮ್ ಪ್ರಸಾದ್‌, ಲಕ್ಷ್ಮಣ ಕುಂದರ್, ಜಯರಾಜ್ ಪ್ರಕಾಶ್, ಕೆಪಿಸಿಸಿ ಸದಸ್ಯ ಆರ್.ಕೆ.ಪ್ರಥ್ವಿರಾಜ್, ತೇಜಸ್ವಿರಾಜ್, ಡೆಪ್ಯುಡಿ ಕಮಾಂಡೆಂಡ್ ಡಿ.ಚಂದಪ್ಪ ಮೂಲ್ಯ, ಸುಜಿರ್ ಕುಡುಪು, ಮೆಸ್ಕಾಮ್ ಅಧೀಕ್ಷಕ ಇಂಜಿನಿಯರ್ ಮಂಜಪ್ಪ , ಗಿರೀಶ್ ಮುಂಬೈ, ಕುಲಾಲ ಯುವ ವೇದಿಕೆ ಪದಾಧಿಕಾರಿಗಳ ಜಯೇಶ್ ಗೋವಿಂದ, ಗಂಗಾಧರ ಬಂಜನ್ ಭಾಸ್ಕರ ಪೆರುವಾಯಿ, ಜನಾರ್ಧನ್ ಮೂಲ್ಯ ಪುತ್ತೂರು, ಹರಿಶ್ ಕಾರಿಂಜ, ಅಮೂಲ್ಯ ಗಣೇಶ್ ಎಂ.ಆರ.ಪಿ.ಎಲ್, ಅಬ್ಬಕ್ಕ ಟಿವಿ ಮುಖ್ಯಸ್ಥರಾದ ಶಶಿಧರ ಪೊಯ್ಯತ್ತಬೈಲು, ಪೋಲಿಸ್ ವಾರ್ತೆ ರಂಜಿತ್ ಮಡಂತ್ಯಾರ್, ವೀರನಾರಾಯಣ ದೇವಸ್ಥಾನ ಮುಖ್ಯಸ್ಥರಾದ ದಾಮೋದರ್ ಕುಲಾಲ, ಸುರೇಶ್ ಕುಲಾಲ್, ಪ್ರೇಮಾನಂದ ಕುಲಾಲ್, ಕುಂಬಾರ ಗುಡಿ ಕೈಗಾರಿಕಾ ಸಂಘದ ಮುಖ್ಯಸ್ಥ ರಾದ ನಾಗೇಶ್ ಬಜಾಲ್, ನಾಗೇಶ್ ಕುಳಾಯಿ, ಸುರೇಶ್ ಕುಲಾಲ್ ಬಂಟ್ವಾಳ, ಸುರತ್ಕಲ್ ಸಂಘದ ಅಧ್ಯಕ್ಷ ಸುಧಾಕರ ಸಾಲ್ಯಾನ್, ಕುಳಾಯಿ ಸಂಘದ ಗಂಗಾಧರ ಕೆ, ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ಕೃಷ್ಣ ಅತ್ತಾವರ, ಉಪಾಧ್ಯಕ್ಷ ರಮೇಶ್ ಕೆ.ಎನ್, ಪುತ್ತೂರು ಸಂಘದ ಅಧ್ಯಕ್ಷ ಕೃಷ್ಣಪ್ಪ ಕುಲಾಲ್, ದೇವಿ ದೇವಸ್ಥಾನದ ಮುಋ್ಯಸ್ಥ ಶ್ರೀನಿವಾಸ್ ಮರೋಳಿ ಮುಂತಾದ ನಾಯಕರು ಅಗಲಿದ ಮಹಾನ್ ಚೇತನಕ್ಕೆ ಸಂತಾಪ ಸೂಚಿಸಿದ್ದಾರೆ.

ಇಂದು ಸಂಜೆ ಮೃತರ ಅಂತಿಮ ಕ್ರಿಯೆ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here