ಬಂಟ್ವಾಳ: ಮಾಣಿ ಯುವಕ ಮಂಡಲ (ರಿ.) ಮಾಣಿ ಆಶ್ರಯದಲ್ಲಿ ಆ.23ನೇ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಮಾಣಿ ಗಾಂಧಿ ಮೈದಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ವಿಜೃಂಭಣೆಯಿಂದ ಜರಗಲಿರುವುದು. ಬೆಳಿಗ್ಗೆ 9 ಗಂಟೆಗೆ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೋಕ್ತೇಸರರಾದ ಎಂ.ಸಚಿನ್ ರೈ ಮಾಣಿಗುತ್ತು ಸಭಾ ಕಾರ್ಯಕ್ರಮ ಉದ್ಟಾಟಣೆ ಮಾಡಲಿದ್ದಾರೆ. 9.30ರಿಂದ ವಿವಿಧ ಸ್ಪರ್ಧೆಗಳು ಆರಂಭವಾಗಲಿದೆ. ಬೆಳಿಗ್ಗೆ 10ರಿಂದ ಜ್ಯೂನಿಯರ್‍ ಕಬಡ್ಡಿ, ಮಧ್ಯಾಹ್ನ 1ರಿಂದ ಸೀನಿಯರ್‍ ಕಬಡ್ಡಿ ಪಂದ್ಯಾಟ ನಡೆಯಲಿದೆ. ಹಾಗೂ ಸಂಜೆ 4-ರಿಂದ ಮಹಿಳೆಯರ ವಿವಿಧ ಸ್ಪರ್ಧೆಗಳು ಆರಂಭ ವಾಗಲಿದೆ. ಸಂಜೆ 5 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾಣಿ ಕ್ಷೇತ್ರ ದ ಜಿ. ಪಂ. ಸದಸ್ಯರಾದ ಮಂಜುಳಾ ಮಾಧವ ಮಾವೆ, ಸಜೀಪ ಮುನ್ನೂರು ಕ್ಷೇತ್ರದ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಮಾಣಿ ಕ್ಷೇತ್ರದ ತಾ.ಪಂ. ಸದಸ್ಯರಾದ ಮಂಜುಳಾ ಕುಶಲ ಪೆರಾಜೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಜಗನ್ನಾಥ ಚೌಟ ಬದಿಗುಡ್ಡೆ, ಮಾಣಿ ಪದ್ಮ ಕ್ಲಿನಿಕ್ ನ ಶ್ರೀನಾಥ್ ಆಳ್ವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಾಗೂ ಜಿಲ್ಲಾ ಮಹಿಳಾ ಬ್ಯಾಂಕ್ ಉಪಾಧ್ಯಕ್ಷರಾದ ಪ್ರಫುಲ್ಲ ಆರ್‍ ರೈ ವಿಠಲಕೋಡಿ( ಸಮಾಜ ಸೇವಕಿ) ಮತ್ತು ಹಿರಿಯ ಕಬಡ್ಡಿ ಆಟಗಾರ ಎಸ್ ಅಬುಬಕ್ಕರ್‍ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೀಡಿದ ಮಾಹನ್ ದಾಸ್ ಕೊಟ್ಟಾರಿ ನೇತೃತ್ವದ ಚಿನ್ನರಲೋಕ ಮೋಕೆದ ಕಲಾವಿದೆರ್‍ ಸೇವಾ ಟ್ರಸ್ಟ್ (ರಿ.) ಬಂಟ್ವಾಳದ ರಾಗರಂಜನಿ ರಸಮಂಜರಿ ತಂಡದಿಂದ ಸಾಂಸ್ಕೃತಿಕ ವೈಭವ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here