ಬಂಟ್ವಾಳ: ಪಿಲಾತಬೆಟ್ಟು ಗ್ರಾ.ಪಂ.ವ್ಯಾಪ್ತಿಯ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ದಿಡೀರ್ ಬೇಟಿ ನೀಡಿದರು.


ಈ ಸಂದರ್ಭದಲ್ಲಿ ಅಲ್ಲಿನ ಸಮಸ್ಯೆ ಗಳ ಬಗ್ಗೆ ಸಾರ್ವಜನಿರು ಶಾಸಕರ ಗಮನಕ್ಕೆ ತಂದರು. ಪ್ರಸ್ತುತ ಆಸ್ಪತ್ರೆಯಲ್ಲಿ ಪ್ರತಿದಿನ ಅರೆಕಾಲಿಕ ಆಯುರ್ವೇದ ವೈದ್ಯಾಧಿಕಾರಿ ಓರ್ವರು ರೋಗಿಗಳ ತಪಾಸಣೆ ನಡೆಸುತಿದ್ದಾರೆ. ಈ ಆಸ್ಪತ್ರೆಯಲ್ಲಿ ಪೂರ್ಣಾವಧಿ ವೈದ್ಯಾಧಿಕಾರಿ ಇಲ್ಲದೆ ಸಾಕಷ್ಟು ತೊಂದರೆಯಾಗುತ್ತಿದೆ.
ವಾರಕ್ಕೆ ಎರಡು ಬಾರಿ ವೈದ್ಯರು ಸೇವೆಗೆ ಲಭ್ಯವಿರುವುದು ಸಾಕಷ್ಟು ತೊಂದರೆ ಯಾಗುತ್ತಿದೆ ಎಂದು ಶಾಸಕರಲ್ಲಿ ಅಳಲು ತೋಡಿಕೊಂಡರು.
ಹೆದ್ದಾರಿಯಲ್ಲಿ ಈ ಆಸ್ಪತ್ರೆ ಇದ್ದು ಅಪಘಾತ ಸಹಿತ ಅನೇಕ ಘಟನೆಗಳಿಗೆ ಈ ಅಸ್ಪತ್ರೆ ಬಹಳ ಅಗತ್ಯವಾಗಿರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಸಮುದಾಯ ಆರೋಗ್ಯ ಕೇಂದ್ರ ವಾಗಿ ಮೇಲ್ದರ್ಜೆಗೆ ಏರಿಸಲು ಮನವಿ ಮಾಡಿದರು.
ವೈದ್ಯರಿಲ್ಲದೆ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾತ್ಕಾಲಿಕ ವಾಗಿ ಬೇರೆ ವೈದ್ಯರ ನೇಮಕ ಮಾಡುವ ಭರವಸೆ ಯನ್ನು ಶಾಸಕರು ಈ ಸಂದರ್ಭದಲ್ಲಿ ನೀಡಿದರು.
ಜಿಪಂ.ಸದಸ್ಯ ತುಂಗಪ್ಪ ಬಂಗೇರ, ಗ್ರಾ.ಪಂ.ಅದ್ಯಕ್ಷ ಶೇಖರ್ ಶೆಟ್ಟಿ , ತಾ.ಪಂಸದಸ್ಯ ರಮೇಶ್ ಕುಡುಮೇರು, ಗ್ರಾ.ಪಂ.ಸದಸ್ಯರಾದ ಲಕ್ಮೀ ಜೆ ಬಂಗೇರ, ಪಿಲಾತಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲಕ್ಮೀನಾರಾಯಣ ಉಡುಪ, ಹಾಗೂ ಡಾ| ಸೋಹನ್ ಕುಮಾರ್ ಮತ್ತು ಸಿಬ್ಬಂದಿ ಗಳು ಮತ್ತಿತರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here