ಬಂಟ್ವಾಳ: ಮಂಚಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಶುಕ್ರವಾರ  ಭೇಟಿ ನೀಡಿದರು.
ಕೇಂದ್ರದ ನೂತನ ಕಟ್ಟಡ ಕಾಮಗಾರಿಯನ್ನು  ವೀಕ್ಷಿಸಿದರು. ಆಸ್ಪತ್ರೆಯ ಅಧಿಕೃತ ಉದ್ಘಾಟನೆಯಾಗದೆ  ಹೊಸ ಕಟ್ಟಡದ ಕೀಯನ್ನು ಹಸ್ತಾಂತರಿಸುವ ಕಾರ್ಯ ನಡೆದಿದೆ ಎಂದು ಸ್ಥಳೀಯರು ಶಾಸಕರ ಗಮನಕ್ಕೆ ತಂದರು.

ಆಗ ಸಮಜಾಯಿಷಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ತಾನು ಅಂದು ಉಪಸ್ಥಿತಿ ಇರಲಿಲ್ಲ, ಬಳಿಕ ಈ ಬಗ್ಗೆ ವಿಷಯ ತಿಳಿದು ಮಾಹಿತಿ ಪಡೆದಿದ್ದೇನೆ. ಅಂದು ಪ್ರಭಾರ ವೈದ್ಯರೊಬ್ಬರು ಇಲ್ಲಿದ್ದು, ಆರೋಗ್ಯ ರಕ್ಷಕರ ಸಭೆಯು ನಡೆದಿದಿತ್ತು. ಹಾಗೆಯೇ ಸಭೆಯ ಬಳಿಕ ಹೊಸ ಕಟ್ಟಡದ ಕೀಯನ್ನು ಹಸ್ತಾಂತರಿಸಿದ್ದಾರೆ ಎಂದರು. ಆಷಾಢ ಕಳೆದ ತಕ್ಷಣ ಹೊಸ ಕಟ್ಟಡದ ಅಧಿಕೃತ ಉದ್ಘಾಟನಾ ಕಾರ್ಯಕ್ರಮಕ್ಕೆ ದಿನ ನಿಗದಿಪಡಿಸುವಂತೆ ಶಾಸಕರು ಆರೋಗ್ಯಾಧಿಕಾರಿಯವರಿಗೆ ಸೂಚಿಸಿದರು.  ಈ ಕೇಂದ್ರದಲ್ಲ ವೈದ್ಯರ,ಸ್ಟಾಪ್ ನಸ್೯ಗಳ ಕೊರತೆ ಇದ್ದು,ಅವುಗಳ ಹುದ್ದೆಯನ್ನು ಭರ್ತಿ ಗೊಳಿಸಿ ಈ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯಚರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ  ಸ್ಥಳೀಯರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು  ಈಗಾಗಲೇ ಖಾಲಿ ಇರುವ ಹುದ್ದೆಯ ಪಟ್ಟಿಯನ್ನು ಕೇಳಲಾಗಿದೆ ಎಂದರು.   ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಬಿಜೆಪಿ ಮುಖಂಡ ರಮೇಶ್ ರಾವ್, ಗ್ರಾ.ಪಂ.ಅಧ್ಯಕ್ಷೆ ಪ್ರಮೀಳಾ, ಗ್ರಾ.ಪಂ.ಉಪಾಧ್ಯಕ್ಷ ಮೋಹನ್‌ದಾಸ್ ಶೆಟ್ಟಿ, ಗ್ರಾ.ಪಂ ಸದಸ್ಯರಾದ ಪ್ರಭಾಕರ ಶೆಟ್ಟಿ, ಸುಮತಿ, ಸುಮ, ಪುಷ್ಪ ಎಸ್ ಕಾಮತ್, ಕೃಷ್ಣಪ್ಪ ಬಂಗೇರ, ಉದಯ ಶಂಕರ, ಬಾಲಕೃಷ್ಣ ಸೆರ್ಕಳ, ಎ.ಕೆ.ಹ್ಯಾರಿಸ್, ಪುರುಷೋತ್ತಮ ಸಾಲ್ಯಾನ್, ವಿಜಿತ್ ಅಡ್ಯಂತಾಯ, ನಾರಾಯಣ ಖಂಡಿಗ, ಗೋವಿಂದ ನಾಯಕ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here