2019-20ನೇ ಸಾಲಿನ ಕೃಷಿ ಸಂಘದ ಉದ್ಘಾಟನೆ ಮತ್ತು ಕೃಷಿ ಚಟುವಟಿಕೆ ಸುಧೆಕ್ಕಾರಿನಲ್ಲಿ ನಡೆಯಿತು. ಸಂಘದ ಉದ್ಘಾಟನೆಯನ್ನು ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಕೋಶಾಧಿಕಾರಿಯಾದ ಸತೀಶ್ ಶಿವಗಿರಿಯವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ, ದೇಶದ ಆರ್ಥಿಕತೆಯಲ್ಲಿ ಸಾವಯವ ಕೃಷಿಯ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳನ್ನು ಸಾವಯವ ಕೃಷಿಗೆ ಪ್ರೋತ್ಸಾಹಿಸಿದರು. ಕೃಷಿ ಚಟುವಟಿಕೆಗೆ ಚಾಲನೆ ನೀಡಿದ ಪ್ರಗತಿಪರ ಕೃಷಿಕರು ಮತ್ತು ಗೋಳ್ತಮಜಲು ಪಂಚಾಯತ್ ಸದಸ್ಯರಾದ ಜಯಂತ ಗೌಡ ಇಂದಿನ ಕಾಲದಲ್ಲಿ ಕುಟುಂಬ ಪದ್ಧತಿ ಕ್ಷೀಣಿಸುತ್ತಿರುವುದರಿಂದ ಕೃಷಿ ಚಟುವಟಿಕೆಗಳ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ವಸಂತ ಬಲ್ಲಾಳ್, ವೈಷ್ಣವಿ ಟೆಕ್ಸ್‌ಟೈಲ್ಸ್ ಕಲ್ಲಡ್ಕದ ಮಾಲಕರಾದ ಪ್ರಶಾಂತ್ ಕಡ್ಯ ಉಪಸ್ಥಿತರಿದ್ದರು. ಕಾರ್‍ಯಕ್ರಮವನ್ನು  ತಿರುಮಲೇಶ್ವರ ಪ್ರಶಾಂತ್ ನಿರ್ವಹಿಸಿದರು. ಉಪನ್ಯಾಸಕರು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here