ಬಂಟ್ವಾಳ: ತುಳುನಾಡಿನ ಆಚರಣೆಗಳಲ್ಲಿ ಸಾಕಷ್ಟು ಉತ್ತಮ ಅಂಶಗಳಿದ್ದು ಈ ಶ್ರೀಮಂತ ಸಂಸ್ಕೃತಿಯನ್ನು ಉಳಿಸುವುದು ಯುವಜನತೆಯ ಕರ್ತವ್ಯ ಎಂದು ತುಳು ಸಾಹಿತಿ ಹಾಗೂ ಸಂಘಟಕ ಮಹೇಂದ್ರನಾಥ ಸಾಲೆತ್ತೂರು ಹೇಳಿದರು.
ಬಂಟ್ವಾಳ ಕಾಮಾಜೆಯ ಸರಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ಆಟಿ ಆಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಿಂದಿನ ಕಾಲದಲ್ಲಿ ಆಟಿ ತಿಂಗಳು ಎಂದರೆ ಅದು ತುಂಬ ಕಷ್ಟದ ಕಾಲ. ಆದರೆ ಅಂಥ ಕಷ್ಟ ಕಾಲದಲ್ಲಿ ರೋಗರುಜಿನಗಳನ್ನು ನಿವಾರಿಸಿಕೊಳ್ಳಲು ತುಳುನಾಡಿನ ಹಿರಿಯರು ವಿವಿಧ ಆಚರಣೆಗಳನ್ನು ಕಂಡುಕೊಂಡರು. ಪಾರಂಪರಿಕ ಆಚರಣೆಗಳ ಹಿಂದಿನ ತತ್ವಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಗಿರೀಶ ಭಟ್‌ ಆಟಿ ಆಚರಣೆಯಂಥ ಕಾರ್ಯಕ್ರಮಗಳು ಕೇವಲ ಸಾಂಕೇತಿಕ ಆಚರಣೆಗಳಾಗದೆ, ನಮ್ಮ ಸ್ಥಳೀಯ ಪರಂಪರೆಯನ್ನು ಅರ್ಥಮಾಡಿಕೊಳ್ಳುವ ಚಟುವಟಿಕೆಗಳಾಗಬೇಕು ಎಂದರು. ಶೋಭಾ ಹರೀಶ್ಚಂದ್ರ ಪುರಸಭಾ ಸದಸ್ಯರುಇವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಂಘದ ಸಂಚಾಲಕರಾದ ಪ್ರೊ. ಶಶಿಕಲಾ ಕೆ ಕಾರ್ಯಕ್ರಮ ಸಂಯೋಜಿಸಿದರು.
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳೇ ಮನೆಯಲ್ಲಿ ತಯಾರಿಸಿ ತಂದ ತಿನಿಸುಗಳ ಸಹಭೋಜನ ಮಾಡಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here