ವಿಟ್ಲ: ಹುಡುಗಿ ವಿಚಾರದಲ್ಲಿ ಬೇಕರಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನೊಬ್ಬನ ಮೇಲೆ ತಂಡವೊಂದು ಹಲ್ಲೆ ಮಾಡಿದ ಘಟನೆ ಶುಕ್ರವಾರ ರಾತ್ರಿ ವಿಟ್ಲ ಶಾಲಾ ರಸ್ತೆಯಲ್ಲಿ ನಡೆದಿದೆ.
ಯುವಕನೋರ್ವ ಪ್ರೀತಿಸುತ್ತಿದ್ದ ಹುಡುಗಿಯಲ್ಲಿ ಇನ್ನೊಬ್ಬ ವ್ಯಕ್ತಿ ಈತನ ಬಗ್ಗೆ ಹಗುರವಾಗಿ ಮಾತನಾಡಿದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ವಿಟ್ಲ ಪೇಟೆಯ ನಡು ರಸ್ತೆಯಲ್ಲಿ ಹಲ್ಲೆಗೆ ಮುಂದಾಗುವ ಹಂತಕ್ಕೆ ತಲುಪಿದೆ. ಪುತ್ತೂರು ಭಾಗದಿಂದ ತಂಡವೊಂದನ್ನು ಕರೆಸಿಕೊಂಡ ಯುವಕನೊಬ್ಬ, ವಿಟ್ಲ ಶಾಲಾ ರಸ್ತೆಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಹಲ್ಲೆಗೆ ಮಾಡಿದ್ದಾನೆ ಎನ್ನಲಾಗಿದೆ. ಸಾರ್ವಜನಿಕರು ತಂಡದಲ್ಲಿದ್ದ ಯುವಕನಿಗೆ ಹಲ್ಲೆ ನಡೆಸಿದ ಎಂದು ದೂರು ಕೊಡಲು ಮುಂದಾದಾಗ ನೈಜ ಘಟನೆ ಹೊರಬಿದ್ದಿದೆ. ಪುತ್ತೂರು ಭಾಗದಿಂದ ಕರೆಸಿಕೊಂಡ ತಂಡದಲ್ಲಿ ವಿಟ್ಲ ಭಾಗದ ಪಂಚಾಯಿತಿ ಸದಸ್ಯರ ಪುತ್ರನೂ ಸೇರಿದ್ದೆನ್ನೆನ್ನಲಾಗಿದ್ದು, ರಸ್ತೆಯಲ್ಲಿ ಗುಂಪು ಸೇರಿ ಗಲಾಟೆಗೆ ಮುಂದಾಗಿದ್ದರಿಂದ ಸ್ಥಳಕ್ಕೆ ಪೊಲೀಸರು ತೆರಳಿ ಗುಂಪನ್ನು ಚದುರಿಸಬೇಕಾದ ಅನಿವಾರ್ಯತೆಯೂ ಬಂದಿತ್ತು.