ಬಂಟ್ವಾಳ: ತೀವ್ರ ಮಳೆಯಿಂದಾಗಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ದೋಣಿಯಲ್ಲಿ ತೆರಳುವ ಸಮಯದಲ್ಲಿ ಮಾಜಿ ಶಾಸಕ ರಮಾನಾಥ ರೈ ಯವರ ವೀಡಿಯೋ ಚಿತ್ರೀಕರಣ ತಿರುಚಿ ಗಣಪತಿ ದೇವರ ವಿಸರ್ಜನೆಯ ರೂಪದಲ್ಲಿ ವ್ಯಂಗ್ಯವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿಸಿದ ಹಾಗೂ ಹಿಂದೂ ಆರಾಧ್ಯ ದೇವರ ಅಪಹಾಸ್ಯ ಮಾಡಿ ಹಿಂದೂಗಳ ಭಕ್ತಿ ಭಾವನೆಗಳಿಗೆ ಧಕ್ಕೆ ತರಿಸಿದ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸಿ ತಕ್ಕ ಶಿಕ್ಷೆ ನೀಡಬೇಕಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದರು. ಈ ಸಂಧರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಗಂಗಾಧರ್ ಪೂಜಾರಿ ಹಾಗೂ ಲೋಲಾಕ್ಷ ಶೆಟ್ಟಿ ಉಪಸ್ಥಿತರಿದ್ದರು.