ಬಂಟ್ವಾಳ, ಆ. ೫: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಬಂಟ್ವಾಳ ತಾಲೂಕಿನ ಬೋಳಂತೂರಿನ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸೋಮವಾರ ಮಧ್ಯಾಹ್ನ ನಿಧನರಾದರು.
ತಾಲೂಕಿನ ಬೋಳಂತೂರು ಗ್ರಾಮದ ಕಲ್ಪನೆ ನಿವಾಸಿ, ಅದ್ರಾಮ ಬ್ಯಾರಿ ಎಂಬವರ ಪುತ್ರ ಉಮರ್ ಫಾರೂಕ್ (೩೫) ಮೃತಪಟ್ಟವರು. ಫಾರೂಕ್ ಅವರು ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನ ಶಿವಾಜಿನಗರದ ಕಮರ್ಶಿಯಲ್ ಸ್ಟ್ರೀಟ್ನಲ್ಲಿ ದುಡಿಯುತ್ತಿದ್ದರು. ಇಂದು ಮಧ್ಯಾಹ್ನ ೨.೩೦ಗಂಟೆ ಸುಮಾರಿಗೆ ತನ್ನ ಸ್ನೇಹಿತನೊಂದಿಗೆ ಮಾತನಾಡಿದ್ದು, ಇಲ್ಲಿ ಮಳೆಯಿರುವ ಕಾರಣ ನಾಳೆ ಊರಿಗೆ ಬರುವುದಾಗಿ ತಿಳಿಸಿದ್ದರು. ಬಳಿಕ ಮಧ್ಯಾಹ್ನ ೩ ಗಂಟೆ ಸುಮಾರಿಗೆ ಮೃತಪಟ್ಟ ಬಗ್ಗೆ ಮಾಹಿತಿ ಲಭಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೃತರು ಪತ್ನಿ, ನಾಲ್ವರು ಪುತ್ರರನ್ನು ಅಗಲಿದ್ದಾರೆ.