Saturday, April 6, 2024

ಹೆಚ್ಚುತ್ತಿರುವ ಬಾಲ್ಯವಿವಾಹ ತಡೆ ಪ್ರಕರಣ

ಬಂಟ್ವಾಳ: ಬಂಟ್ವಾಳ ತಾಲೂಕಿನ್ಯಾದ್ಯಂತ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ತಡೆ ಪ್ರಕರಣ. ಬಾಲ್ಯ ವಿವಾಹ ಕಾನೂನಿನಲ್ಲಿ ಅಪರಾಧ ಎಂದು ಗೊತ್ತಿದ್ದರೂ ಕೂಡಾ ಮದುವೆ ಮಾಡಿಸುವ ಕುಟುಂಬಗಳು ಈ ಶತಮಾನದಲ್ಲೂ ಇದೆ ಎಂಬುದಕ್ಕೆ ತಾಲ್ಲೂಕಿನ ಲ್ಲಿ ಒಂದೇ ತಿಂಗಳಿನಲ್ಲಿ ಬೆಳಕಿಗೆ ಬಂದ ಎರಡು ಪ್ರಕರಣಗಳು ಸಾಕ್ಷಿಯಾಗಿದೆ.
ಅಗಸ್ಟ್ ತಿಂಗಳ 19 ರಂದು ನಾವೂರ ಗ್ರಾಮದಲ್ಲಿ ಬಾಲ್ಯವಿವಾಹದ ನಿಶ್ಚಿತಾರ್ಥಕ್ಕೆ ಬ್ರೇಕ್ ಹಾಕಿದ ಅಧಿಕಾರಿಗಳು ವಿಟ್ಲ ಸಿ.ಡಿ.ಪಿ.ಒ.ಕಚೇರಿಗೆ ಬರುವ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಯೂ ಇದೇ ರೀತಿ ಯ ಪ್ರಕರಣಕ್ಕೆ ತಡೆ ಹಿಡಿದ್ದಾರೆ.
ಅಗಸ್ಟ್ 23 ಕೃಷ್ಣ ಜನ್ಮಾಷ್ಟಮಿ ದಿನದಂದು ಬೊಳಂತೂರು ಗ್ರಾಮದಲ್ಲಿ ಅಪ್ರಾತ್ತ ಬಾಲಕಿಗೆ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಸುವ ತಯಾರಿ ನಡೆಸಿದ್ದರು.

ಬಾಲಕಿಗೆ 17ವರ್ಷ 6 ತಿಂಗಳು ತುಂಬುತ್ತಿರುವಾಗಲೇ ಮದುವೆ ಮಾಡಲು ಪೂರ್ವತಯಾರಿಯಲ್ಲಿದ್ದ ಕುಟುಂಬ ಅ.23 ಮನೆಯಲ್ಲಿ ನಿಶ್ಚಿತಾರ್ಥ ಮಾಡುವ ತಯಾರಿಯಲ್ಲಿದ್ದರು.
ಈ ಬಗ್ಗೆ ಖಚಿತ ಮಾಹಿತಿಯ ಪಡೆದ ಅಧಿಕಾರ ಗಳು ಮನೆಗೆ ಧಾವಿಸಿ ಹುಡುಗಿಗೆ 18 ವರ್ಷ ತುಂಬದೆ ನಿಶ್ಚಿತಾರ್ಥ ಕೂಡಾ ಕಾನೂನಿನ ಪ್ರಕಾರ ಅಪರಾಧವಾಗುವುದರಿಂದ ನಿಶ್ಚಿತಾರ್ಥ ವನ್ನು ನಿಲ್ಲಿಸುವಂತೆ ಹೇಳಿದರು.
ಬಳಿಕ 18 ವರ್ಷ ತುಂಬುವರಗೆ ಮದುವೆಗೆ ಸಂಬಂಧಸಿದ ಯಾವುದೇ ಕಾರ್ಯಕ್ರಮ ಮಾಡುವುದಿಲ್ಲ ಎಂಬ ಬಗ್ಗೆ ಮುಚ್ಚಳಿಕೆ ಬರೆಯಿಸಿದ್ದಾರೆ.

ಬೆರಳೆಣಿಕೆಯ ಕೆಲವೊಂದು ಕುಟುಂಬಗಳ ಪ್ರಕರಣಗಳು ಬೆಳಕಿಗೆ ಬಂದರೆ ಅನೇಕ ಪ್ರಕರಣಗಳು ಇನ್ನೂ ಕೂಡಾ ಬೆಳಕಿಗೆ ಬರದೆ ಮದುವೆ ನಡೆದಿರಬಹುದು.

ವಿಟ್ಲ ಸಿ‌ಡಿಪಿಒ ಸುಧಾಜೋಶಿ ಮಂಗಳೂರು ರಕ್ಷಣಾ ಘಟಕದ ಅಧಿಕಾರಿ ಶಿವಾನಂದ, ಬೊಳಂತರೂ ಗ್ರಾ.ಪಂ.ಪಿಡಿಒ ಪುಷ್ಪಾ , ವಿಟ್ಲ ಠಾಣಾ ಪೋಲೀಸ್ ಸಿಬ್ಬಂದಿ ಗಳು ಮನೆಗೆ ಬೇಟಿ ನೀಡಿದ್ದರು.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...