Saturday, April 6, 2024

ತುಳುನಾಡಿನ ಆಚಾರಗಳ ಉಳಿವಿಗೆ ಆಟಿ ಕೂಟ ಅಗತ್ಯ

ಬಂಟ್ವಾಳ: ಬುರೂಜ್ ಆ. ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ ಆಟಿದ ಕೂಟ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು  ಶಂಕರ ಶೆಟ್ಟಿ ಉಪಾಧ್ಯಕ್ಷರು ಗ್ರಾ.ಪಂ. ಇರ್ವತ್ತೂರು ಕಲಸೆಗೆ ಅಕ್ಕಿ ಹಾಕುವ ಮೂಲಕ ಉದ್ಘಾಟಿಸಿದರು. ಇಂತಹ ಆಚರಣೆಗಳಿಂದ ನಮ್ಮ ಹಳ್ಳಿ ತಿಂಡಿ ತಿನಿಸುಗಳು ಮತ್ತೊಮ್ಮೆ ನೆನಪಿಸಿದಂತಾಗುತ್ತದೆ ಎಂದರು.

ಪ್ರಶಾಂತ್ ಕೋಟ್ಯಾನ್ ಸದಸ್ಯರು ಗ್ರಾ. ಪಂ. ಇರ್ವತ್ತೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಕಾರ್ಯಕ್ರಮದ ಆಚರಣೆಯ ಮಹತ್ವವನ್ನು ಮಕ್ಕಳು ತಿಳಿದು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳಿ ಎಂದರು. ಆಧುನೀಕರಣದತ್ತ ನಾವು ಸಾಗುತ್ತಿದ್ದು, ನಮ್ಮ ಹಳ್ಳಿ ತಿನಿಸುಗಳನ್ನೇ ಮರೆಯುತ್ತಿದ್ದೇವೆ. ಫಾಸ್ಟ್ ಫುಡ್‌ನ್ನು ಇಂದಿನ ಮಕ್ಕಳು ಅವಲಂಬಿಸುತ್ತಿದ್ದು, ಕೆಟ್ಟ ಪರಿಣಾಮವನ್ನು ಮುಂದೆ ಜೀವನದಲ್ಲಿ ಅನುಭವಿಸಬೇಕಾಗಬಹುದು ಎಂದು ಜನಾಬ್ ಶೇಕ್ ರಹ್ಮತ್ತುಲ್ಲಾ ಸಂಚಾಲಕರು ಬುರೂಜ್ ಮಕ್ಕಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ  ಸುಧೀಂದ್ರ ಗ್ರಾ. ಪಂ. ಸದಸ್ಯರು ಇರ್ವತ್ತೂರು, ಗೀತಾ ಶಿಕ್ಷಕರು ಕಲಾಬಾಗಿಲು ಅಂಗನವಾಡಿ, ಜಯಶ್ರೀ.ಬಿ. ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ಶಿಕ್ಷಕ ವೃಂದದವರು ಹಾಜರಿದ್ದರು.ವಿದ್ಯಾರ್ಥಿಗಳಿಂದ ತುಳುಗಾದೆ ಒಗಟುಗಳು, ತುಳು ಪದ್ಯಗಳು, ಭಾಷಣ ಹಳ್ಳಿ ತಿನಿಸುಗಳ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಂದ ನಡೆದವು. ಕಾರ್ಯಕ್ರಮದ ನಿರೂಪಣೆಯನ್ನು  ಪವಿತ್ರಾ ಶೆಟ್ಟಿ, ಸ್ವಾಗತ ಭಾಷಣವನ್ನು  ಹರಿಣಾಕ್ಷಿ ಹಾಗೂ  ಚೇತನಾ ಜೈನ್ ವಂದನಾರ್ಪಣೆಗೈದರು.

More from the blog

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...