ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಅರ್ಕುಳ ಮೇರ ಮಜಲು ಇದರ ನೂತನ ಲಾಂಛನ ವನ್ನು ಹರಿಕೃಷ್ಣ ಬಂಟ್ವಾಳ ನಿನ್ನೆ ಬಿಡುಗಡೆಗೋಳಿಸಿದರು. ಯುವಕರು ಇತಿಹಾಸ ನಿರ್ಮಿಸಬೇಕು , ಮಕ್ಕಳಿಗೆ ವಿದ್ಯೆ , ಸಂಸ್ಕಾರ ಮಾತ್ರವಲ್ಲ ಮಾನಸಿಕವಾಗಿಯೂ , ಶಾರೀರಿಕ ವಾಗಿಯೂ ಸುದೃಢ ರಾಗಬೇಕು , ಭಾರತ ವಿಶ್ವಗುರು ವಾಗುವಲ್ಲಿ ನಾವು ಮುಂದಿರಬೇಕು , ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿ ಯವರು ಒಂದು ಜಾತಿಗೆ ಸೀಮಿತ ವಾಗಿರಲಿಲ್ಲ ಇಡೀ ಜಗತ್ತಿಗೆ ಜಗದ್ಗುರು ವಾಗಿದ್ದರು ಎಂದು ಜಿಲ್ಲಾ ಬಿ ಜೆ ಪಿ ವಕ್ತಾರ ಬಿಲ್ಲವ ಮುಖಂಡರಾದ ಹರಿಕೃಷ್ಣ ರವರು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ವೇದಿಕೆ ಹಾಗು ಮಹಿಳಾ ಸಂಘ ಅರ್ಕುಳ , ಮೇರಮಜಲು ಇವರ ವತಿಯಿಂದ ಜರಗಿದ ಆಟಿಡೊಂಜಿ ಕೂಟ 2019, ಮತ್ತು ಕುಸಲ್ದ ಪಂಥೊದ ಗೊಬ್ಬುಲು ಇದರಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರವೀಣ್ ಪೂಜಾರಿ ಮುಂಬೈ ಇವರ ಅಧ್ಯಕ್ಷತೆ ಯಲ್ಲಿ ನಡೆದ ಸಭಾ ಕಾರ್ಯಕ್ರಮ ವೇದಿಕೆಯಲ್ಲಿ ನಾಗರಾಜ್ ಭಟ್ R.T.O ಮಂಗಳೂರು, ಮೋಹನ್ ಅಮೀನ್ ವಿಜಯ ವಾಹಿನಿ , ಮಾದವ ನಾಯ್ಕ್ಅಡ್ಯಾರ್ ರಾಜಕುಮಾರ್ ಟ್ರಾವೆಲ್ಸ್ , ಸದಾನಂದ ಆಳ್ವ ಕಂಪ , ಜೆರಾಲ್ಡ್ ಡಿಸೋಜಾ , ಶಶಿರಾಜ್ ಶೆಟ್ಟಿ ಕೊಳಂಬೆ ಅಧ್ಯಕ್ಷರು ಬಂಟರ ಸಂಘ ಫರಂಗಿಪೇಟೆ ವಲಯ , ಲೋಕೇಶ್ ಪೂಜಾರಿ , ಪ್ರಭಾಕರ ಆಚಾರ್ಯ , ರಾಮ್ ದಾಸ್ ಕೋಟ್ಯಾನ್ ಮಜಿಲ ಗುತ್ತು , ಜಯರಾಜ್ ಕರ್ಕೇರ , ಸಂದೇಶ್ ತುಪ್ಪೆಕಲ್ಲು, ರಾಜೇಶ್ ಸುರಾ ಎಂಜಿನಿಯರ್ಸ್ , ಸಂದೀಪ್ ಶ್ರೀದೇವಿ ಕೇಬಲ್ಸ್ , ಎ ಶಿವರಾಜ್ ಶೆಟ್ಟಿ ಅಡ್ಯಾರು , ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ವೇದಿಕೆ ಅದ್ಯಕ್ಜ್ಶರಾದ ರಘುನಾಥ್ ಪೂಜಾರಿ ತುಪ್ಪೆಕಲ್ಲು, ಕಾರ್ಯದರ್ಶಿಗಳು , ಪದಾಧಿಕಾರಿಗಳು , ಮಹಿಳಾ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು, ಆಟಿ ತಿಂಗಳ ವಿಶೇಷ ಬಗೆ ಬಗೆಯ ಸುಮಾರು 50 ಖಾದ್ಯಗಳನ್ನು ವಿತರಿಸಲಾಯಿತು.