ಬಂಟ್ವಾಳ : ಆರ್ಟಿಕಲ್ 370 ಮತ್ತು 35(ಎ) ರದ್ದು ಆದೇಶವನ್ನು ಸ್ವಾಗತಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು .
ಅವರ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಇನ್ಮುಂದೆ ಭಾರತದ ಸಂವಿಧಾನ ಕಾಶ್ಮೀರಕ್ಕೆ ಅನ್ವಯವಾಗುತ್ತದೆ.
ಅಂದಿನ ನಾಯಕರು ಯಾವ ಉದ್ದೇಶದಿಂದ ಪಕ್ಷವನ್ನು ಕಟ್ಟಿದ್ದಾರೋ ಅದು ಈ ದಿನ ನೆರವೇರಿತು. ಇದಕ್ಕಿಂತ ದೊಡ್ಡ ಸಂತೋಷ ನನಗೆ ಇಲ್ಲ ಎಂದು ಅವರು ಹೇಳಿದರು.
ನೆಹರೂ ರವರ ಸಚಿವ ಸಂಪುಟದದಲ್ಲಿ ಕೈಗಾರಿಕಾ ಮಂತ್ರಿಯನ್ನು ತ್ಯಜಿಸಿ ಹೊರ ಬಂದ ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ ಚಿಂತನೆ ಕನಸು ಇಂದು ಈಡೇರಿತು.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಬೇಕು ಎಂಬ ಮಹತ್ವದ ನಿರ್ಧಾರ ದ ಮೂಲಕ “ಏಕ್ ದೇಶ್ ದೋ ವಿಧಾನ್ ದೋ ಪ್ರಧಾನ್ ದೋ ನಿಶಾನ್ ನಹಿ ಚಲೇಗೆ ನಹಿ ಚಲೇಗೆ” ಎಂಬ ಘೋಷಣೆಯೊಂದಿಗೆ ಅಂದಿನ ಕಾಲದಲ್ಲಿ ಕಾಂಗ್ರೇಸ್ ಪಕ್ಷದಿಂದ ಹೊರಬಂದು ಜನಸಂಘ ಎಂಬ ಪಕ್ಷವನ್ನು ಕಟ್ಟಿ ದ ಅವರ ಕನಸಿಗೆ ಸಾಕಾರನೀಡಿದ ಕಾಶ್ಮೀರದ ವಿಶೇಷ ಅಧಿಕಾರ ರದ್ದು ಮಾಡಿದ ನರೇಂದ್ರ ಮೋದಿಯವರ ಸರಕಾರದ ಅವಧಿಯಲ್ಲಿ ನಾನು ಶಾಸಕನಾಗಿರುವುದು ಅತ್ಯಂತ ಸಂತಸದ ಕ್ಷಣವಾಗಿದೆ.
ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಂಪುಟದ ಮಂತ್ರಿ, ಸಂಸದರಿಗೆ ಅಭಿನಂದನೆ ಎಂದು ಅವರು ಹೇಳಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here