ಯಾದವ ಕುಲಾಲ್

ಬಿ.ಸಿ.ರೋಡು : ಮೂಲತ: ಸೌಕರ್ಯಗಳಲ್ಲಿ ಒಂದು ಸಾರಿಗೆ ವ್ಯವಸ್ಥೆ. ಹಳ್ಳಿ ಪ್ರದೇಶಗಳಿಂದ ಪಟ್ಟಣಗಳಿಗೆ ಕೆಲಸಕ್ಕಾಗಿ ಬರುವ ಜನರಿಗೆ ಪ್ರಯಾಣಕ್ಕೆ ಬಸ್ಸುಗಳು ಅನಿವಾರ್ಯ. ಈ ರಸ್ತೆಯಲ್ಲಿ ಬಸ್ಸುಗಳಿಗೇನೂ ಕಡಿಮೆ ಇಲ್ಲ. ಆದರೆ ಹೆಚ್ಚಿನ ಎಲ್ಲ ಬಸ್ಸುಗಳು ಕೂಡಾ ತಡೆರಹಿತ ಮತ್ತು ವೇಗದೂತ ಬಸ್ಸುಗಳೇ. ಹಾಗಾಗಿ ಜನರಿಗೆ ಪರ್ಯಾಯ ವ್ಯವಸ್ಥೆ ಅನಿವಾರ್ಯ. ಹೀಗಾಗಿ ಈ ರಸ್ತೆಯುದ್ದಕ್ಕೂ ಈಗ ಕಾಣಬರುತ್ತಿದೆ ಟಾಟಾ ಮತ್ತು ಮಹೇಂದ್ರ ಸಂಸ್ಥೆಯ ಜನಸಾಗಾಟದ ಲಘು ವಾಹನಗಳು. ಇದು ಕಾಣ ಬರುತ್ತಾ ಇರುವುದು ಬಿ.ಸಿ.ರೋಡು- ‘ರ್ಮಸ್ಥಳ ಹೆದ್ದಾರಿಯಲ್ಲಿ.

ಉಜಿರೆಯಿಂದ ನೇರವಾಗಿ ಮಂಗಳೂರು ಅಥವಾ ಮಂಗಳೂರಿನಿಂದ ನೇರವಾಗಿ ಉಜಿರೆಗೆ ಪ್ರಯಾಣ ಮಾಡುವವರು ಬಸ್ಸುಗಳನ್ನೇ ಅವಲಂಬಿಸುತ್ತಾರೆ. ಆದರೆ ಬಿ.ಸಿ.ರೋಡಿನಿಂದ ಮಣಿಹಳ್ಳ, ವಗ್ಗ, ಕಾರಿಂಜ, ಮಡಂತ್ಯಾರ್, ಪುಂಜಾಲಕಟ್ಟೆ, ಕಾವಳಕಟ್ಟೆ, ಮಡಂತ್ಯಾರಿಗೆ ತೆರಳುವವರು ಮತ್ತು ಇನ್ನಿತರ ಹತ್ತಿರದ ಊರುಗಳಿಗೆ ಪ್ರಯಾಣ ಮಾಡುವವರು ಶಟ್ಲ್ ಬಸ್ಸುಗಳನ್ನೇ ಅವಲಂಬಿಸುವುದು ಸಾ‘ವಾಗದ ಕೆಲಸ. ಒಂದು ಕಾಲದಲ್ಲಿ ಈ ರಸ್ತೆಯಲ್ಲಿ ಅಂಬಾಸಿಡರ್ ಕಾರ್‌ಗಳ ಕಾರುಬಾರು ಜಾಸ್ತಿ ಇತ್ತು. ಬಂಟ್ವಾಳ ತಾಲೂಕಿನಲ್ಲೇ ಸುಮಾರು ೭೫೦ ಅಂಬಾಸಿಡರ್ ಕಾರುಗಳಿದ್ದವು. ಆದರೆ ಯಾವಾಗ ಕಾಂಟ್ರ್ಯಾಕ್ಟ್ ಕ್ಯಾರೇಜ್ ಬಸ್ಸುಗಳು ರಸ್ತೆಗಳಿಗೆ ಲಗ್ಗೆಯಿಟ್ಟವೋ ಆಗ ಅಂಬಾಸಿಡರ್ ಕಾರ್‌ಗಳ ಸಂಚಾರ ಕಡಿಮೆಯಾಯಿತು. ಮಂಗಳೂರು-ಪುತ್ತೂರು, ಮಂಗಳೂರು-ವಿಟ್ಲ, ಮಂಗಳೂರು-ಉಪ್ಪಿನಂಗಡಿಗಳಲ್ಲಿ ಈಗಲೂ ಕಾಂಟ್ರ್ಯಾಕ್ಟ್ ಕ್ಯಾರೇಜ್ ಬಸ್ಸುಗಳು ಎಡೆಬಿಡದೆ ಸಾಗುತ್ತಿದೆ. ಆದರೆ ಮಂಗಳೂರು-ಉಜಿರೆ ರಸ್ತೆಯಲ್ಲಿ ಈ ಬಸ್ಸುಗಳ ಸಂಖ್ಯೆಯೂ ಕಡಿಮೆ.

ಕೆಎಸ್‌ಆರ್‌ಟಿಸಿ ಬಸ್ಸುಗಳು ಕಂಟ್ರಾಕ್ಟ್ ಬಸ್ಸುಗಳಿಗೆ ಪೆ‘ಪೋಟಿ ಕೊಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಫಲ ಕಾಣಲಿಲ್ಲ. ಯಾಕೆಂದರೆ ಜನರು ಇರುವಾಗ ಬಸ್ಸುಗಳು ಬರುವುದು ಕಡಿಮೆ. ಬಂದರೆ ಸಾಲು ಸಾಲಾಗಿ ಬರುತ್ತದೆ. ಇಲ್ಲದಿದ್ದರೆ ಗಂಟೆಗಟ್ಟಲೆ ಇರುವುದಿಲ್ಲ. ಹಾಗಂತ ಆ ಪ್ರದೇಶದ ಜನರಿಗೆ ನಿತ್ಯ ಕೆಲಸ ಕಾರ್ಯಗಳಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ  ಪರ್ಯಾಯ ವ್ಯವಸ್ಥೆ ಅನಿವಾರ್ಯ. ಇತ್ತೀಚೆಗೆ ಕೆಲವು ತಿಂಗಳಿನಿಂದ ಈ ರಸ್ತೆಯಲ್ಲಿ ಜನರಿಗೆ ಅನುಕೂಲವಾಗುವಂತಹ ಟಾಟಾ ಮತ್ತು ಮಹೇಂದ್ರ ಸಂಸ್ಥೆಯ ಜನಸಾಗಾಟದ ಲಘು ವಾಹನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಬಂದಿದೆ.  ಮಡಂತ್ಯಾರುನಿಂದ ಬಿ.ಸಿ.ರೋಡಿನ ವರೆಗೆ ಜನರ ಅನುಕೂಲಕ್ಕಾಗಿಯೇ ಈ ವಾಹನಗಳು ಮಾಡಿದಂತಿದೆ. ಜನರಿಗೆ ಬೇಕಾದಲ್ಲಿ ನಿಲ್ಲುತ್ತದೆ. ಹೆಚ್ಚು ಹೊತ್ತು ನಿಲ್ದಾಣದಲ್ಲಿ ಚಾಪೆ ಹಾಕುವುದಿಲ್ಲ. ಯಾವುದಕ್ಕೂ ಸ್ಪ‘ ಇಲ್ಲ. ಬೆಳಿಗ್ಗೆ ೬ ಗಂಟೆಗೆ ಜನರ ಸೇವೆಯನ್ನು ಆರಂಭಿಸುವ ಈ ವಾಹನ ಚಾಲಕರು ಯಾವುದೇ ಕಿರಿಕಿರಿ ಮಾಡದೆ ಜನರಿಗೆ ಒಂದು ರೀತಿಯ ಉತ್ತಮ ಸೇವೆಯನ್ನೇ ಒದಗಿಸುತ್ತಾರೆ.

ಜನಸ್ನೇಹಿ ವಾಹನ : ಮೊದಲು ಕೆಲವೇ ವಾಹನಗಳಿದ್ದುದರಿಂದ ಜನರ ಬೇಡಿಕೆ ಜಾಸ್ತಿಯಾದಂತೆ ವಾಹನಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಬಿ.ಸಿ.ರೋಡು ಬಸ್ಸು ನಿಲ್ದಾಣದ ಬಳಿಯಿಂದಲೇ ಈ ವಾಹನಗಳ ಸಂಚಾರ ಆರಂ‘ವಾಗಿ ಬಂಟ್ವಾಳ ಬೆ‘ಪಾಸ್, ಜಕ್ರಿಬೆಟ್ಟು, ಮಣಿಹಳ್ಳ, ಪೊಯಿಲೊಡಿ, ಮೆ‘ಂದಾಲ, ಕೆಳಗಿನ ವಗ್ಗ, ವಗ್ಗ, ಮದ್ವ, ಪುಂಜಾಲಕಟ್ಟೆ, ಮಡಂತ್ಯಾರು ಹೀಗೆ ರಸ್ತೆಯ ಯಾವ ‘ಗದ ಜನರಿಗೂ ಸೇವೆ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಂಬಾಸಿಡರ್ ಕಾರು ಇರುವ ಅವಯಲ್ಲಿ ಹೇಗೆ ಜನರಿಗೆ ಅನುಕೂಲವಾಗಿ ಸೇವೆಗೆ ಸಿಗುತ್ತಿತ್ತೋ ಹಾಗೆಯೇ ಈ ವಾಹನಗಳು ಆ ‘ಗದ ಜನರ ಸೇವೆ ಮಾಡುತ್ತದೆ. ಈ ‘ಗದ ವಾಹನಗಳ ಚಾಲಕರಲ್ಲಿಯೂ ಒಗ್ಗಟ್ಟಿದೆ. ವಾಹನದಲ್ಲಿ ಬೆಳೆಬಾಳುವ ವಸ್ತುಗಳು ಬಿಟ್ಟು ಹೋದಲ್ಲಿ ಅದನ್ನು ಪುನಃ ಮತ್ತದೇ ವಾಹನದಲ್ಲಿ ಸಂಚರಿಸುವಾಗ ಅದರ ಮಾಲೀಕರಿಗೆ ತಲುಪಿಸುವಂತಹ ಸೇವೆಯೂ ಮಾಡುತ್ತಿದ್ದು ಈ ‘ಗದ ಜನ ಸ್ನೇಹಿ ವಾಹನವಾಗಿದೆ. ಹಿರಿಯ ನಾಗರಿಕರು, ಮಕ್ಕಳ ಜೊತೆ ಪ್ರಯಾಣಿಸುವವರಿಗಂತೂ ಇವರ ಸೇವೆಯು ಖುಷಿ ತಂದಿದೆ.

ಗಂಟೆಗಟ್ಟಲೆ ಜನರು ‘ರ್ಮಸ್ಥಳ ಬಸ್ಸಿಗಾಗಿ ಕಾಯುವ ಕಾಲ ಇತ್ತು. ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ತಡೆರಹಿತ ಬಸ್ಸು ಬಂದರೆ ಮುಖ್ಯ ಪೇಟೆಯ ಕಡೆಯಲ್ಲಿ ಇಳಿಯುವ ಜನರಿಗೆ ಮಾತ್ರ ಸಹಾಯವಾಗುತ್ತಿತ್ತು. ಶಟ್ಲ್ ಬಸ್ಸು ಬಂದರೆ ಮಾತ್ರ ಈ ‘ಗದ ಜನರಿಗೆ ಉಪಕಾರವಾಗುತ್ತಿತ್ತು. ಅದರೆ ಅದು ಮಂಗಳೂರಿನಿಂದ ಬಂದು ಬಿ.ಸಿ.ರೋಡಿನಲ್ಲಿ, ಪುಂಜಾಲಕಟ್ಟೆಯಲ್ಲಿ ಹೀಗೆ ಮುಖ್ಯ ಪೇಟೆ ಕಡೆ ಜಾಸ್ತಿ ಹೊತ್ತು ನಿಲ್ಲುತ್ತದೆ. ಆದರೆ ಈ ವಾಹನದಲ್ಲಿ ಅಂತಹ ಸಮಸ್ಯೆ ಇಲ್ಲ. ವಗ್ಗದ ವರೆಗೆ ೪ ಜನ ಇದ್ದರೂ ಸರಿ ಬಿ.ಸಿ.ರೋಡಿನಿಂದ ಅದರ ಪಯಣ ಆರಂ‘ವಾಗುತ್ತದೆ. ನಂತರ ವಗ್ಗದಿಂದ ಮಡಂತ್ಯಾರಿಗೆ ಹೋಗುವವರು ಬೇರೆಯೇ ಪ್ರಯಾಣಿಕರು ಸಿಗುತ್ತಾರೆ.

ಉದ್ಯೋಗ ಸೃಷ್ಟಿ : ಈ ಸಣ್ಣ ವಾಹನವು ಅದೆಷ್ಟೋ ಜನರಿಗೆ ಉದ್ಯೋಗವನ್ನು ಸೃಷ್ಟಿಸಿಕೊಟ್ಟಿದೆ. ರಿಕ್ಷಾಗಿಂತ ದೊಡ್ಡದಾಗಿರುವ ಈ ವಾಹನದ ಬೆಲೆ ಮೂರೂವರೆ ಲಕ್ಷದಿಂದ ನಾಲ್ಕು ಲಕ್ಷದ ಒಳಗೆ ಇದೆ. ಡಿಸೇಲ್ ಇಂಜಿನ್ ಆಗಿರುವ ಈ ವಾಹನ ಲೀಟರ್‌ಗೆ ೨೨ ಕಿ.ಮೀ. ದೂರ ಪ್ರಯಾಣ ಮಾಡುವ  ಸಾಮರ್ಥ್ಯ ಹೊಂದಿದೆ. ಹೀಗಾಗಿ ಒಬ್ಬ ವ್ಯಕ್ತಿ ಇದರ ಮಾಲಕನಾದರೆ ಬಾಡಿಗೆಗೆ ಓಡಿಸುವ ಅಥವಾ ಬಾಡಿಗೆಗೆ ನೀಡುವ ಮೂಲಕ ಜೀವನಕ್ಕೆ ಒಂದು ದಾರಿಯನ್ನೂ ಕಂಡುಕೊಳ್ಳಬಹುದು. ಸ್ವಂತಕ್ಕೂ ಪ್ರಯೋಜನವಾಗುತ್ತದೆ ಮತ್ತು ಇದರಿಂದ ಜನರಿಗೂ ಉಪಯೋಗವಾಗುತ್ತದೆ.

***

ಕಳೆದ ೬ ತಿಂಗಳಿನಿಂದ ನಾವು ಮಡಂತ್ಯಾರು-ಬಿ.ಸಿ.ರೋಡು ರಸ್ತೆಯಲ್ಲಿ ಜನರನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ. ನಮ್ಮದು ಟೂರಿಸ್ಟ್ ವಾಹನವಾಗಿದ್ದು ಸರಕಾರಕ್ಕೆ ನಾವೂ ತೆರಿಗೆಯನ್ನು ಕಟ್ಟುತ್ತಿದ್ದೇವೆ. ಇಲ್ಲಿನ ಜನರು ಒಳ್ಳೆಯ ಪ್ರೋತ್ಸಾಹ ನೀಡುತ್ತಿದ್ದಾರೆ. ಮೊದಮೊದಲು ನಮ್ಮ ವಾಹನಗಳಲ್ಲಿ ಬರಲು ಜನರು ಹಿಂeರಿಯುತ್ತಿದ್ದರು. ಆದರೆ ಈಗ ಅವರಿಗೆ ಅದೇ ಹವ್ಯಾಸವಾಗಿ ಬಿಟ್ಟಿದೆ. ಬೆಳಿಗ್ಗೆ iತ್ತು ಸಂಜೆಯ ಹೊತ್ತು ಕೆಲಸಕ್ಕೆ ಹೋಗುವವರು ತುಂಬಾ ಜನರು ಇರುತ್ತಾರೆ. ನಮ್ಮ ಈ ಸೇವೆಯಿಂದ ಅವರಿಗೂ ಸಂತೋಷವಾಗಿದೆ. ನಿಗದಿತ ದರದಲ್ಲೇ ಜನರಿಗೆ ಸೇವೆಯನ್ನು ನೀಡುತ್ತಿದ್ದೇವೆ. ಡಿಸೀಲ್ ಇಂಜಿನ್ ಆಗಿದ್ದು ಒಳ್ಳೆಯ ಮೆ‘ಲೇಜು ಕೊಡುವ ವಾಹನವಾಗಿದ್ದು ಈ ‘ಗದ ಜನರಿಗೆ ಹಳೆಯ ಕಾಲದಲ್ಲಿ ಅಂಬಾಸಿಡರ್ ಸೇವೆಯು ಇದ್ದ ಹಾಗೆ ಈ ವಾಹನದ ಸೇವೆಯು ದೊರೆಯುತಿದೆ ಎನ್ನುತ್ತಾರೆ ವಾಹನದಲ್ಲಿ ಬರುವ ಪ್ರಯಾಣಿಕರು.
– ಗುಣಕರ ಪೂಜಾರಿ, ವಾಹನ ಚಾಲಕರು

***

ನಮ್ಮದು ಊರು ಬಡಗುಂಡಿ. ದೆ‘ನಂದಿನ ಕೆಲಸಗಳಿಗೆ ಬಿ.ಸಿ.ರೋಡು ನಗರಕ್ಕೆ ಹೋಗುವುದರಿಂದ ನಾವಿರುವ ಬಸ್ಸು ನಿಲ್ದಾಣದಲ್ಲಿ ತಡೆರಹಿತ ಬಸ್ಸುಗಳಿಗೆ ನಿಲುಗಡೆ ಇಲ್ಲ. ಶಟ್ಲ್ ಬಸ್ಸುಗಳನ್ನು ಕಾಯುವುದೇ ಆಗುತ್ತದೆ. ಒಂದು ವೇಳೆ ಬಸ್ಸಿನಲ್ಲಿ ಜನರು ಪೂರ್ತಿಯಾಗಿದ್ದರೆ ನಿಲ್ಲಿಸುವುದಿಲ್ಲ. ನೇರವಾಗಿ ಹೋಗುತ್ತಾರೆ. ಅದೇ ನಮಗೆ ತೊಂದರೆ. ಆದ್ದರಿಂದ ಈಗ ಮಿನಿ ಟೂರಿಸ್ಟ್ ವಾಹನದಿಂದ ಈಗ ಕೆಲಸ ಸಮಯಕ್ಕೆ ಸರಿಯಾಗಿ ಹೋಗಲಿಕ್ಕೆ ಆಗುತ್ತದೆ. ದರವೇನೂ ಅಷ್ಟೇನೂ ಹೆಚ್ಚು ಇಲ್ಲ.
– ದರ್ನಪ್ಪ ಗೌಡ, ಬಡಗುಂಡಿ

***

ದ್ವಿಚಕ್ರ ಹಾಗೂ ಇತರ ಯಾವುದೇ ಸ್ವಂತ ವಾಹನಳು ಇಲ್ಲದವರಿಗೆ ಈ ವಾಹನ ನಮ್ಮ ರಸ್ತೆಯಲ್ಲಿ ಸಂಚರಿಸುವುದರಿಂದ ತುಂಬಾ ಪ್ರಯೋಜನವಾಗಿದೆ. ಬಸ್ಸನ್ನು ನಂಬಿ ತಮ್ಮ ಕಚೇರಿಗಳಿಗೆ ಸಮಯಕ್ಕೆ ಸರಿಯಾಗಿ ಹೋಗಲು ಆಗುತ್ತಿರಲಿಲ್ಲ. ಬಸ್ಸುಗಳು ಕೇವಲ ನಿಲ್ದಾಣ ಇದ್ದಲ್ಲಿ ಮಾತ್ರ ನಿಲ್ಲುವುದು. ಆದರೆ ಈ ವಾಹನ ಆಗಲ್ಲ ನಮ್ಮ ಹೆದ್ದಾರಿ ರಸ್ತೆಯ ಬದಿಯಲ್ಲಿ ನಮಗೆ ಬೇಕಾದ ಸ್ಥಳದಲ್ಲಿ ನಿಲ್ಲಿಸುತ್ತಾರೆ ಹಾಗೆಯೇ ಜನರನ್ನು ಹತ್ತಿಸುತ್ತಾರೆ. ಹಿರಿಯ ನಾಗರಿಕರಿಗೆ ಬಸ್ಸನ್ನು ಹತ್ತುವುದೂ ಕಷ್ಟ. ಆದರೆ ಇದು ಹಾಗಲ್ಲ ಆರಾಮವಾಗಿ ಇದಕ್ಕೆ ಹತ್ತಬಹುದು.. ಇಳಿಯಬಹುದು ಹಾಗಾಗಿ ಇದೊಂದು ನಮ್ಮೂರಿನ ರಸ್ತೆಯ ಜನಸ್ನೇಹಿ ವಾಹನವಾಗಿದೆ.
– ಹರೀಶ್ ಕುಲಾಲ್, ಕಾಡಬೆಟ್ಟು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here