ಬಂಟ್ವಾಳ, ಆ. ೧: ರಸ್ತೆ ಅಪಘಾತದಿಂದಲ್ಲಿ ಗಾಯಗೊಂಡಿದ್ದ ಉಸ್ತಾದ್ ವೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಇದೀಗ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹಿರಿಯ ಧಾರ್ಮಿಕ ವಿದ್ವಾಂಸ, ಅಡ್ಡೂರಿನ ಉಸ್ತಾದ್ ಯೂಸುಫ್ ಹಾಜಿ ಮೃಪಟ್ಟವರು. ಇವರು ಇಂದು ಸಂಜೆ ವೇಳೆಗೆ ಬಿ.ಸಿ.ರೋಡಿನ ರಸ್ತೆ ದಾಟಲು ನಿಂತಿದ್ದ ವೇಳೆ ಕೈಂಕಬದ ಕಡೆಯಿಂದ ಬಂದ ಕಾರು ಢಿಕ್ಕಿಯಾಗಿದೆ. ಪರಿಣಾಮ ಗಾಯಗೊಂಡಿದ್ದ ಇವರನ್ನು ತಕ್ಷಣ ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿತಾಗದೇ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.