ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಿಟ್ಲ ವಲಯ ಉಕ್ಕುಡ ಒಕ್ಕೂಟದ ಆಶ್ರಯದಲ್ಲಿ ಪರಿಸರ ಸಂರಕ್ಷಣಾ ಕಾರ್‍ಯಕ್ರಮವು ನಂದಿನಿ ಜ್ಞಾನ ವಿಕಾಸ ಕೇಂದ್ರದ ನೇತೃತ್ವದಲ್ಲಿ ವಿಟ್ಲ ಕಾಶಿಮಠದಲ್ಲಿ ನಡೆಯಿತು.
ಈ ಕಾರ್‍ಯಕ್ರಮವನ್ನು ಕಾಶಿಮಠ ಶ್ರೀಕಾಶಿ ಯುವಕ ಮಂಡಲದ ಅಧ್ಯಕ್ಷ ಕೇಶವ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಾನ್ ಡಿ’ಸೋಜಾ ಗಿಡಗಳನ್ನು ನೆಟ್ಟು ಪರಿಸರ ರಕ್ಷಣೆ ಮಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಪ್ರಜೆಯು ವಹಿಸಬೇಕು ಎಂದರು. ಜಾನುವಾರು ಅಧಿಕಾರಿ ಈಶ್ವರ ಭಟ್ ಕಾಶಿಮಠ, ಯೋಜನೆಯ ವಿಟ್ಲ ವಲಯ ಮೇಲ್ವಿಚಾರಕ ರಮೇಶ್, ವಲಯಾಧ್ಯಕ್ಷ ಜನಾರ್ದನ ಪದ್ಮಶಾಲಿ, ಒಕ್ಕೂಟದ ಅಧ್ಯಕ್ಷ ಜಗನ್ನಾಥ, ಪದಾಧಿಕಾರಿಗಳಾದ ದಯಾನಂದ ಮತ್ತು ಕಾವೇರಿ, ಸೇವಾ ಪ್ರತಿನಿಧಿ ಹೇಮಲತಾ ಉಪಸ್ಥಿತರಿದ್ದರು.
ಮಾಲತಿ ಸ್ವಾಗತಿಸಿದರು. ಕಲಾವತಿ ವಂದಿಸಿದರು. ಸಾವಿತ್ರಿ ಕಾರ್‍ಯಕ್ರಮ ನಿರೂಪಿಸಿದರು.


