ವಿಟ್ಲ: ಜಗತ್ತನ್ನು ಬೆಳಗುವವ ಸೂರ್ಯ, ಮನಸ್ಸಿಗೆ ಉಲ್ಲಾಸ ತರುವವನು ಚಂದ್ರ, ಮನುಷ್ಯನ ಒಳಗಿರುವ ಆತ್ಮ ಜ್ಯೋತಿಯಿಂದ ಎಲ್ಲವನ್ನು ನೋಡಲು ಸಾಧ್ಯವಾಗುತ್ತದೆ. ಮಾನವನು ಅಂತರಂಗದಲ್ಲಿರುವ ಬೆಳಕನ್ನು ಉಳಿಸಿ ಬೆಳೆಸಿಕೊಳ್ಳಬೇಕು. ಯಶಸ್ಸಿಗೆ ಶ್ರದ್ಧೆಯೆಂಬ ಕೀಲಿ ಕೈ ಬೇಕು. ಭಾರತವೇ ಒಂದು ಜ್ಯೋತಿ, ಅದು ವಿಶ್ವಕ್ಕೆ ಆಧ್ಯಾತ್ಮದ ಅವಿನಾಶಿ ಬೆಳಕನ್ನು ನೀಡಿದೆ ಎಂದು ನುಡಿದರು.
ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಹಾಗೂ ಗ್ರಾಮೋತ್ಸವದ ಅಂಗವಾಗಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಆಯೋಜಿಸಿದ ಬಂಟ್ವಾಳ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಭೆಯಲ್ಲಿ ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್, ಕ್ಷೇತ್ರದ ಕಾರ್ಯನಿರ್ವಾಹಕರಾದ ಪದ್ಮನಾಭ ಒಡಿಯೂರು, ಶಾಲಾ ಮುಖ್ಯೋಪಾಧ್ಯಾಯರಾದ ಜಯಪ್ರಕಾಶ ಶೆಟ್ಟಿ ಎ. ಉಪಸ್ಥಿತರಿದ್ದರು.
’ನಾನು ಮತ್ತು ಭಾರತ’ ಎಂಬ ವಿಷಯವನ್ನು ಪ್ರಬಂಧ ವಿಷಯವಾಗಿ ಆಯ್ಕೆ ಮಾಡಲಾಯಿತು. ಬಂಟ್ವಾಳ ತಾಲೂಕಿನಿಂದ ಆಗಮಿಸಿದ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮವನ್ನು ವಿದ್ಯಾಪೀಠದ ಅಚಿಂತ್ಯಾಗೌರಿ ಸ್ವಾಗತಿಸಿದರು. ರಜತ್ ವಂದಿಸಿದರು. ದೀಪಶ್ರೀ ನಿರೂಪಿಸಿದರು. ಶಿಕ್ಷಕ-ಶಿಕ್ಷಕಿಯರು ಸಹಕರಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here