ಶಾಲಾ ಮಕ್ಕಳ ಖಾಸಗಿ ವಾಹನ ಚಾಲಕ ಮತ್ತು ಮಾಲಕರ ಸಂಘ ದ.ಕ ಬಂಟ್ವಾಳ ಇವರ ವತಿಯಿಂದ ಶಾಲಾ ಮಕ್ಕಳ ಸಂಚಾರಕ್ಕೆ ಕಾನೂನಿನ ಪ್ರಕಾರ ನಿಯಮಗಳನ್ನು ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿ ನಾಳೆಯಿಂದ ಎರಡು ದಿನಗಳ ಕಾಲ ಸಾಂಕೇತಿಕವಾಗಿ ಪ್ರತಿಭಟನೆ ನಡೆಯಲಿದೆ ಎಂದು ಟೆಂಪೋ ಮಾಲಕ ಚಾಲಕರ ಸಂಘದ ಅಧ್ಯಕ್ಷ ಸದಾನಂದ ನಾವೂರ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕು ಶಾಲಾ ಮಕ್ಕಳ ವಾಹನ ಚಾಲಕರು ಹಾಗೂ ಮಾಲಕರಿಗೆ ಪೊಲೀಸ್ ಇಲಾಖೆ ಕೋರ್ಟ್ ಅದೇಶದ ನೆಪದಲ್ಲಿವಾಹನ ತಪಾಸಣೆ ಮಾಡಿ ನಿಲ್ಲಿಸುತ್ತಿದ್ದಾರೆ. ಇದರಿಂದ ಶಾಲೆಗೆ ಮಕ್ಕಳನ್ನು ಮುಟ್ಟಿಸುವಾಗ ತಡವಾಗುತ್ತದೆ .ಅದಲ್ಲದೆ ಚಾಲಕರ ಲೈಸನ್ಸ್ ಮುಟ್ಟು ಗೋಲು ಹಾಕಿ, ವಾಹನ ದ ಮೇಲೆ ಕೇಸ್ ದಾಖಲಿಸಿ ನಮಗೆ ರೂ 2000 ದಿಂದ 5000 ವರೆಗೆ ಕೋರ್ಟ್ ದಂಡ ಹಾಕುತ್ತಿದ್ದಾರೆ. ಇದರಿಂದ ಶಾಲಾ ಮಕ್ಕಳನ್ನು ನಮಗೆ ಶಾಲೆಗೆ ಕರೆದುಕೊಂಡು ಹೋಗಲು ಕಷ್ಷವಾಗುತ್ತಿದೆ ಎಂದು ಶಾಲಾ ಮಕ್ಕಳ ವಾಹನ ಚಾಲಕರ ಅಳಲು.

ನಮಗೆ ಶಾಲಾ ಮಕ್ಕಳನ್ನು ವಾಹನ ಮಿತಿಯ ಎರಡು ಪಟ್ಟು ಕರೆದುಕೊಂಡು ಹೋಗಲು ಅನುಮತಿ ನೀಡುವಂತೆ ಅಗ್ರಹಿಸಿ ಬಂಟ್ವಾಳ ಖಾಸಗಿ ಶಾಲಾ ಮಕ್ಕಳ ವಾಹನ ವನ್ನು ಜುಲೈ 11 ಗುರುವಾರ ಹಾಗೂ ಜುಲೈ 12 ಶುಕ್ರವಾರ ದಂದು ನಮ್ಮ ವಾಹನಗಳನ್ನು ನಿಲ್ಲಿಸಲು ನಿರ್ದರಿಸಿದ್ದೇವೆ. ಇದಕ್ಕೆ ಬಂಟ್ವಾಳ ತಾಲೂಕಿನ ಎಲ್ಲಾ ಶಾಲಾ ವಾಹನ ಚಾಲಕ , ಮಾಲಿಕರು ಹಾಗೂ ಮಕ್ಕಳ ಪೋಷಕರು ಸಹಕರಿಸಬೇಕಾಗಿ ವಿನಂತಿಯನ್ನು ಮಾಲೀಕರು ತಿಳಿಸಿದ್ದಾರೆ.
ಮಂಗಳೂರು ಶಾಲಾ ಮಕ್ಕಳ ವಾಹನ ಚಾಲಕರು ಅನಿರ್ದಿಷ್ಟವಾದಿ ಮುಷ್ಕರವನ್ನು ಕೈಗೊಂಡಿದ್ದು ಇದಕ್ಕೆ ಬಂಟ್ವಾಳ ದ ಶಾಲಾ ಮಕ್ಕಳ ವಾಹನ ಚಾಲಕರ ಬೆಂಬಲ ಘೋಷಿಸಿದೆ.
ಪೋಲೀಸರ ಈಕ್ರಮದಿಂದ ಸಾಕಷ್ಟು ತೊಂದರೆ ಯಾಗುತ್ತಿದ್ದು ಈ ಬಗ್ಗೆ ನಿಯಮದಲ್ಲಿ ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿ
ನಾಳೆ ಜುಲೈ 11 ರಂದು ಬೆಳಿಗ್ಗೆ 10ಗಂಟೆಯ ವೇಳೆ ಬಿಸಿರೋಡಿನ ಲ್ಲಿ ಎ.ಎಸ್. ಪಿ.ಸೈದುಲು ಅಡಾವತ್ ತಹಶೀಲ್ದಾರ್ ರಶ್ಮಿ ಅವರಿಗೆ ಮನವಿ ಮಾಡಲಾಗುವುದು ಎಂದು ಟೆಂಪೋ ಚಾಲಕಮಾಲಕರ ಸಂಘದ ಅಧ್ಯಕ್ಷ ಸದಾನಂದ ನಾವೂರ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here