Thursday, October 26, 2023

ಸಿದ್ದಕಟ್ಟೆ-ರಾಯಿ ಯಕ್ಷಾಭಿಮಾನಿಗಳು: ದಿ. ರಮೇಶ್ ಭಟ್ ಮಾದೇರಿ ಸಂಸ್ಮರಣೆ

Must read

ಬಂಟ್ವಾಳ: ಸಮಾಜ ಸೇವಕರಾಗಿ ಸ್ವಾರ್ಥ ರಹಿತ ಸೇವೆ ಮಾಡಿ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ ರಮೇಶ್ ಭಟ್ ಮಾದೇರಿ ಅವರ ಸರಳ, ಸಜ್ಜನಿಕೆಯ ಜೀವನ ಇತರರಿಗೆ ಮಾದರಿಯಾಗಿದೆ. ಅವರ ಸಂಸ್ಮರಣೆ ಕಾರ್ಯ ಅರ್ಥಪೂರ್ಣವಾಗಿದೆ ಎಂದು ಸಿದ್ದಕಟ್ಟೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಅವರು ಹೇಳಿದರು.
ಸಿದ್ದಕಟ್ಟೆ-ರಾಯಿ ಯಕ್ಷಾಭಿಮಾನಿಗಳು ಇವರಿಂದ ಸಿದ್ದಕಟ್ಟೆ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜೂ.30ರಂದು ಸಂಜೆ ನಡೆದ ಹಿರಿಯ ಯಕ್ಷಗಾನ ಅರ್ಥಧಾರಿ, ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ದಿ. ರಮೇಶ್ ಭಟ್ ಮಾದೇರಿ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರ. ಅರ್ಚಕ ರಾಮಚಂದ್ರ ಭಟ್ ಅವರು ಮಾತನಾಡಿ, ಶುದ್ಧ ಮನಸ್ಸಿನಿಂದ ಮಾಡಿದ ಸತ್ಕಾರ್ಯಗಳು ಭಗವಂತನಿಗೆ ಪ್ರೀತ್ಯರ್ಥವಾಗಿರುತ್ತದೆ. ಅಂತಹ ಸತ್ಕರ್ಮಗಳಿಂದ ರಮೇಶ್ ಭಟ್ ಅವರು ಸ್ಮರಣೀಯರಾಗಿದ್ದಾರೆ. ಬಡಜನರ ಏಳಿಗೆಗೆ ಮತ್ತು ಯಕ್ಷಗಾನಕ್ಕೆ ಅವರ ಕೊಡುಗೆ ಅನನ್ಯ ಎಂದರು.
ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಮಾತನಾಡಿ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಮಾತನಾಡಿ, ಕಿರಿಯ ಕಲಾವಿದರಿಗೆ ಪ್ರೋತ್ಸಾಹ ನೀಡಿ ಅವರನ್ನು ಬೆಳೆಸಿದವರು ರಮೇಶ್ ಭಟ್. ಸಾತ್ವಿಕ ಗುಣದ ಅವರು ನಡೆ, ನುಡಿಯಲ್ಲಿ ಸಾಮ್ಯತೆ ಹೊಂದಿದವರು. ಅವರ ಸಂಸ್ಮರಣೆ ಎಲ್ಲರಿಗೂ ದಾರಿದೀಪವಾಗಿದೆ ಎಂದು ಹೇಳಿದರು.
ಪ್ರಗತಿಪರ ಕೃಷಿಕ ಧರ್ಣಪ್ಪ ಶೆಟ್ಟಿ ಪೂವಳ, ಪ್ರದೀಪ್ ಭಟ್ ಮಾದೇರಿ, ಪ್ರಫುಲ್ಲ ರೈ ಮಂಜನದೊಟ್ಟು, ಸಂಘಟಕ ಹರಿಪ್ರಸಾದ್ ರಾವ್,ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರಾಜೇಶ್ ಶೆಟ್ಟಿ ಕೊನೆರೊಟ್ಟು, ರವಿಶಂಕರ್ ಭಟ್ ರಾಯಿ, ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಸಚ್ಚಿದಾನಂದ ಭಟ್ ಸಿದ್ದಕಟ್ಟೆ, ಪ್ರಭಾಕರ ಪ್ರಭು, ಸೀತಾರಾಮ ಶೆಟ್ಟಿ, ದುರ್ಗಾದಾಸ್ ಶೆಟ್ಟಿ ಮಾವಂತೂರು, ವಸಂತ ಕುಮಾರ್ ಅಣ್ಣಳಿಕೆ, ದುರ್ಗಾದಾಸ್ ಶೆಟ್ಟಿ ಕರಿಂಕಿಜೆ,ರಾಮಚದ್ರ ಶೆಟ್ಟಿಗಾರ್, ಹರೀಶ್ ಶೆಟ್ಟಿ, ಮೈಕಲ್ ಡಿಕೋಸ್ತ, ಪರಮೇಶ್ವರ ಹೊಳ್ಳ, ಅರುಣಾ ಎಸ್.ಶೆಟ್ಟಿ, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಪ್ರೇಮ್‌ರಾಜ್ ಕೊಲ, ಸದಾಶಿವ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ಡಾ| ಯೋಗೀಶ್ ಕೈರೋಡಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಶೆಟ್ಟಿ ವಂದಿಸಿದರು. ಬಳಿಕ ಸಂಸ್ಮರಣೆ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಅತಿಕಾಯ ಮೋಕ್ಷ ನಡೆಯಿತು.

More articles

Latest article