ಸಜಿಪ ಜನಸೇವಾ ಚಾರಿಟೇಬಲ್ ಟ್ರಸ್ಟ್ ನಿಂದ
ಮಾಹಿತಿ ಕಾರ್ಯಾಗಾರ: ಲಾಂಛನ ಅನಾವರಣ

ಬಂಟ್ವಾಳ : ಒಳ್ಳೆಯ ಚಿಂತನೆಗಳಿಗೆ ಸಾಮಾಜಿಕ ಬೆಂಬಲ ಸದಾ ಇರುತ್ತದೆ,ಸಜಿಪ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪನೆಯೇ ಇದಕ್ಕೆ ನಿದರ್ಶನ ಎಂದು ಬಂಟ್ವಾಳ ಶಾಸಕರ ಆಪ್ತಸಹಾಯಕ ದಿನೇಶ್.ಎಂ. ಹೇಳಿದರು.
ಸಜಿಪ ಮೂಡ ಗ್ರಾಮದ ಬೇಂಕೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಟ್ರಸ್ಟ್ ನ ನೂತನ ಲಾಂಛನವನ್ನು ಅನಾವರಣಗೊಳಿಸಿ ಮಾತನಾಡಿದರು.
ಗ್ರಾಮದ ಬಡ ಫಲಾನುಭವಿಗಳು ಹಾಗೂ ಸರ್ಕಾರದ ನಡುವೆ ಟ್ರಸ್ಟ್ ಕೊಂಡಿಯಂತೆ ಕೆಲಸ ಮಾಡಲಿ‌ ಎಂದ ಅವರು,ಗ್ರಾಮದ ಜನತೆ ಇದಕ್ಕೆ ಸೂಕ್ತ ಸ್ಪಂದನೆ ನೀಡುವಂತಾಗಲಿ ಎಂದು ಹಾರೈಸಿದರು.
ಟ್ರಸ್ಟಿ ಶ್ರೀಕಾಂತ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಸಜಿಪ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕೊಣಾಜೆ ಯುವಜನ ಸೇವಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ನಮಿತಾ ಶ್ಯಾಂ ಮಾತನಾಡಿ, ಟ್ರಸ್ಟ್ ಮೂಲಕ ಜನಸೇವೆ ಮಾಡುವ ಕಾರ್ಯದಿಂದ ಪುಣ್ಯ ದೊರಕುತ್ತದೆ, ಸಜಿಪ ಜನ ಸೇವಾ ಟ್ರಸ್ಟ್ ನಲ್ಲಿ ತೊಡಗಿಸಿಕೊಂಡವರೆಲ್ಲರೂ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಮಿತ್ರ ಕವಿತಾ ಟಿ.ರೈ ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಯೋಜನೆಯ ಕುರಿತಾಗಿ ಮಾಹಿತಿ ನೀಡಿದರು. ವಿಮಾ ಪ್ರತಿನಿಧಿ ಉಮೇಶ್ ನಿರ್ಮಲ್ ಆರೋಗ್ಯ ವಿಮೆಯ ಕುರಿತಾಗಿ ಮಾಹಿತಿ ನೀಡಿದರು.
ಸಜೀಪ ಜನಸೇವಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಯಶವಂತ ದೇರಾಜೆ ಯವರು ಪ್ರಾಸ್ತಾವಿಕ ವಾಗಿ ಮಾತನಾಡಿ, ನಾಲ್ಕು ‌ಗ್ರಾಮಗಳ ನೊಂದವರ ಕಣ್ಣೀರು ಒರೆಸುವ ಕಾರ್ಯವನ್ನು ನಿರಂತರವಾಗಿ ನಡೆಸಲಿದೆ. ಜೊತೆಯಲ್ಲಿ ಯಾವುದೇ ಇಲಾಖೆಗಳು ಅನುಷ್ಠಾನ ಗೊಳಿಸುವ ಸರ್ಕಾರಿ ಯೋಜನೆಗಳು ಗ್ರಾಮಸ್ಥರಿಗೆ ತಲುಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯೋನ್ಮುಖವಾಗಲಿದೆ, ಇದಕ್ಕೆ ಪೂರಕವಾಗಿ‌ ನಾಲ್ಕು ಗ್ರಾಮಗಳ ಪ್ರತೀ ಮನೆಯ ಸಂಪೂರ್ಣ ಮಾಹಿತಿ‌ ಸಂಗ್ರಹಿಸುವ ಕಾರ್ಯ ಶೀಘ್ರ ನಡೆಯಲಿದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಣೆಮಂಗಳೂರು ವಲಯ ಮೇಲ್ವಿಚಾರಕಿ ಅಮಿತಾ,
ಕಂದಾಯ ಇಲಾಖೆಯ ಶ್ರೀನಿವಾಸ್ , ಟ್ರಸ್ಟಿನ ಉಪಾಧ್ಯಕ್ಷ ವಿಶ್ವನಾಥ ಬೆಳ್ಚಡ, ಟ್ರಸ್ಟಿಗಳಾದ ನವೀನ್ ಸುವರ್ಣ, ಸುನೀತಾ ಶೆಟ್ಟಿ ಮಾರ್ನಬೈಲ್, ಭರತ್ ಅಂಚನ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟ್ರಸ್ಟಿ ಸುರೇಶ್
ಬಂಗೇರ ಸ್ವಾಗತಿಸಿದರು.
ದೀಪಕ್ ಕೋಟ್ಯಾನ್ ವಂದಿಸಿದರು. ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಕಾರ್ಯಕ್ರ‌ಮ ನಿರ್ವಹಿಸಿದರು.
ಇದೇ ವೇಳೆ ನಾಲ್ಕೂ ಗ್ರಾಮಗಳ ಜನತೆಯ ಮನೆಯ ವಿವರವನ್ನು ಸಂಗ್ರಹಿಸುವ ಸಮೀಕ್ಷಾ ಪತ್ರವನ್ನು ಗ್ರಾಮದ ಪ್ರಮುಖರಿಗೆ ವಿತರಿಸಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here