Thursday, October 26, 2023

ವಿಟ್ಲ: ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Must read

ವಿಟ್ಲ: ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಕೆ.ಐ ಸುಬ್ರಹ್ಮಣ್ಯ ಭಟ್ ಸಭಾಧ್ಯಕ್ಷತೆ ವಹಿಸಿ ಸಂಘವು ವರದಿ ಸಾಲಿನಲ್ಲಿ 3.8 ಲಕ್ಷ ಲಾಭ ಹೊಂದಿದ್ದು ಶೇ.25 ಶೇಕಡಾ ಡಿವಿಡೆಂಡ್ ಘೋಷಿಸಿದರು.
ಈ ಕಾರ್‍ಯಕ್ರಮದಲ್ಲಿ ಸಂಘದ ಹಿರಿಯ ಸಕ್ರಿಯ ಸದಸ್ಯ ಕುಂಞ ಬ್ಯಾರಿ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಒಕ್ಕೂಟದ ವಿಸ್ತರಣಾಧಿಕಾರಿ ಪ್ರತಿಭಾ ಒಕ್ಕೂಟ ಮತ್ತು ಸರಕಾರದಿಂದ ರೈತರಿಗೆ ಸಿಗುವ ಅನುದಾನ ಮತ್ತು ಸೌಲಭ್ಯಗಳ ಬಗ್ಗೆ ವಿವರಿಸಿದರು. ಒಕ್ಕೂಟದ ವೈದ್ಯಾಧಿಕಾರಿ ಸತೀಶ್ ರಾವ್ ದನಗಳ ಆರೋಗ್ಯ ಮತ್ತು ಆಹಾರದ ಬಗ್ಗೆ ವಿವರಣೆ ನೀಡಿದರು.
ಸಂಘದ ನಿರ್ದೇಶಕರುಗಳಾದ ಮೋಹನ ಕಾಯರ್‌ಮಾರ್, ಗಣೇಶ ಶೆಟ್ಟಿ, ಜಯರಾಮ ಬಲ್ಲಾಳ್, ಬಾಲಚಂದ್ರ ನಾಯಕ್, ಲೋಕನಾಥ ಶೆಟ್ಟಿ, ಆನಂದ ಶೆಟ್ಟಿ, ಲಿಂಗಪ್ಪ ನಾಯ್ಕ, ಪುಷ್ಪರಾಜ್, ಗಿರಿಜಾ ಮತ್ತು ರೇವತಿ ವೇದಿಕೆಯಲ್ಲಿದ್ದರು. ಕಾರ್‍ಯದರ್ಶಿ ರಾಧಾಕೃಷ್ಣ ನಾಯಕ್ ಸ್ವಾಗತಿಸಿ, ವರದಿ ವಾಚಿಸಿದರು. ಉಪಾಧ್ಯಕ್ಷ ಗೋಪಾಲ ಎಂ ವಂದಿಸಿದರು.

 

More articles

Latest article